ಕಾನೂನು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಪುತ್ತೂರು : ಈಗಿನ ಸಮಾಜದಲ್ಲಿ ಮಹಿಳೆಯರು ಹಲವಾರು ಸವಾಲುಗಳನ್ನೆದುರಿಸುತ್ತಿದ್ದರೂ ಅಂತಹ ಸವಾಲುಗಳನ್ನು ಹಸನ್ಮುಖಿಗಳಾಗಿ ಎದುರಿಸಲು ಸಾಧ್ಯ ಇದೆ ಎಂದು ಕರ್ನಾಟಕ ಸಾಹಿತ್ಯ ಪ್ರಶಸ್ತಿ ವಿಜೇತರಾದ ಶ್ರೀಮತಿ. ಭುವಾನೇಶ್ವರಿ ಹೆಗಡೆ ನಗರದ ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

womens day

womens day (1)

ವಿಶ್ವ ಸಂಸ್ಥೆಯ ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯವಾದ ಪ್ರಸಕ್ತ ಸಮಯ : ನಗರ ಮತ್ತು ಗ್ರಾಮೀಣ ಮಹಿಳೆಯರ ಜೀವನದ ಪರಿವರ್ತನೆಯಲ್ಲಿ ಕಾರ್ಯಕರ್ತರು ತೊಡಗಬೇಕು ಎಂಬುದನ್ನು ಹಾಸ್ಯ ಚಟಾಕಿಗಳೊಂದಿಗೆ ಶ್ರೀಮತಿ ಭುವಾನೇಶ್ವರಿ ಹೆಗಡೆಯವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತಾ ಮಹಿಳೆಯರಿಗೆ ಮಾತ್ರ ಸಮಸ್ಯೆಯಲ್ಲ ಪುರುಷರಿಗೂ ಸಹ ಹಲವಾರು ಸಮಸ್ಯೆಗಳಿವೆ. ಪುರುಷ-ಮಹಿಳೆ ಒಬ್ಬರಿಗೊಬ್ಬರು ಸಹಾಯ ಹಸ್ತ ಚಾಚಿದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ನಾವು ನಿವಾರಿಸಿಕೊಳ್ಳಬಹುದು. ಆಧುನಿಕ ತಾಂತ್ರಿಕರಣ ವ್ಯವಸ್ಥೆ ಪುರುಷ ಮತ್ತು ಸ್ತ್ರೀ ನಡುವೆ ಕಂದಕವನ್ನು ಏರ್ಪಡಿಸುತ್ತಿರುವಂತೆ ಕಾಣುತ್ತದೆ. ತಾಂತ್ರೀಕರಣ ಅತಿಯಾಗಿ ಅಂಟಿಕೊಳ್ಳದಿದ್ದಲ್ಲಿ ಈ ಕಂದಕವನ್ನು ಮುಚ್ಚಿ ಬಿಡಬಹುದು. ನ್ಯಾಯನೀತಿ ಮತ್ತು ಧರ್ಮದ ನಡುವಲ್ಲಿ ಜಾಗರೂಕತೆಯಿಂದ ಪುರುಷ-ಸ್ತ್ರೀ ಸಹಮತದ ನಡೆಯನ್ನು ಇಡಬೇಕಾಗುತ್ತದೆ. ಇದರಿಂದ ಮಹಿಳೆಯರಿಗೆ ಜಾಗೃತತೆ ಬೆಳೆಯುತ್ತದೆ ಮತ್ತು ರಕ್ಷಣೆಯು ಸಿಗುತ್ತದೆ. ಇದು ಬದುಕು ಬಂಗಾರವಾಗಿಸಲು ಸಹಾಯಕ ಎಂದು ಸ್ಪಷ್ಟಪಡಿಸಿದರು.

ಅಧ್ಯಕ್ಷ ಸ್ಥಾನದಿಂದ ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿ ಕೆ.ಜಿ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವವನ್ನು ವಿವರಿಸುತ್ತಾ ಮೇಲು-ಕೀಳು ಎಂಬ ತಾರತಮ್ಯವಿಲ್ಲದೆ ಹೊಂದಾಣಿಕೆಯ ಜೀವನವನ್ನು ಸಾಗಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಸಾಮರಸ್ಯವನ್ನು ಉಂಟುಮಾಡಬಹುದು ಎಂದು ನುಡಿದರು. ಶ್ರೀಮತಿ ಸಹನಾ ಪ್ರಾರ್ಥಿಸಿದರು. ವಿಮಲೇಶ್ ಸ್ವಾಗತಿಸಿ ವಂದಿಸಿದರು. ಶ್ರೀಮತಿ ಸುಲತಾ ಶೆಣ್ಯೆ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin