ಉಪಯುಕ್ತ ಕಾನೂನುಗಳ ಕುರಿತು ಒಂದು ದಿನದ ಕಾರ್ಯಾಗಾರ

ನಗರ : ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವತಿಯಿಂದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ದಿನಾಂಕ 3-11-2017 ರಂದು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪಯುಕ್ತ ಕಾನೂನುಗಳ ಕುರಿತು ಒಂದು ದಿನದ ಕಾರ್ಯಾಗಾರ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸಾಮಾನ್ಯ ಜೀವನದಲ್ಲಿ ಬೇಕಾದ ಉಪಯುಕ್ತ ಕಾನೂನು, ತಮ್ಮ ಹಕ್ಕು-ಕರ್ತವ್ಯಗಳು ಮತ್ತು ಭಾರತದ ಸಂವಿಧಾನವನ್ನು ತಿಳಿಯುವ ದೃಷ್ಟಿಕೋನದಿಂದ ಒಂದು ದಿನದ ಕಾನೂನು ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.

workshop (6)

workshop (2)

workshop (3)

workshop (4)

workshop (5)

workshop (7)

workshop

workshop (1)

ಶ್ರೀ ಶ್ರೀಗಿರೀಶ್ ಮಳಿ, ವಕೀಲರು, ಜನಸಾಮಾನ್ಯರಿಗಾಗಿ ಉಪಯುಕ್ತ ಕಾನೂನುಗಳು, ಶ್ರೀ ನಾಗೇಶ್ ಶರ್ಮ, ವಕೀಲರು, ಜನಸಾಮಾನ್ಯರಿಗಾಗಿ ಸಂವಿಧಾನದ ಪರಿಚಯ, ಶ್ರೀ ರಾಘವೇಂದ್ರ, ವಕೀಲರು ಜನಸಾಮಾನ್ಯರಿಗಾಗಿ ವ್ಯವಹಾರಿಕ ಕಾನೂನುಗಳು, ಶ್ರೀ ಮುರಳಿಕೃಷ್ಣ ಚೆಳ್ಳಾಂಗಾರು, ವಕೀಲರು, ಜನಸಾಮಾನ್ಯರಿಗಾಗಿ ಅಫರಾಧಿಕ ಕಾನೂನುಗಳ ಪರಿಚಯ, ಶ್ರೀ ಮಹೇಶ್ ಪ್ರಸಾದ್, ಪೊಲೀಸ್ ವೃತ್ತ ನಿರೀಕ್ಷಕರು, ಪುತ್ತೂರು ನಗರ ಠಾಣೆ ಇವರಿಂದ ಪೊಲೀಸ್ ಇಲಾಖೆ ಮತ್ತು ಅಪರಾಧಿಕ ನ್ಯಾಯ ನಿರ್ವಹಣೆ ಕುರಿತಾಗಿ ಉಪನ್ಯಾಸ ನೀಡಿದರು. ಶ್ರೀ ತಾರನಾಥ್, ಪೊಲೀಸ್ ನಿರೀಕ್ಷಕರು, ದ.ಕ ಸಿ.ಇ.ಎನ್ ಪೊಲೀಸ್ ಠಾಣೆ ಮಂಗಳೂರು ಮತ್ತು ಅವರ ಸಿಬ್ಬಂದಿ ತಂಡ ಮಾದಕ ದ್ರವ್ಯ ಸೇವನೆ ಮತ್ತು ಅದರ ದುಷ್ಪರಿಣಾಮದ ಕುರಿತು ಅರಿವು ಕಾರ್ಯಕ್ರಮ ನಡೆಸಿಕೊಟ್ಟರು. ಮಂಗಳೂರಿನ ಸುರಕ್ಷಾ ಫಾರ್ ವುಮೆನ್ ಟ್ರಸ್ಟಿನ ಸಿ.ಇ.ಒ ಶ್ರೀ ಕಾರ್ತಿಕ್ ಎಸ್. ಕಟೀಲ್‌ರವರು ಹೆಣ್ಣುಮಕ್ಕಳೀಗೆ ತಮ್ಮ ಸ್ವರಕ್ಷಣೆ ಕುರಿತಾಗಿ ಪ್ರಾಯೋಗಿಕ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಕೆ.ಜಿ.ಕೃಷ್ಣಮೂರ್ತಿ ಕಾನೂನು ಶಿಕ್ಷಣ ಹಾಗೂ ಉದ್ಯೋಗವಕಾಶಗಳ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 400 ಪದವಿಪೂರ್ವ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಗಾರವನ್ನು ಕಾನೂನು ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಅಕ್ಷತಾ ಎ. ಪಿ. ಮತ್ತು ಶ್ರೀ ಕಾರ್ತಿಕ್ ಆನಂದ್ ಹಾಗೂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಶ್ರೀಧರ್ ಶೆಟ್ಟಿಗಾರ್, ಕು. ಅಕ್ಷತಾ ಸಂಯೋಜಿಸಿದರು.

Highslide for Wordpress Plugin