ವಾರ್ಷಿಕ ದಿನಾಚರಣೆ 2018

ವಿವೇಕಾನಂದ ಕಾನೂನು ಕಾಲೇಜಿನಲ್ಲಿ, ನೂತನ ಕಟ್ಟಡ ನಿರ್ಮಾಣ ಪ್ರಯುಕ್ತ, ಭೂಮಿಪೂಜಾ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಕಾಲೇಜಿನ ವಾರ್ಷಿಕ ದಿನಾಚರಣೆ ದಿನಾಂಕ 24-03-2018 ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.

ಬೆಳಿಗ್ಗೆ ಗಂಟೆ 10 ಕ್ಕೆ, ಕಾಲೇಜಿನ ವಾರ್ಷಿಕ ದಿನಾಚರಣೆಯ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಹಿರಿಯ ವಕೀಲರು ಮತ್ತು ಕಾನೂನು ಕಾಲೇಜಿನ ಸ್ಥಾಪಕಾಧ್ಯಕ್ಷರಾದ ಶ್ರೀ ಪಂಜಿಗುಡ್ಡೆ ರಾಮಚಂದ್ರಭಟ್ ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಡಾ. ಸುಧಾ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಸಂಚಾಲಕರಾದ, ಶ್ರೀ ವಿಜಯನಾರಾಯಣ ಕೆ. ಎಂ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ, ಶ್ರೀ ಕೆ. ಜಿ. ಕೃಷ್ಣಮೂರ್ತಿ, ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್. ಕೆ. ಆರ್. ವಿದ್ಯಾರ್ಥಿ ಸಂಘದ ವರದಿಯನ್ನು ಮಂಡಿಸಿದರು.

CHE_6579

CHE_6687

CHE_6690

CHE_6692

ನಂತರ ದತ್ತಿ ಪ್ರೋತ್ಸಾಹಕ ಬಹುಮಾನ, ಕ್ರೀಡೆ ಮತ್ತು ಸಾಂಸ್ಕ್ರತಿಕ ಬಹುಮಾನ ಮತ್ತು ಹೆಚ್ಚು ಅಂಕ ಗಳಿಸಿದವರಿಗೆ ವಿಶೇಷ ಬಹುಮಾನಗಳನ್ನು ವೇದಿಕೆಯಲ್ಲಿದ್ದ ಗಣ್ಯರು, ವಿದ್ಯಾರ್ಥಿಗಳಿಗೆ ವಿತರಿಸಿದರು. ಡಾ. ಸುಧಾ ರಾವ್ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಾ, ವಿದ್ಯಾರ್ಥಿಗಳು ಕಾಯಾ ವಾಚಾ ಮನಸಾ ಅಧ್ಯಯನಕ್ಕೆ ಮಹತ್ವ ನೀಡಿ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷ ಸ್ಥಾನದಿಂದ ಶ್ರೀ ಪಂಜಿಗುಡ್ಡೆ ರಾಮಚಂದ್ರಭಟ್ ಅವರು ಮಾತನಾಡುತ್ತಾ ಕಾಲೇಜಿನ ಪ್ರಾರಂಭದ ದಿನಗಳನ್ನು ಮೆಲುಕು ಹಾಕುತ್ತಾ, ಕಾಲೇಜು ನಡೆದು ಬಂದ ದಾರಿಯನ್ನು ವಿವರಿಸಿದರು ಹಾಗೂ ಕಾಲೇಜು ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಹಾರೈಸಿದರು.

ಶ್ರೀ ರಾಜೇಂದ್ರ ಪ್ರಸಾದ್. ಎ. ದತ್ತಿನಿಧಿ, ಶ್ರೀಮತಿ ಶಂಕರಿ ಭಟ್ ಪ್ರೋತ್ಸಾಹಕ, ಶ್ರೀಮತಿ ಗೀತಾ ಗೌರಿ ಸಾಂಸ್ಕೃತಿಕ ಮತ್ತು ಶ್ರೀ ಕುಮಾರ್. ಎಸ್. ಕ್ರೀಡಾ ಸ್ಪರ್ಧೆಗಳ ಬಹುಮಾನಗಳ ಪಟ್ಟಿಯನ್ನು ಓದಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಉಮೇಶ್ ದೇವಾಡಿಗ ಸ್ವಾಗತಿಸಿ, ಉಪಾಧ್ಯಕ್ಷೆ ಸೌಮ್ಯ. ಪಿ ವಂದಿಸಿದರು. ನಂತರ ವಿಸ್ತೃತ ಕಟ್ಟಡದ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ ಭೋಜನದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

Highslide for Wordpress Plugin