ಕಾನೂನು ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ

ನೆಹರು ನಗರ : ವಿವೇಕಾನಂದ ಕಾನೂನು ಮಹಾವಿದ್ಯಾಲಯ ನೆಹರು ನಗರ ಪುತ್ತೂರು ಇಲ್ಲಿ 2017-18 ರ ಸಾಲಿನ ಶಿಕ್ಷಕ-ರಕ್ಷಕ ಸಂಘದ ಸಭೆಯು ಶ್ರೀ ಬಿ.ಗಣೇಶ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಅವರು ಸ್ವಾಗತಿಸಿ ಶೈಕ್ಷಣಿಕ ವಿಚಾರ ಮಂಡನೆಯನ್ನು ಮಾಡಿದರು. ಉಪನ್ಯಾಸಕರಾದ ಶ್ರೀ ರಾಜೇಂದ್ರ ಪ್ರಸಾದ್­ರವರು ಕಾಲೇಜಿನ ಶೈಕ್ಷಣಿಕ ಚಟುವಟಿಕೆಯ ಬಗ್ಗೆ ಮತ್ತು ಉಪನ್ಯಾಸಕ ಶ್ರೀ ಕಾರ್ತಿಕ್ ಆನಂದ್­ರವರು ಕಾನೂನು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಶಿಕ್ಷಕ ರಕ್ಷಕ ಸಂಘದ ಹೊಸ ಸಮಿತಿಯ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಪಿ.ವಿ. ಸತ್ಯನಾರಾಯಣ ಭಟ್, ಉಪಾಧ್ಯಕ್ಷರಾಗಿ ಶ್ರೀಮತಿ ಪುಷ್ಪ, ಕಾರ್ಯದರ್ಶಿಯಾಗಿ ಶ್ರೀ ಕಾರ್ತಿಕ್ ಆನಂದ್, ಶ್ರೀ ಯಾದವ್ ಗಟ್ಟಿ ಮುಂಡಾಲ ಜೊತೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

PTA-meeting

ಪೋಷಕರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಸಂಚಾಲಕರಾದ ಶ್ರೀ ವಿಜಯನಾರಾಯಣ ಕೆ.ಎಂ. ಹಾಗೂ ಶಿಕ್ಷಕ-ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಮತ್ತು ಹಿಂದಿನ ಜೊತೆ ಕಾರ್ಯದರ್ಶಿಯಾದ ಶ್ರೀ ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಅಕ್ಷತಾ ಎ.ಪಿ. ವಂದಿಸಿ, ಉಪನ್ಯಾಸಕರಾದ ಶ್ರೀ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin