ಸ್ವಾತಂತ್ರ್ಯ ದಿನಾಚರಣೆ

ವಿವೇಕಾನಂದ ಕಾನೂನು ಕಾಲೇಜಿನಲ್ಲಿ 72 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ನಿವೃತ್ತ ಸೇನಾಧಿಕಾರಿಯಾದ ಶ್ರೀ ಶ್ರೀರಂಗ ಶಾಸ್ತ್ರಿ ಮಣಿಲ ಇವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ನಡೆದ ಸಭಾಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ, ಶ್ರೀರಂಗ ಶಾಸ್ತ್ರಿ ಮಣಿಲ ಅವರು, ದೇಶಭಕ್ತಿ ಮತ್ತು ಯುವ ಸಮೂಹದ ಜವಾಬ್ದಾರಿಗಳ ಕುರಿತು ಮಾತನಾಡಿ, ಸೇನೆಯಲ್ಲಿ ಕಾನೂನು ವಿದ್ಯಾರ್ಥಿಗಳ ಅವಶ್ಯಕತೆಯನ್ನು ತಿಳಿಸಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣೇಶ್ ಜೋಷಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಸಂಚಾಲಕರಾದ ಶ್ರೀ ವಿಜಯನಾರಾಯಣ ಕೆ. ಎಂ, ಡಾ. ಬಿ. ಕೆ. ರವೀಂದ್ರ, ಡೈರಕ್ಟರ್ ಆಫ್ ಲೀಗಲ್ ಸ್ಟಡೀಸ್ ಮತ್ತು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಪ್ರಸಾದ್ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ಧನ್ಯ ಎಂ. ಕೆ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.

Independence day 2018 (2)

Independence day 2018 (1)

Highslide for Wordpress Plugin