ದೀಕ್ಷಾ – ಸ್ವಾಗತ ಮತ್ತು ಅಭಿಶಿಕ್ಷಣ ಕಾರ್ಯಕ್ರಮ

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಒಂದು ವಾರದ ’ಓರಿಯಂಟಲ್ ಉಪನ್ಯಾಸ ಸರಣಿ’ಯ ನಂತರ ಬಿಎ.ಎಲ್‌ಎಲ್.ಬಿ ಹಾಗೂ ಎಲ್‌ಎಲ್.ಬಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅಭಿಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್‍ಯಕ್ರಮವನ್ನು ಪುತ್ತೂರಿನ ಹೆಚ್ಚುವರಿ ಹಿರಿಯ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಮಂಜುನಾಥ್ ರವರು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ವೃತ್ತಿ ಜೀವನಕ್ಕೆ ಪೂರಕವಾದ ಅಂಶಗಳನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಕೇವಲ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವುದಲ್ಲದೇ ಸಮಾಜೋದ್ಧಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕಾಗಿ ಕಿವಿಮಾತು ಹೇಳಿದರು.

Deeksha (1)

Deeksha (2)

Deeksha

ತದನಂತರ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದ ಮಹಾರಾಜ್‌ಜೀಯವರು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ವಿದ್ಯಾರ್ಜನೆ ಸಮಯದಲ್ಲಿ ಶಿಸ್ತುಬದ್ಧ ನಡತೆಯನ್ನು ಮೈಗೂಡಿಸಿಕೊಳ್ಳಬೇಕು. ರಾಷ್ಟ್ರದ ಪೂರ್ವಜರು ಅಭಿವೃದ್ಧಿಪಡಿಸಿಕೊಟ್ಟ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಾವು ಮತ್ತಷ್ಟು ಅಭಿವೃದ್ಧಿಪಡಿಸಬೇಕು. ನಮ್ಮತನವನ್ನು ಉಳಿಸಿ ಬೆಳೆಸಿ ಅಭಿವೃದ್ಧಿ ಸಾಧಿಸುವಲ್ಲಿ ಯುವಪೀಳಿಗೆ ಗಮನಹರಿಸಬೇಕು. ಸ್ವಾತಂತ್ರ ಬಂದು 70 ವರ್ಷಗಳಾದರೂ ಇನ್ನೂ ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದೇವೆಯೇ ಹೊರತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಆಮೆನಡಿಗೆಯಲ್ಲಿ ನಡೆಯುತ್ತಿದ್ದೇವೆ ಇನ್ನಾದರೂ ದಾಪುಗಾಲಿಟ್ಟು ಅಭಿವೃದ್ಧಿಹೊಂದಿದ ರಾಷ್ಟ್ರವಾಗಲು ಯುವಪೀಳಿಗೆ ಶ್ರಮಿಸಬೇಕು. ಕಾನೂನು ವಿದ್ಯಾರ್ಥಿಗಳು ಸಮಾಜ ಸುಧಾರಣಾ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಇದರ ಕಡೆಗೆ ಗಮನಹರಿಸಿ ಶಿಸ್ತುಬದ್ಧ ರಾಷ್ಟ್ರ ನಿರ್ಮಾಣದೆಡೆಗೆ ನಡೆಯುವಂತಾಗಬೇಕು. ಪ್ರತಿಜ್ಞಾವಿಧಿಯಂತೆ ಶಿಸ್ತು, ಸಂಯಮ, ಕ್ರಮಬದ್ಧ ಅಭ್ಯಾಸ, ಸಮಯಪ್ರಜ್ಞೆಯನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಮತ್ತು ವೃತ್ತಿಜೀವನವನ್ನು ಸಾಕಾರಗೊಳಿಸುವಂತಾಗಲಿ ಎಂದು ಹಾರೈಸಿದರು.

ಇನೋರ್ವ ಮುಖ್ಯ ಅತಿಥಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ.ಎಮ್. ಕೃಷ್ಣಭಟ್‌ರವರು ಮಾತನ್ನಾಡುತ್ತಾ ರಾಷ್ಟ್ರೋದ್ಧಾರ ಪೂರಕವಾದ ವೃತ್ತಿಯನ್ನು ತಮ್ಮ ಮುಂದಿನ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹರೀಶ್ ಸಾಳ್ವೆಯಂತ ಹಿರಿಯ ವಕೀಲರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ ತಮ್ಮ ಸಂಪಾದನೆ ಜೊತೆಗೆ ದೇಶ ಸೇವೆಗೆ ಮುಡಿಪಾಗಿಡಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣೇಶ್ ಜೋಷಿ. ಬಿ. ಇವರು ವಿದ್ಯಾರ್ಥಿಗಳು ಶಿಸ್ತುಬದ್ಧವಾದ ಅಧ್ಯಯನ ಮತ್ತು ನಡತೆಗೆ ಒತ್ತುಕೊಡಬೇಕೆಂದು ಹೇಳಿ ವಿದ್ಯಾರ್ಥಿಗಳೆಲ್ಲರಿಗೂ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ. ಕೃಷ್ಣಮೂರ್ತಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಕಾನೂನು ಉಪನ್ಯಾಸಕಿಯಾದ ಶ್ರೀಮತಿ ಅಕ್ಷತಾರವರು ಧನ್ಯವಾದಗೈದರು. ವಿದ್ಯಾರ್ಥಿಗಳಾದ ಕು. ಅಂಕಿತಾ ಹಾಗೂ ಸಹನಾ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ಏಳು ಗಂಟೆಗೆ ಧಾರ್ಮಿಕ ಕಾರ್ಯವಾಗಿ ಗಣಹೋಮವನ್ನು ನಡೆಸಲಾಯಿತು. ನಂತರ ಮಧ್ಯಾಹ್ನ 1 ಗಂಟೆಗೆ ವಿದ್ಯಾರ್ಥಿಗಳು, ಬೊಲ್ಪು ಕಲಾತಂಡ ಮಂಚಿ ಹಾಗೂ ಕಟೀಲು ಯಕ್ಷಗಾನ ಮೇಳದ ಸಹಕಾರದೊಂದಿಗೆ ಗಿರಿಜಾ ಕಲ್ಯಾಣ ಎಂಬ ಯಕ್ಷಗಾನವನ್ನು ಪ್ರಸ್ತುತಪಡೆಸಿದರು. ಇದರ ಜೊತೆಗೆ ರಾಮಕೃಷ್ಣ ಮಠದಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಟ್ಟಿತ್ತು.

Highslide for Wordpress Plugin