’ಓರಿಯಂಟಲ್ ಉಪನ್ಯಾಸ ಸರಣಿ’ ಯಲ್ಲಿ ಹಿಮಾಲಯ ಪರ್ವತಾರೋಹಣದ ರೋಚಕ ಅನುಭವ ಹಾಗೂ ಸಂವಹನ ಕೌಶಲ್ಯತೆ

ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2017-18 ರ ಶೈಕ್ಷಣಿಕ ವರ್ಷದ ಪ್ರಾರಂಭದ ಪ್ರಯುಕ್ತ ಓರಿಯಂಟಲ್ ಲೆಕ್ಚರ್ ಸಿರೀಸ್ ಎಂಬ ವಿಶೇಷ ಉಪನ್ಯಾಸ ಸರಣಿಯು ಅಗಸ್ಟ್ 1 ರಿಂದ 8 ರವರೆಗೆ 7 ದಿನಗಳ ಕಾಲ ದಿನಕ್ಕೆ ಎರಡು ಉಪನ್ಯಾಸದಂತೆ ನಡೆಯುತ್ತಿದ್ದು ಕೊನೆಯ ದಿನದ ಮೊದಲನೇ ಅವಧಿಯಲ್ಲಿ ಶ್ರೀ ಸಿ. ಮಹಾದೇವ ಶಾಸ್ತ್ರಿ ಮಣಿಲಾ ಇವರು ಹಿಮಾಲಯ ಪರ್ವತಾರೋಹಣದ ರೋಚಕ ಅನುಭವದ ಕುರಿತು ಮಾತನಾಡಿದರು. ಎರಡನೇ ಅವಧಿಯಲ್ಲಿ ಡಾ. ಎಚ್. ಮಾಧವ ಭಟ್ ಇವರು ಇಂಗ್ಲಿಷ್‌ನಲ್ಲಿ ಸಂವಹನ ಕೌಶಲ್ಯದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಯಾದ ಸಂದೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

Oriental Day 7

Oriental Day 7 (1)

Highslide for Wordpress Plugin