ಜನಸಾಮಾನ್ಯರಿಗೆ ಸಂವಿಧಾನದ ಅರಿವು ಅತ್ಯಗತ್ಯ : ಶ್ರೀ ಉದಯಾನಂದ ಎ.

ಸಮಾಜದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಕಾನೂನುಗಳಿಗೆ, ಮಾತೃ ಕಾನೂನು ನಮ್ಮ ಸಂವಿಧಾನ. ಇದರ ಅರಿವು ಜನಸಾಮಾನ್ಯರಿಗೆ ಅತ್ಯಗತ್ಯವಾಗಿದ್ದು, ಕಾನೂನು ವಿದ್ಯಾರ್ಥಿಗಳು ಅವರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಕೀಲರಾದ ಶ್ರೀ ಉದಯಾನಂದ ಎ. ಅವರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ದಿನಾಂಕ 27-11-2017 ರಂದು ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ, ಅಭಿಪ್ರಾಯ ವ್ಯಕ್ತಪಡಿಸಿದರು.

CHE_5394

CHE_5376

CHE_5388

ವಿವೇಕಾನಂದ ಕಾನೂನು ಕಾಲೇಜು ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಜಂಟಿಯಾಗಿ ವಿವೇಕಾನಂದ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಿದರು. ಈ ಸಮಾರಂಭವನ್ನು ಪುತ್ತೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ.ಯವರಾದ ಶ್ರೀ ಕಿಶನ್ ಬಿ. ಮಡಲಗಿ ಉದ್ಘಾಟಿಸಿ, ಮಾತನಾಡುತ್ತಾ, ಸಂವಿಧಾನದ ಅರಿವು ಎಲ್ಲರಿಗೂ ಅವಶ್ಯವಿದೆ. ಕೇವಲ ಹಕ್ಕನ್ನೂ ಕೇಳುವುದಲ್ಲದೇ, ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀ ಪ್ರಕಾಶ್ ಪಿ. ಎಂ., ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಪುತ್ತೂರು ಇವರು ಸಂವಿಧಾನದ ಕರ್ತೃಗಳನ್ನು ನೆನೆಯುತ್ತಾ, ಸಂವಿಧಾನದ ಆಶಯವನ್ನು ತಿಳಿಸುತ್ತಾ ಶುಭಹಾರೈಸಿದರು. ಈ ಸಮಾರಂಭದಲ್ಲಿ ಮಂಗಳೂರಿನ ವಕೀಲರು ಮತ್ತು ಜಿಲ್ಲಾ ಸರಕಾರಿ ವಕೀಲರಾದ ಶ್ರೀ ಉದಯಾನಂದ ಎ. ರವರು, ಸಂವಿಧಾನ ರಚನೆ ಕಾರ್ಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೆಯನ್ನು ಸ್ಮರಿಸಿದರು.

ವಕೀಲರು ಮತ್ತು ವಿವೇಕಾನಂದ ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಖಜಾಂಜಿಯಾದ ಶ್ರೀ ಅರವಿಂದ ವಳಕಟ್ಟೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ. ಕೃಷ್ಣಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಕುಮಾರ್. ಎಸ್. ನಿರೂಪಿಸಿದರು. ವಿದ್ಯಾರ್ಥಿ ಕು. ತೇಜಸ್. ಯು. ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Highslide for Wordpress Plugin