ಕುಂಬ್ರದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

ವಿವೇಕಾನಂದ ಕಾನೂನು ಕಾಲೇಜಿನ ವತಿಯಿಂದ, ಸರಕಾರಿ ಪದವಿಪೂರ್ವ ಕಾಲೇಜು, ಕುಂಬ್ರ, ಪುತ್ತೂರು ಇಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮವು, ದಿನಾಂಕ 18-11-2017 ರಂದು ನಡೆಯಿತು. ಪುತ್ತೂರಿನ ವಕೀಲರಾದ ಶ್ರೀ ಸುಧೀರ್ ಕುಮಾರ್ ತೋಳ್ಪಡಿಯವರು ಸಂಪನ್ಮೂಲ ವ್ಯಕ್ತಿಯಾಗಿ ಜನಸಾಮಾನ್ಯರಿಗಾಗಿ ಕಾನೂನು ಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ಉಪನ್ಯಾಸಕರಾದ ಶ್ರೀ ಕಾರ್ತಿಕ್ ಆನಂದ್ ಇವರು ಕಾನೂನು ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್. ಯು, ಮೂಲಭೂತ ಕರ್ತವ್ಯಗಳ ಬಗ್ಗೆ ಮತ್ತು ಪ್ರದೀಪ್, ಗ್ರಾಹಕ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಶುಂಪಾಲರಾದ ಶ್ರೀ ಎನ್. ದುಗ್ಗಪ್ಪ ಹಾಗೂ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

IMG-20171118-WA0010

Highslide for Wordpress Plugin