ಕಛೇರಿ ಸಹಾಯಕರ ಕಾರ್ಯಾಗಾರ ಉದ್ಘಾಟನಾ ಸಮಾರಂಭ

ಯಾವುದೇ ಸಂಸ್ಥೆಗಳಿಗೆ ಕಛೇರಿಯು ಬಹು ಮುಖ್ಯವಾದದ್ದು. ಆದ್ದರಿಂದ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವವರು ಉತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸಿದರೆ ಆಡಳಿತವು ಉತ್ತಮವಾಗಿ ನಡೆದುಕೊಂಡು ಹೋಗಲು ಸಾಧ್ಯ ಎಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ಪುತ್ತೂರು ಇದರ ಅಧ್ಯಕ್ಷ ಶ್ರೀ. ಎ. ವಿ. ನಾರಾಯಣ ತಿಳಿಸಿದರು.

ಇವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇವುಗಳ ಆಶ್ರಯದಲ್ಲಿ ದಿನಾಂಕ 27-1-2018  ರಂದು ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಛೇರಿ ಸಹಾಯಕರ ಕಾರ್ಯಾಗಾರದಲ್ಲಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನ್ನಾಡುತ್ತಾ ಕಲಿಕೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಹೊಸತನ್ನು ಕಲಿಯಲು ಯಾವತ್ತೂ ನಮ್ಮ ಮನಸ್ಸು ತೆರೆದಿರಬೇಕು. ಆಸಕ್ತಿ ಇಲ್ಲಿ ಮುಖ್ಯಭಾಗವೇ ಹೊರತು ವಯಸ್ಸು ಅಲ್ಲ ಎಂದರು.

CHE_1174

CHE_1186

CHE_1187

CHE_1189

CHE_1170

CHE_1178

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯ, ಪುತ್ತೂರು ಇದರ ಸಂಚಾಲಕ ಶ್ರೀ ವಿಜಯನಾರಾಯಣ ಕೆ.ಎಂ. ಇವರು ಮಾತನಾಡಿ ನಿಸ್ವಾರ್ಥ ಮನೋಭಾವದಿಂದ ಕಾರ್ಯವನ್ನು ನಿರ್ವಹಿಸಬೇಕು. ಕಛೇರಿ ಸಹಾಯಕರು ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಸರಸ್ವತಿ ಪದವಿಪೂರ್ವ ವಿದ್ಯಾಲಯ ಕಡಬ ಇದರ ಪ್ರಾಂಶುಪಾಲರಾದ ಶ್ರೀ ಮಹೇಶ್ ನಿಟಿಲಾಪುರ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಶ್ರೀ ರಘುರಾಜ್ ಉಬರಡ್ಕ, ಸಂಯೋಜಕರು, ಪ್ರಶಿಕ್ಷಣ ಘಟಕ, ಶ್ರೀ. ಕೆ.ಜಿ. ಕೃಷ್ಣಮೂರ್ತಿ, ಪ್ರಾಂಶುಪಾಲರು, ವಿವೇಕಾನಂದ ಕಾನೂನು ಮಹಾವಿದ್ಯಾಲಯ, ಶ್ರೀ. ಭಾಸ್ಕರ ಬಿ, ಕಾರ್ಯನಿರ್ವಹಣಾಧಿಕಾರಿ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಉಪಸ್ಥಿತರಿದ್ದರು.

ವಿವೇಕಾನಂದ ಕಾನೂನು ಕಾಲೇಜಿನ ಪ್ರಾಶುಂಪಾಲ ಶ್ರೀ ಕೆ.ಜಿ ಕೃಷ್ಣಮೂರ್ತಿ, ಸ್ವಾಗತಿಸಿ, ಕಾನೂನು ಕಾಲೇಜಿನ ಉಪನ್ಯಾಸಕಿ ಕು. ಶಕ್ತಿತ್ರಯ ವಂದಿಸಿದರು. ಕಾನೂನು ಕಾಲೇಜಿನ ಉಪನ್ಯಾಸಕ ಕುಮಾರ್ ಎಸ್. ನಿರೂಪಿಸಿದರು.

Highslide for Wordpress Plugin