ಕಛೇರಿ ಸಹಾಯಕರ ಕಾರ್ಯಾಗಾರ ಸಮಾರೋಪ ಸಮಾರಂಭ

ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವತಿಯಿಂದ, ಕಛೇರಿ ಸಹಾಯಕರಿಗಾಗಿ ನಡೆದ ಕಾರ್ಯಾಗಾರದ ಮೊದಲ ಅವಧಿಯನ್ನು ವಿದ್ಯಾಭಾರತಿಯ ಪ್ರಾಂತ ನೈತಿಕ ಮತ್ತು ಅಧ್ಯಾತ್ಮಿಕ ಪ್ರಮುಖರಾದ ಶ್ರೀ ವೆಂಕಟ್ರಮಣ ಇವರು ನಡೆಸಿಕೊಟ್ಟರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿನ್ನಲೆ ಮತ್ತು ಆಶಯ ಎಂಬ ವಿಶಯದ ಕುರಿತು ಅವರು ಮಾಹಿತಿ ನೀಡಿದರು. ಸ್ವಯಂಸೇವಕ ಸಂಘದ ಸಿದ್ದಾಂತಗಳ ಆಧಾರದ ಮೇಲೆ ವಿದ್ಯಾವರ್ಧಕ ಸಂಘವು ನಿಂತಿದ್ದು, ಅದನ್ನು ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಎರಡನೇ ಅವಧಿಯನ್ನು ಲೇಖಕರು ಮತ್ತು ಪ್ರಶಿಕ್ಷಣ ಸಂಯೋಜಕರಾದ ಡಾ. ಸುಂದರ್‌ ಕೇನಾಜೆಯವರು ನಡೆಸಿಕೊಟ್ಟರು. ವ್ಯಕ್ತಿತ್ವ ವಿಕಸನದ ಕುರಿತು ಅವರು ಮಾಹಿತಿ ನೀಡಿದರು. ನಮ್ಮ ನಡವಳಿಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ, ವ್ರತ್ತಿ ಬದುಕಿನಲ್ಲಿ ಯಶಸ್ಸನ್ನು ಸಾಧಿಸಬಹುದು. ಇದಕ್ಕಾಗಿ ನಮ್ಮ ವ್ಯಕ್ತಿತ್ವದಲ್ಲಿ ಅನೇಕ ಬದಲಾವಣೆ ಮಾಡಿಕೊಳ್ಳಲು ಸಿದ್ದರಿರಬೇಕು ಎಂದು ಅವರು ತಿಳಿಸುತ್ತಾ, ತಮ್ಮಜೀವನದ ಅನೇಕ ಅನುಭವಗಳನ್ನು ಹಂಚಿಕೊಂಡರು.

DSC00988

DSC00980

DSC01009

DSC00999

ಕಾರ್ಯಾಗಾರದ ಮೂರನೇ ಅವಧಿಯನ್ನು, ಶ್ರೀ ರಘುರಾಜ್ ಉಬರಡ್ಕ ಮತ್ತು ಶ್ರೀ ಭಾಸ್ಕರ ಬಿ. ಇವರು ವಿವಿಧ ಚಟುವಟಿಕೆಗಳ ಮೂಲಕ ನಡೆಸಿಕೊಟ್ಟರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಶ್ರೀ ಭಾಸ್ಕರ ಬಿ. ಇವರು ಕಛೇರಿಯ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸೂಪರಿಟೆಂಡೆಂಟ್ ಶ್ರೀ ಗಣಪತಿ ಭಟ್ ಇವರು ವಹಿಸಿದ್ದರು. ವಿವೇಕಾನಂದ ವಿದ್ಯಾವರ್ದಕ ಸಂಘದ ನಿರ್ದೇಶಕರಾದ ಶ್ರೀ ಶಿವಪ್ರಸಾದ್  ಇ. ಸಮಾರೋಪ ಮಾತುಗಳನ್ನು ಆಡಿದರು. ಕಛೇರಿ ಕೆಲಸಗಳು ಮಾತ್ರವಲ್ಲದೇ, ಸಾಮಾಜಿಕ ಜೀವನದಲ್ಲಿ ಅನೇಕ ಕೆಲಸಗಳನ್ನು ನಿರ್ವಹಿಸಬೇಕು. ವಿವೇಕಾನಂದ ವಿದ್ಯಾವರ್ಧಕ ಸಂಘದ ಗ್ರಾಮವಿಕಾಸ, ರೇಡಿಯೋ ಪಾಂಚಜನ್ಯದಂತಹ, ಅನೇಕ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನೀವೆಲ್ಲರೂ ಮಾಡಬೇಕು. ವೃತ್ತಿ ಜೀವನದ ಜೊತೆಗೆ, ಸಾಮಾಜಿಕ ಜೀವನದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗಣಪತಿ ಭಟ್ ಮಾತನಾಡಿ, ಕಾರ್ಯಗಾರದಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಹೇಳಿದರು.

ವೇದಿಕೆಯಲ್ಲಿ ಪ್ರಶಿಕ್ಷಣ ಘಟಕದ ಸಂಯೋಜಕರಾದ ಶ್ರೀ ರಘುರಾಜ್ ಉಬರಡ್ಕ, ಸರಸ್ವತಿ ಪದವಿಪೂರ್ವಕಾಲೇಜು ಕಡಬ ಇದರ ಪ್ರಾಂಶುಪಾಲ ಶ್ರೀ ಮಹೇಶ್ ನಿಟಿಲಾಪುರ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಶುಂಪಾಲ ಶ್ರೀ ಕೃಷ್ಣಮೂರ್ತಿ ಕೆ. ಜಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾದಿಕಾರಿ ಶ್ರೀ ಭಾಸ್ಕರ ಬಿ. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ಶ್ರೀ ವಿಜಯನಾರಾಯಣ ಕೆ. ಎಂ. ಇವರು ಉಪಸ್ಥಿತರಿದ್ದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಅಕ್ಷತಾ ಎ. ಪಿ. ಸ್ವಾಗತಿಸಿ, ಉಪನ್ಯಾಸಕಿ ಶ್ರೀಮತಿ ಸಂಗೀತಾ ವಂದಿಸಿದರು. ಉಪನ್ಯಾಸಕ ಕುಮಾರ್ ಎಸ್. ನಿರೂಪಿಸಿದರು.

Highslide for Wordpress Plugin