ಓರಿಯಂಟಲ್ ಲೆಕ್ಚರ್ ಸಿರೀಸ್

ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2017-18 ರ ಶೈಕ್ಷಣಿಕ ವರ್ಷದ ಪ್ರಾರಂಭದ ಪ್ರಯುಕ್ತ ಓರಿಯಂಟಲ್ ಲೆಕ್ಚರ್ ಸಿರೀಸ್ ಎಂಬ ವಿಶೇಷ ಉಪನ್ಯಾಸ ಸರಣಿಯನ್ನು ಪ್ರಾಯೋಜಿಸಲಾಗಿದೆ. ಈ ಉಪನ್ಯಾಸ ಸರಣಿಯು ಅಗಸ್ಟ್ 1 ರಿಂದ 8 ರವರೆಗೆ 7 ದಿನಗಳ ಕಾಲ ದಿನಕ್ಕೆ ಎರಡು ಉಪನ್ಯಾಸದಂತೆ ನಡೆಯುತ್ತದೆ.

Orientation 2017 (1)

Orientation 2017

ಕಾರ್ಯಕ್ರಮವನ್ನು ಖ್ಯಾತ ವಕೀಲರು ಹಾಗೂ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಕೆ.ಆರ್. ಆಚಾರ್ಯರವರು ಉದ್ಘಾಟಿಸಿ ಕಾನೂನು ಮತ್ತು ಜೀವನ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಕಾನೂನು ವಿದ್ಯಾರ್ಥಿಗಳು ಕಲಿಕೆಯಲ್ಲಿ ಅನುಸರಿಸಬೇಕಾದ ಶಿಸ್ತು ಪಾಲನೆ ಹಾಗೂ ಸಮಯ ನಿರ್ವಹಣೆ ಕುರಿತು ತಿಳಿಸಿದರು.

ಎರಡನೇ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕುಟುಂಬ ಪ್ರಬೋಧಕರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ರವರು ಜೀವನ ಮೌಲ್ಯಗಳು ಹಾಗೂ ನೈತಿಕತೆ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿಯವರು ವಹಿಸಿದ್ದರು. ಸಂಚಾಲಕರಾದ ಶ್ರೀ ವಿಜಯನಾರಾಯಣ, ವಕೀಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಯಾದ ತೇಜಸ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Highslide for Wordpress Plugin