’ಓರಿಯಂಟಲ್ ಉಪನ್ಯಾಸ ಸರಣಿ’ ಯಲ್ಲಿ ಚೀನಾ ಸವಾಲು ಮತ್ತು ಸ್ವದೇಶಿ ಚಳುವಳಿ ಹಾಗೂ ವೈಯಕ್ತಿಕ ಕಾನೂನು ಬಗ್ಗೆ ಸಂವಾದ

ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2017-18 ರ ಶೈಕ್ಷಣಿಕ ವರ್ಷದ ಪ್ರಾರಂಭದ ಪ್ರಯುಕ್ತ ಓರಿಯಂಟಲ್ ಲೆಕ್ಚರ್ ಸಿರೀಸ್ ಎಂಬ ವಿಶೇಷ ಉಪನ್ಯಾಸ ಸರಣಿಯು ಅಗಸ್ಟ್ 1 ರಿಂದ 8 ರವರೆಗೆ 7 ದಿನಗಳ ಕಾಲ ದಿನಕ್ಕೆ ಎರಡು ಉಪನ್ಯಾಸದಂತೆ ನಡೆಯುತ್ತಿದ್ದು ಎರಡನೇ ದಿನದ ಮೊದಲನೇ ಅವಧಿಯಲ್ಲಿ ಪುತ್ತೂರಿನ ಖ್ಯಾತ ವಕೀಲರಾದ ಬೆಟ್ಟ ಪಿ. ಈಶ್ವರ್ ಭಟ್ ಇವರು ’ವೈಯಕ್ತಿಕ ಕಾನೂನು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ವೈಯಕ್ತಿಕ ಕಾನೂನುಗಳ ಅರಿವು ಪ್ರತಿಯೊಬ್ಬರಲ್ಲಿ ಅತ್ಯಗತ್ಯ ಆದರೆ ಧರ್ಮಕ್ಕೆ ಯಾವುದೇ ರೀತಿ ಧಕ್ಕೆ ತರದೆ ಪಾಲಿಸಬೇಕಾದದ್ದು ಅನಿವಾರ್ಯ ಎಂದು ತಿಳಿಸಿದರು.

DSCN1395

DSCN1382

ಎರಡನೇ ಅವಧಿಯಲ್ಲಿ ವಿವೇಕನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ಪ್ರಸ್ತುತ ಎಬಿವಿಪಿ ವಿದ್ಯಾರ್ಥಿ ಪಥ ಪತ್ರಿಕೆಯ ಸಂಪಾದಕರಾಗಿ ಕಾರ್‍ಯ ನಿರ್ವಹಿಸುತ್ತಿರುವ ಡಾ. ರೋಹಿಣಾಕ್ಷ ಶೀರ್ಲಾಲು ’ಚೀನಾ ಸವಾಲುಗಳು ಮತ್ತು ಸ್ವದೇಶಿ ಚಳುವಳಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಚೀನಾ ರಾಷ್ಟ್ರವು ಭಾರತದ ಆರ್ಥಿಕ ಸ್ಥಿತಿಯನ್ನು ಕುಸಿತಗೊಳಿಸಿ ನಮ್ಮ ದೇಶವನ್ನು ತನ್ನ ನಿಯಂತ್ರಣಕ್ಕೆ ತರಲು ಯತ್ನಿಸುತ್ತಿದೆ ಹಾಗೂ ಈ ಸವಾಲನ್ನು ಎದುರಿಸಿ ಭಾರತದ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿಯವರು ವಹಿಸಿದ್ದರು. ಕಾನೂನು ಉಪನ್ಯಾಸಕರಾದ ಶ್ರೀ ಕಾರ್ತಿಕ್ ಆನಂದ್ ಸ್ವಾಗತಿಸಿ ವ್ಯಕ್ತಿ ಪರಿಚಯ ಮಾಡಿದರು. ವಿದ್ಯಾರ್ಥಿನಿಯಾದ ಕು. ಸಹನಾ ಕಾರ್ಯಕ್ರಮವನ್ನು ನಿರ್ವಹಿಸಿದರು.

Highslide for Wordpress Plugin