ಕಾನೂನು ರಸಪ್ರಶ್ನೆ ಕಾರ್ಯಕ್ರಮ

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ರಸಪ್ರಶ್ನೆ ಕಾರ್ಯಕ್ರಮವು ದಿನಾಂಕ 8-9-2018 ರಂದು ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರಿನ ಎಸ್. ಡಿ. ವಿಶ್ರಾಂತ ಪ್ರಾಧ್ಯಾಪಕರಾದ, ಶ್ರೀ ಉದಯ್ ಕುಮಾರ್ ಇವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳು, ಆಧುನಿಕ ಯುಗದಲ್ಲಿ ಶಿಕ್ಷಣದ ಅವಶ್ಯಕತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಯುವಜನತೆಯ ಭಾಗವಹಿಸುವಿಕೆಯ ಕುರಿತು ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನೂನು ಕಾಲೇಜಿನ ಡೈರಕ್ಟರ್ ಆಫ್ ಲೀಗಲ್ ಸ್ಟಡೀಸ್ ಡಾ. ಬಿ. ಕೆ. ರವೀಂದ್ರ ವಹಿಸಿದ್ದರು.

Quiz report (2)

Quiz report (1)

ನಂತರ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು. ಮೊದಲ ಹಂತದಲ್ಲಿ ಆಯ್ಕೆಯಾದ 8 ತಂಡಗಳಿಗೆ, ಎರಡನೇ ಹಂತದ ಸ್ಪರ್ಧೆಯನ್ನು ನಡೆಸಲಾಯಿತು.  ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

Highslide for Wordpress Plugin