BALLB ಪರೀಕ್ಷೆಯಲ್ಲಿ ಭವ್ಯಾ ಜಿ. 5 ನೇ ರ್‍ಯಾಂಕ್, LLB ಪರೀಕ್ಷೆಯಲ್ಲಿ ಮುಸ್ತಾಫ ಎಂ. 8 ನೇ ರ್‍ಯಾಂಕ್

ಕರ್ನಾಟಕರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಜೂನ್ 2017 ರಲ್ಲಿ ನಡೆಸಿದ 5 ವರ್ಷಗಳ BALLB ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕು. ಭವ್ಯಾ ಜಿ. ಇವರು 5 ನೇ ರ್‍ಯಾಂಕ್ ಮತ್ತು 3 ವರ್ಷಗಳ LLB ಪರೀಕ್ಷೆಯಲ್ಲಿ ಶ್ರೀ ಮುಸ್ತಾಫ ಎಂ. ಇವರು 8 ನೇ ರ್‍ಯಾಂಕ್ ಗಳಿಸಿರುತ್ತಾರೆ. ಭವ್ಯಾ ಜಿ. ಇವರು ಪುತ್ತೂರು ತಾಲೂಕು ಕೌಕ್ರಾಡಿ ಗ್ರಾಮದ ಶ್ರೀ ಶಿವಪ್ಪ ಗೌಡ ಮತ್ತು ಶ್ರೀಮತಿ ಸುಂದರಿ ಇವರ ಪುತ್ರಿ. ಮುಸ್ತಾಫ ಎಂ. ಇವರು ಕಡಬ ತಾಲೂಕಿನ ಕೊಡಿಂಬಾಳ ಗ್ರಾಮದ ಶ್ರೀ ಹಮೀದ್ ಮತ್ತು ಶ್ರೀಮತಿ ಮರಿಯಮ್ಮ ಇವರ ಪುತ್ರ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಇವರನ್ನು ಅಭಿನಂದಿಸಿರುತ್ತಾರೆ.

law-rank-students

Highslide for Wordpress Plugin