ಕಾನೂನು ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ವಿವೇಕಾನಂದ ಕಾನೂನು ಕಾಲೇಜಿಗೆ ಪ್ರಶಸ್ತಿ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಇವರು ದಿನಾಂಕ 23 ಮತ್ತು 24 ಫೆಬ್ರವರಿ 2018 ರಂದು ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಸಿದ ವಾರ್ಷಿಕ ಅಂತರ್ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ತಂಡವು ಭಾಗವಹಿಸಿ, ಬಹುಮಾನಗಳನ್ನು ಪಡೆದುಕೊಂಡಿದೆ.

law-sports 2018 (3)

law-sports 2018

law-sports 2018 (1)

law-sports 2018 (2)

ಪುರುಷರ ಡಿಸ್ಕಸ್ ಥ್ರೋ ಮತ್ತು ಶಾಟ್‌ಪುಟ್ ವಿಭಾಗದಲ್ಲಿ ದ್ವಿತೀಯ ಎಲ್.ಎಲ್.ಬಿ ಯ ಜಾಬಿ ಜಾಯ್ ಕ್ರಮವಾಗಿ ಪ್ರಥಮ ಮತ್ತು ದ್ವೀತಿಯ ಬಹುಮಾನ, ಮಹಿಳೆಯರ ವಿಭಾಗದ 4×100 ರಿಲೇಯಲ್ಲಿ ದ್ವಿತೀಯ ಸ್ಥಾನ, 400 ಮೀ ಮತ್ತು 5000 ಮೀ ಓಟದಲ್ಲಿ ಪ್ರಥಮ ಎಲ್.ಎಲ್.ಬಿ ಯ ಸಂಧ್ಯಾ ಕೆ. ಎಸ್. ತೃತೀಯ ಸ್ಥಾನ, 800 ಮೀ. ಓಟದಲ್ಲಿ ಪ್ರಥಮ ಬಿ.ಎ. ಎಲ್.ಎಲ್.ಬಿ. ಯ ಲವೀನಾ ತೃತೀಯ ಸ್ಥಾನ ಮತ್ತು ಪುರುಷರ ವಿಭಾಗದ 4×400 ರಿಲೇಯಲ್ಲಿ ಚತುರ್ಥ ಸ್ಥಾನ ಪಡೆದುಕೊಂಡು, ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.

ತಂಡಕ್ಕೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವರ್ಗ, ವಿದ್ಯಾರ್ಥಿ ಸಂಘ ಅಭಿನಂದಿಸಿದೆ.

Highslide for Wordpress Plugin