ವಾಟರ್ ಕೂಲರ್ ಕೊಡುಗೆ

ವಿವೇಕಾನಂದ ಕಾನೂನು ಕಾಲೇಜಿಗೆ, 45 ಸಾವಿರ ರೂಪಾಯಿ ವೆಚ್ಚದ ನೂತನ ವಾಟರ್ ಕೂಲರನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಕೊಡುಗೆಯಾಗಿ ಕೊಡುವುದಕ್ಕೆ ಮಂಗಳೂರಿನ ಕರ್ಣಾಟಕ ಬ್ಯಾಂಕಿನ ಕೇಂದ್ರ ಕಛೇರಿಯ ಮುಖ್ಯ ಪ್ರಬಂಧಕರಾದ ಶ್ರೀ ಶ್ರೀನಿವಾಸ ದೇಶಪಾಂಡೆಯವರು ಆದೇಶ ಮಾಡಿ ಉತ್ತಮ ಪ್ರಮಾಣದ ವಾಟರ್ ಕೂಲರ್‌ನ್ನು ಕೊಡುಗೆಯಾಗಿ ನೀಡಲಾಯಿತು.

124

ವಾಟರ್ ಕೂಲರನ್ನು ಕರ್ಣಾಟಕ ಬ್ಯಾಂಕಿನ ಪುತ್ತೂರು ಶಾಖೆಯ ಪ್ರಬಂಧಕರಾದ ಶ್ರೀ ಶ್ರೀಹರಿಯವರು, ಕಾಲೇಜಿನ ಪ್ರಾಶುಂಪಾಲರಾದ ಶ್ರೀ ಕೆ. ಜಿ. ಕೃಷ್ಣಮೂರ್ತಿ, ಕರ್ಣಾಟಕ ಬ್ಯಾಂಕಿನ ಸಿಬ್ಬಂದಿಗಳು, ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ವಿಜಯ ನಾರಾಯಣ ಕೆ. ಎಂ. ಇವರಿಗೆ ಹಸ್ತಾಂತರಿಸಲಾಯಿತು.

Highslide for Wordpress Plugin