ಮತದಾನ ಜಾಗೃತಿ ರ್ಯಾಲಿ

ವಿವೇಕಾನಂದ ಕಾನೂನು ಮಹಾವಿದ್ಯಾಲಯ, ತಾಲೂಕು ಕಾನೂನು ಸೇವಾ ಸಮಿತಿ ಪುತ್ತೂರು, ಸ್ವೀಪ್ ಪುತ್ತೂರು ಮತ್ತು ಹಿರಿಯ ವಿದ್ಯಾರ್ಥಿ ಸಂಘ, ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಜಾಥಾ, ದಿನಾಂಕ 8-5-2018 ರಂದು ವಿವೇಕಾನಂದ ಕಾನೂನು ಕಾಲೇಜಿನಿಂದ ಸರಕಾರಿ ಬಸ್ ನಿಲ್ದಾಣದವರೆಗೆ ನಡೆಯಿತು.

ಪುತ್ತೂರು ತಾಲೂಕಿನ ತಹಶೀಲ್ದಾರ್ ಶ್ರೀ ಅನಂತಶಂಕರ ಬಿ. ಇವರು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಸುಭದ್ರ ಸರಕಾರದ ರಚನೆಗಾಗಿ ಮತದಾನ ಅವಶ್ಯಕವಾಗಿದ್ದು, ಯಾವುದೇ ಅಮಿಷಕ್ಕೆ ಒಳಗಾಗದೆ ಎಲ್ಲರೂ ಮತದಾನ ಮಾಡಬೇಕು. ಕಾನೂನು ಕಾಲೇಜು ಹಮ್ಮಿಕೊಂಡಿರುವ ಮತದಾನ ಜಾಗೃತಿ ಜಾಥಾವು ಜನರಲ್ಲಿ ಮತದಾನದ ಅರಿವನ್ನು ಮೂಡಿಸಲಿ ಎಂದು ಜಾಥಾಕ್ಕೆ ಶುಭಹಾರೈಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ, ಶ್ರೀ ಕೆ. ಜಿ. ಕೃಷ್ಣಮೂರ್ತಿ, ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

IMG_7630

IMG_7672

IMG_7634

Highslide for Wordpress Plugin