’ಓರಿಯಂಟಲ್ ಉಪನ್ಯಾಸ ಸರಣಿ’ಯಲ್ಲಿ ವಿದ್ಯಾರ್ಥಿಗಳು ಮತ್ತು ಸ್ವಾಸ್ಥ್ಯ ಮತ್ತು ವಾದ ಕೌಶಲ್ಯತೆ

ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2017-18 ರ ಶೈಕ್ಷಣಿಕ ವರ್ಷದ ಪ್ರಾರಂಭದ ಪ್ರಯುಕ್ತ ಓರಿಯಂಟಲ್ ಲೆಕ್ಚರ್ ಸಿರೀಸ್ ಎಂಬ ವಿಶೇಷ ಉಪನ್ಯಾಸ ಸರಣಿಯು ಅಗಸ್ಟ್ 1 ರಿಂದ 8 ರವರೆಗೆ 7 ದಿನಗಳ ಕಾಲ ದಿನಕ್ಕೆ ಎರಡು ಉಪನ್ಯಾಸದಂತೆ ನಡೆಯುತ್ತಿದ್ದು ಆರನೇ ದಿನದ ಮೊದಲನೇ ಅವಧಿಯಲ್ಲಿ ಡಾ| ಸುಧಾ ರಾವ್, ಇವರು ವಿದ್ಯಾರ್ಥಿಗಳು ಮತ್ತು ಸ್ವಾಸ್ಥ್ಯ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ದೈಹಿಕ ಹಾಗು ಮಾನಸಿಕ ಆರೋಗ್ಯದ ಕುರಿತು ಮಾಹಿತಿ ನೀಡಿದರು.

Oriental - day 6 (1)

Oriental - day 6

ಎರಡನೇ ಅವಧಿಯಲ್ಲಿ ಪ್ರೋ. ವಿಷ್ಣು ಭಟ್ ಪಾದೆಕಲ್ಲು ಇವರು ವಾದ ಕೌಶಲ್ಯತೆಯ ಬಗ್ಗೆ ಮಾತನಾಡುತ್ತಾ ನ್ಯಾಯಾವಾದಿಗಳಿಗೆ ಕಾನೂನಿನ ಪ್ರಜ್ನೆ ಮತ್ತು ನಾಗರಿಕ ಪ್ರಜ್ಞೆಯ ಅಗತ್ಯತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಯಾದ ಕೌಶಿಕ್ ಕಾರ್ಯಕ್ರಮವನ್ನು ನಿರೂಪಿಸಿದರು.

Highslide for Wordpress Plugin