’ಓರಿಯಂಟಲ್ ಉಪನ್ಯಾಸ ಸರಣಿ’ ಯಲ್ಲಿ ಕಾನೂನು ವಿದ್ಯಾಭ್ಯಾಸ ಮತ್ತು ಉದ್ಯೋಗ ಅವಕಾಶಗಳು

ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2017-18 ರ ಶೈಕ್ಷಣಿಕ ವರ್ಷದ ಪ್ರಾರಂಭದ ಪ್ರಯುಕ್ತ ಓರಿಯಂಟಲ್ ಲೆಕ್ಚರ್ ಸಿರೀಸ್ ಎಂಬ ವಿಶೇಷ ಉಪನ್ಯಾಸ ಸರಣಿಯು ಅಗಸ್ಟ್ 1 ರಿಂದ 8 ರವರೆಗೆ 7 ದಿನಗಳ ಕಾಲ ದಿನಕ್ಕೆ ಎರಡು ಉಪನ್ಯಾಸದಂತೆ ನಡೆಯುತ್ತಿದ್ದು ಮೂರನೇ ದಿನದ ಮೊದಲನೇ ಅವಧಿಯಲ್ಲಿ ಬೆಳ್ತಂಗಡಿಯ ಖ್ಯಾತ ವಕೀಲರಾದ ಶ್ರೀ ಸುಬ್ರಮಣ್ಯ ಕುಮಾರ್ ಅಗರ್ತ ಇವರು ಕಾನೂನು ವಿದ್ಯಾಭ್ಯಾಸ ಮತ್ತು ಉದ್ಯೋಗ ಅವಕಾಶಗಳು ಕುರಿತು ಮಾತನಾಡುತ್ತಾ ಕಾನೂನು ವಿದ್ಯಾಭ್ಯಾಸ ಎಂದರೆ ಕೇವಲ ವಕೀಲ ವೃತ್ತಿಯಲ್ಲ ಹಲವಾರು ಕ್ಷೇತ್ರಗಳಲ್ಲಿ ಅವಕಾಶವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

DSCN1426

ಎರಡನೇ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನ ನಿಯಮಗಳು ಹಾಗೂ ವಿವಿಧ ಚಟುವಟಿಕೆಗಳ ಬಗ್ಗೆ ಪ್ರಾಂಶುಪಾಲರು ಮತ್ತು ಕಾನೂನು ಉಪನ್ಯಾಸಕರುಗಳಿಂದ ಕಾರ್ಯಾಗಾರವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿಯವರು ಉಪಸ್ಥಿತರಿದ್ದರು. ಕಾನೂನು ಉಪನ್ಯಾಸಕಿಯಾದ ಕುಮಾರಿ ಶಕ್ತಿತ್ರಯ ಸ್ವಾಗತಿಸಿ ವ್ಯಕ್ತಿ ಪರಿಚಯ ಮಾಡಿದರು. ವಿದ್ಯಾರ್ಥಿನಿಯಾದ ಕು. ಕಾವ್ಯಶ್ರೀ ಕಾರ್ಯಕ್ರಮವನ್ನು ನಿರ್ವಹಿಸಿದರು.

Highslide for Wordpress Plugin