Vivekananda Law College, Puttur, Dakshina Kannada

ನ್ಯಾಯಧಾರಾ ಯೋಜನೆಯ ಕುರಿತು ಮಾಹಿತಿ ಕಾರ್ಯಕ್ರಮ

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪರಿಕಲ್ಪನೆ ಆದ ’ನ್ಯಾಯಧಾರಾ’ ಯೋಜನೆಯ ಕುರಿತು ಮಾಹಿತಿ ಮತ್ತು ಕಾನೂನು ಮಾಹಿತಿ ಕಾರ್ಯಕ್ರಮ, ನರೇಂದ್ರ ಪದವಿಪೂರ್ವ ಕಾಲೇಜು, ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 23-11-2018 ರಂದು ನಡೆಯಿತು.

ವಿವೇಕಾನಂದ ಕಾನೂನು ಕಾಲೇಜಿನ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ ಇವರು ಮಾತನಾಡಿ, ಕಾನೂನು ಮಹಾವಿದ್ಯಾಲಯದಲ್ಲಿ ’ನ್ಯಾಯಧಾರಾ’ ಎಂಬ ಒಂದು ಹೊಸ ಯೋಜನೆಯನ್ನು ಆರಂಭಿಸಿರುತ್ತಾರೆ. ಇದರ ಮೂಲ ಉದ್ದೇಶ ಕಾನೂನು ವಿದ್ಯಾರ್ಥಿಗಳನ್ನು ನ್ಯಾಯಾಧೀಶ ಹುದ್ದೆಗೆ ಸಿದ್ದಪಡಿಸುವುದು ಮತ್ತು ಇದಕ್ಕೆ ಬೇಕಾದ ವಿಷಯಗಳನ್ನು ಹಾಗೂ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅಂಶಗಳನ್ನು ಬೋಧಿಸುವುದು ಆಗಿದೆ. ಈ ಈ ಯೋಜನೆಯಲ್ಲಿ 5 ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಹಾಗೂ 3 ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಆರಂಭದಿಂದಲೇ ತರಬೇತಿ ನೀಡಲಾಗುತ್ತದೆ. ಈ ವಿಷಯಗಳನ್ನು ಖ್ಯಾತ ವಕೀಲರು ಹಾಗೂ ಕಾನೂನು ಅಧ್ಯಾಪಕರು ಬೋಧಿಸುತ್ತಾರೆ. ಇದಕ್ಕಾಗಿ ಪ್ರತಿ ದಿನ ಪಾಠ ಪ್ರವಚನಗಳನ್ನು ಹೊರತುಪಡಿಸಿ, ಒಂದು ಗಂಟೆಯನ್ನು ಮೀಸಲಿಡಲಾಗುವುದು ಎಂದು ಹೇಳಿದರು.

ನಂತರ ಮಾತನಾಡುತ್ತಾ, ಕಾನೂನು ವಿದ್ಯಾರ್ಥಿಗಳು ಆಡಳಿತಾಂಗ, ಶಾಸಕಾಂಗ ಮತ್ತು ನ್ಯಾಯಾಂಗದಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದರೆ, ಗಾಂಧೀಜಿ ಕಂಡ ಕನಸು (ರಾಮರಾಜ್ಯ) ನನಸಾಗುತ್ತದೆ ಎಂದು ಹೇಳಿದರು. ನಂತರ ಭಾರತೀಯ ಸಂವಿಧಾನ ಮತ್ತು ಅದರ ಮಹತ್ವದ ಕುರಿತು ಮಾಹಿತಿ ನೀಡುತ್ತಾ, ಹಾಗೆಯೇ ಹಲವಾರು ಕಾನೂನುಗಳು ನಮ್ಮ ನಿತ್ಯ ಜೀವನದಲ್ಲಿ ಹಿಂಬಾಲಿಸುತ್ತಿರುತ್ತದೆ ಹಾಗೂ ಕಾನೂನಿಗೆ ಗೌರವ ಕೊಟ್ಟಲ್ಲಿ ಜೀವನ ಸುಗಮವಾಗಿರುತ್ತದೆ. ಸಂವಿಧಾನ ಶಿಲ್ಪಿಗಳು ನಂಬಿದ ಕನಸನ್ನು ರೂಢಿಗೆ ತರುವುದು ಸುಲಭ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ, ಕಾನೂನು ಕಾಲೇಜಿನ ಪ್ರಾಂಶುಪಾಲರಾದ ರಾಜೇಂದ್ರಪ್ರಸಾದ್ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Event Calendar

<< Apr 2019 >>
MTWTFSS
1 2 3 4 5 6 7
8 9 10 11 12 13 14
15 16 17 18 19 20 21
22 23 24 25 26 27 28
29 30 1 2 3 4 5
Highslide for Wordpress Plugin