ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ

ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿನಿಯರ ತಂಡವು, ದಾವಣಗೆರೆಯ ಆರ್. ಎಲ್. ಕಾನೂನು ಕಾಲೇಜಿನಲ್ಲಿ ದಿನಾಂಕ 19-9-2018 ರಂದು ಜರುಗಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟದ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Cross-country

ಕಾಲೇಜಿನ ವಿದ್ಯಾರ್ಥಿನಿಯರಾದ ಅಕ್ಷಿತಾ, ಅಂತಿಮ ವರ್ಷದ ಬಿ. ಎ. ಎಲ್ ಎಲ್ ಬಿ, ಸೌಮ್ಯ ಪಿ. ಅಂತಿಮ ವರ್ಷದ ಬಿ. ಎ. ಎಲ್ ಎಲ್ ಬಿ, ಸಂಧ್ಯಾ ಕೆ. ಎಸ್., ದ್ವಿತೀಯ ಎಲ್. ಎಲ್. ಬಿ., ಲವೀನಾ, ದ್ವಿತೀಯ ಬಿ.ಎ. ಎಲ್ ಎಲ್ ಬಿ, ಪೂರ್ಣಿಮಾ ದ್ವಿತೀಯ ಬಿ.ಎ. ಎಲ್ ಎಲ್ ಬಿ, ಜ್ಯೋತಿ, ಪ್ರಥಮ ಎಲ್ ಎಲ್ ಬಿ ತಂಡವನ್ನು ಪ್ರತಿನಿಧಿಸಿದ್ದರು.

ಸಂಧ್ಯಾ ಕೆ. ಎಸ್. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ವರ್ಗದವರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Highslide for Wordpress Plugin