ವಿಸ್ತೃತ ಕಟ್ಟಡಕ್ಕೆ ಶಿಲಾನ್ಯಾಸ

ಕಾನೂನು ಮಹಾವಿದ್ಯಾಲಯಗಳು ಯಾವ ಸಂದರ್ಭದಲ್ಲೂ ತಮ್ಮ ಮೂಲ ಉದ್ದೇಶಗಳನ್ನು ಮರೆಯಬಾರದು ಎಂದು ಭಾರತದ ಅಡಿಷನಲ್ ಸಾಲಿಸಿಟರ್ ಜನರಲ್, ಶ್ರೀ ಕೆ. ಎಂ. ನಟರಾಜ್ ಹೇಳಿದರು. ಇವರು 24-03-2018 ರಂದು ಇವರು ವಿಸ್ತೃತ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಿದ್ದರು.

CHE_6783

ಕಾನೂನು ಮಹಾವಿದ್ಯಾಲಯಗಳು ಎಲ್ಲಾ ವರ್ಗದವರಿಗೂ ಕಾನೂನು ಶಿಕ್ಷಣವನ್ನು ನೀಡುವ ಮತ್ತು ಸಮಾಜಕ್ಕೆ ಉತ್ತಮ ನ್ಯಾಯವಾದಿಗಳನ್ನು ಹಾಗೂ ನ್ಯಾಯಾಧೀಶರನ್ನು ನೀಡುವ ಘನ ಉದ್ದೇಶದಿಂದ ಕಾರ್ಯನಿರ್ವಹಿಸಬೇಕು. ಆದರೆ ಇಂದು ಕಾನೂನು ಮಹಾವಿದ್ಯಾಲಯಗಳು ಕಾರ್ಪೋರೇಟ್ ಕಂಪನಿಗಳ ರೀತಿಯಲ್ಲಿ ಮಾರ್ಪಾಡುಗೊಳ್ಳುತ್ತಿರುವುದು ವಿಷಾದನೀಯ ಎಂದರು.

CHE_6801

ಮುಖ್ಯ ಅತಿಥಿಯಾಗಿದ್ದ ರಾಮನಗರ ಜಿಲ್ಲಾ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಮತ್ತು ಹಿರಿಯ ವಿದ್ಯಾರ್ಥಿ ಶ್ರೀ ಟಿ. ಗೋಪಾಲಕೃಷ್ಣ ರೈ, ಶಿಲಾನ್ಯಾಸ ಅನಾವರಣಗೊಳಿಸಿ, ಮಾತನಾಡಿ, ಈ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿ ನಾನು ಇಂದಿಗೂ ಸಂಸ್ಥೆಯಂದಿಗೆ ಸಂಪರ್ಕ ಹೊಂದಿದ್ದೇನೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯಾಗಿದ್ದ ನನಗೆ ಈ ಕಾಲೇಜು ಉತ್ತಮ ಶಿಕ್ಷಣ ನೀಡಿದ ಕಾರಣದಿಂದ, ಇಂದು ಜಿಲ್ಲಾ ನ್ಯಾಯಾಧೀಶನಾಗಿ ಕೆಲಸ ಮಾಡುತ್ತದ್ದೇನೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪರಿಶ್ರಮ ಹಾಕುವುದರಿಂದ, ಹೆಚ್ಚು ಅವಕಾಶಗಳು ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು.

ರಾಜ್ಯ ಅಧಿವಕ್ತಾ ಪರಿಷತ್ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ, ಶ್ರೀ ಎ. ಯಂ ಸೂರ್ಯಪ್ರಕಾಶ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ವಕೀಲರು ಸಮಾಜಕ್ಕೆ ಉಪಕರಿಸುವ ಮನೋಭಾವದಿಂದ ವೃತ್ತಿಧರ್ಮವನ್ನು ಪಾಲಿಸುವ ಮೂಲಕ ಜನರಿಗೆ ಹತ್ತಿರವಾಗಬೇಕು ಎಂದರು.

CHE_6731

CHE_6751

CHE_6808

CHE_6813

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ, ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ವಕೀಲರಾಗಿ ಕಾನೂನಿನ ನೆರವು ನೀಡುವುದು ಅಥವಾ ವಕಾಲತ್ತು ವಹಿಸಿಕೊಳ್ಳುವುದು ವೃತ್ತಿ ಧರ್ಮ. ಹಣದ ಬದಲು, ಗುಣದ ಕಡೆಗೆ ಒತ್ತು ಕೊಟ್ಟು ಪವಿತ್ರವಾದ ವಕೀಲ ವೃತ್ತಿಯನ್ನು ನಿರ್ವಹಿಸುವ ಅಗತ್ಯ ಸಮಾಜದಲ್ಲಿದೆ. ಈ ನಿಟ್ಟಿನಲ್ಲಿ ಯುವ ವಕೀಲರು ಸಮಾಜಮುಖಿ ಹಾಗೂ ರಾಷ್ಟ್ರೀಯ ಚಿಂತನೆಯೊಂದಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಕರೆಕೊಟ್ಟರು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯವರಾದ ಡಾ. ಕೆ. ಎಂ. ಕೃಷ್ಣಭಟ್, ಆಡಳಿತ ಮಂಡಳಿಯ ಸಂಚಾಲಕ ಶ್ರೀ ವಿಜಯನಾರಾಯಣ ಕೆ. ಎಂ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ, ಶ್ರೀ ಕೆ. ಜಿ. ಕೃಷ್ಣಮೂರ್ತಿ ಸ್ವಾಗತಿಸಿ, ಆಡಳಿತ ಮಂಡಳಿಯ ಸದಸ್ಯ ಹಾಗೂ ವಕೀಲ, ಶ್ರೀ ಮಂಜುನಾಥ್ ಎನ್. ಎಸ್. ವಂದಿಸಿದರು. ಕಾಲೇಜಿನ ಉಪನ್ಯಾಸಕಿ, ಶ್ರೀಮತಿ ಅನ್ನಪೂರ್ಣ ವಿ. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

Highslide for Wordpress Plugin