ಪೋಲೀಸು ಮತ್ತು ಸಮಾಜದ ಕುರಿತು ಉಪನ್ಯಾಸ ಮತ್ತು ಸಂವಾದ

ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2017-18 ರ ಶೈಕ್ಷಣಿಕ ವರ್ಷದ ಪ್ರಾರಂಭದ ಪ್ರಯುಕ್ತ ಓರಿಯಂಟಲ್ ಲೆಕ್ಚರ್ ಸಿರೀಸ್ ಎಂಬ ವಿಶೇಷ ಉಪನ್ಯಾಸ ಸರಣಿಯು ಅಗಸ್ಟ್ 1 ರಿಂದ 8 ರವರೆಗೆ 7 ದಿನಗಳ ಕಾಲ ದಿನಕ್ಕೆ ಎರಡು ಉಪನ್ಯಾಸದಂತೆ ನಡೆಯುತ್ತಿದ್ದು ಐದನೇ ದಿನ ಶ್ರೀ ಮಹೇಶ್ ಪ್ರಸಾದ್, ಪೋಲೀಸ್ ವೃತ್ತ ನಿರೀಕ್ಷಕರು, ಪುತ್ತೂರು ಇವರು ಮಕ್ಕಳ ಜೊತೆಗೆ ಪೋಲೀಸ್ ಮತ್ತು ಸಮಾಜದ ಜವಾಬ್ದಾರಿ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಉಪನ್ಯಾಸ ನಡೆಸುತ್ತಾ ನಾಗರಿಕರ ಕರ್ತವ್ಯಗಳು ಹಾಗೂ ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡಿದರು.

Oriental day 5 (1)

Oriental day 5

ಇವರೊಂದಿಗೆ ಕಾರ್ಯಕ್ರಮದಲ್ಲಿ ಪೋಲೀಸ್ ಅಧಿಕಾರಿಗಳಾದ ಶ್ರೀ ಜಗದೀಶ್ ರೆಡ್ಡಿ, ಶ್ರೀ ಮಂಜುನಾಥ್ ಮತ್ತು ಶ್ರೀ ರವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿಯವರು ಅಧ್ಯಕ್ಷತೆ ವಹಿಸಿ, ಸ್ವಾಗತ ಹಾಗೂ ವ್ಯಕ್ತಿ ಪರಿಚಯ ಮಾಡಿದರು. ವಿದ್ಯಾರ್ಥಿನಿಯಾದ ಕು. ಚಿನ್ಮಯಿ ಕಾರ್ಯಕ್ರಮವನ್ನು ನಿರೂಪಿಸಿದರು.

Highslide for Wordpress Plugin