71 ನೇ ಸ್ವಾತಂತ್ರ್ಯ ದಿನಾಚರಣೆ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಕಾಲೇಜಿನ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ವಕೀಲರು ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಶ್ರೀ ನರಸಿಂಹಪ್ರಸಾದ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು.

law-71st-independence day

ನಂತರ ಅವರು ಮಾತನಾಡಿ ’ಇಂದಿನ ಯುವಕರು ಜಾತಿಬೇಧವನ್ನು ಮರೆತು ರಾಷ್ಟ್ರ ನಿರ್ಮಾಣಕ್ಕೆ ಸಜ್ಜಾಗಬೇಕು ಎಂದು ಹೇಳುತ್ತಾ ದೇಶಮೊದಲು ಮತು ಧರ್ಮ ನಂತರವಾಗಿರಬೇಕು ಎಂದು ಕರೆ ಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣೇಶ್ ಜೋಷಿ ಬಿ., ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ನಾಗರಾಜ್, ಖಜಾಂಚಿಯವರಾದ ಶ್ರೀ ಅರವಿಂದ್ ವಳಕಟ್ಟೆ, ಸಂಚಾಲಕರಾದ ಶ್ರೀ ವಿಜಯ ನಾರಾಯಣ, ಪ್ರಾಶುಂಪಾಲರಾದ ಶ್ರೀ ಕೆ.ಜಿ ಕೃಷ್ಣಮೂರ್ತಿಯವರು ಉಪಸ್ಥಿತರಿದದ್ದರು.

ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾಥಿಗಳು ಕಾಂiiಕ್ರಮದಲ್ಲಿ ಉಪಸ್ಥಿತರಿದ್ದರು. ನಂತರ ಸಿಹಿ ತಿಂಡಿ ವಿತರಿಸಲಾಯಿತು.

Highslide for Wordpress Plugin