ಬಂಟ್ವಾಳದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

ವಿವೇಕಾನಂದ ಕಾನೂನು ಕಾಲೇಜಿನ ವತಿಯಿಂದ, ಸರಕಾರಿ ಪದವಿ ಕಾಲೇಜು, ಬಿ.ಸಿ ರೋಡು, ಬಂಟ್ವಾಳ ಇಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮವು, ದಿನಾಂಕ 9-3-2018 ರಂದು ನಡೆಯಿತು. ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ಉಪನ್ಯಾಸಕರಾದ ಶ್ರೀ ಕಾರ್ತಿಕ್ ಆನಂದ್ ಇವರು ಕಾನೂನು ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್. ಯು, ಮೂಲಭೂತ ಕರ್ತವ್ಯಗಳ ಬಗ್ಗೆ ಮತ್ತು ಸುಲತ. ಎಂ, ಸೈಬರ್ ಅಪರಾಧ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳದ ವಕೀಲರು ಶ್ರೀಮತಿ ಆಶಾ ಪ್ರಸಾದ್ ಸಾಮಾನ್ಯ ಕಾನೂನುಗಳ ಕುರಿತು ಮಾಹಿತಿ ನೀಡಿದರು. ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

bantwal

Highslide for Wordpress Plugin