ನಮ್ಮ ಲಾಭವಲ್ಲ ದೇಶದ ಲಾಭವನ್ನು ಚಿಂತಿಸಿ

ಪುತ್ತೂರು : ಪ್ರಜ್ಞಾವಂತ ಸಮಾಜವನ್ನು ಸೃಷ್ಟಿಸಬೇಕು, ರಾಷ್ಟ್ರಭಕ್ತಿಯನ್ನು ಪ್ರಕಟೀಕರಣ ಮಾಡಿ ದೇಶವನ್ನು ಮುಂದಿಟ್ಟು ಸಾಗಬೇಕು. ವಿದ್ಯಾರ್ಥಿಗಳ ದೃಷ್ಟಿಕೋನ ದೇಶದ ಕಡೆಗೆ ಇಟ್ಟುಕೊಂಡು, ಇದೇ ಪ್ರವೃತ್ತಿಯಲ್ಲಿ ಪ್ರಾತ್ಯಕ್ಷಿಕಾ ಸಂಸತ್ತು ನಡೆಸಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಇದರ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್ ಕಾರ್ಯಕ್ರಮದ ಅಧ್ಯಕ್ಷಿಯ ಭಾಷಣದಲ್ಲಿ ವ್ಯಕ್ತಪಡಿಸಿದರು. ಸೋಮವಾರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಏರ್ಪಡಿಸಿದ ಪ್ರಾತ್ಯಕ್ಷಿಕಾ ಸಂಸತ್ತು ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

IMG_20170911_104739

IMG-20170911-WA0022

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟಿಸಿದ, ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಕೆ.ಜಿ. ಕೃಷ್ಣಮೂರ್ತಿ ಅವರು ಭಾರತದ ಸಂಸತ್ತು ಮತ್ತು ಸರ್ಕಾರ ವ್ಯವಸ್ಥೆಯನ್ನು ಪರಿಚಯಿಸಿ, ವಿದ್ಯಾರ್ಥಿಗಳು ಇದನ್ನು ಅರಿತು ಮುನ್ನಡೆಯಬೇಕು. ಪ್ರಾತ್ಯಕ್ಷಿಕಾ ಎಂಬ ಹೊಸ ನಾಮದ ಹೊಸ ಹೆಜ್ಜೆಯು ಯಶಸ್ವಿಯಾಗಲಿ ಮತ್ತು ಮುಂದುವರಿಸುತ್ತ ಹೋಗಿ ಎಂದು ಶುಭಹಾರೈಸಿದರು.

ನಂತರ ಕಾನೂನು ವಿದ್ಯಾರ್ಥಿನಿ ಸುಲತ ಅವರ ತಂಡದೊಂದಿಗೆ ತೆಂಕಿಲ ಶಾಲೆಯ ವಿದ್ಯಾರ್ಥಿಗಳು ಜೊತೆಯಾಗಿ ಪ್ರಾತ್ಯಕ್ಷಿಕಾ ಸಂಸತ್ತು ಕಲಾಪ ಪ್ರಾರಂಭಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನರೇಂದ್ರ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ಶ್ರೀಮತಿ ರೂಪಾ ರೇಖಾ, ತೆಂಕಿಲ ಶಾಲೆಯ ಕೋಶಾಧಿಕಾರಿ ವಸಂತ ಸುವರ್ಣ, ಸದಸ್ಯರಾದ ರಮೇಶ್ ಚಂದ್ರ, ಮುಖ್ಯ ಶಿಕ್ಷಕಿ ನಳಿನಿ ಮತ್ತು ಕಾರ್ಯಕ್ರಮ ನಿರ್ದೇಶಕರಾದ, ಕಾನೂನು ಉಪನ್ಯಾಸಕರಾದ ಶ್ರೀಯುತ ಕಾರ್ತಿಕ್ ಆನಂದ್ ಉಪಸ್ಥಿತರಿದ್ದರು. ಶಿಕ್ಷಕಿ ಗೀತಾ ಸ್ವಾಗತಿಸಿ, ಸಹನಾ ವಂದಿಸಿದರು. ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin