ಜೇಸಿರೆಟ್ ಅನ್ನಪೂರ್ಣ ಶರ್ಮರವರಿಂದ ಪುಸ್ತಕ ಕೊಡುಗೆ

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಅಧ್ಯಯನ ಮಾಡಿ ಸ್ವಉದ್ಯಮಿಯಾಗಿರುವ ಜೆಸಿಐ ಪುತ್ತೂರಿನ ಅಧ್ಯಕ್ಷರಾದ ಶ್ರೀ ಪಶುಪತಿ ಶರ್ಮರ ಪತ್ನಿ ಶ್ರೀಮತಿ ಅನ್ನಪೂರ್ಣ ಶರ್ಮ ರವರು ದಿನಾಂಕ 17-8-2017 ರಂದು ಜೆಸಿಐ ವಲಯಾಧ್ಯಕ್ಷರಾದ ಜೆಎಫ್‌ಪಿ ಶ್ರೀ ಸಂತೋಷ್ ಜಿ ಹಾಗೂ ಇತರರು ಮತ್ತು ಕಾನೂನು ಕಾಲೇಜಿನ ಸಂಚಲಕರಾದ ಶ್ರೀ ವಿಜಯ ನಾರಾಯಣ ಕೆ.ಎಂ ರವರ ಸಮ್ಮುಖದಲ್ಲಿ ಸುಮಾರು ರೂ. 7,050 ಮೌಲ್ಯದ ಪುಸ್ತಕಗಳನ್ನು ವಿವೇಕಾನಂದ ಕಾನೂನು ಕಾಲೇಜಿನ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.

IMG-20170819-WA0002

ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿ ಕೆ.ಜಿ. ಪುಸ್ತಕಗಳನ್ನು ಸ್ವೀಕರಿಸುತ್ತಾ ವಿದ್ಯಾರ್ಥಿಗಳಿಗೆ ಇದರಿಂದ ಸದುಪಯೋಗವಾಗುತ್ತದೆ, ಹಿರಿಯ ವಿದ್ಯಾರ್ಥಿಗಳು ಈ ರೀತಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರೆ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಿಸಿದರು. ಜೆಸಿಐ ಪುತ್ತೂರಿನ ಅಧ್ಯಕ್ಷರಾದ ಶ್ರೀ ಪಶುಪತಿ ಶರ್ಮರು ಸ್ವಾಗತಿಸುತ್ತಾ ಕಾಲೇಜಿನ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗುವಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕೆಂದರು. ಜೆಸಿಐ, ಜೇಸಿರೆಟ್, ಜೆಜೆಸಿಯ ಪದಾಧಿಕಾರಿಗಳು, ಕಾಲೇಜಿನ ಗ್ರಂಥಪಾಲಕಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Highslide for Wordpress Plugin