ಸರ್ಜಿಕಲ್ ಸ್ಟ್ರೈಕ್ ದಿನ

ವಿವೇಕಾನಂದ ಕಾನೂನು ಕಾಲೇಜಿನ ರಾಷ್ರೀಯ ಸೇವಾ ಯೋಜನೆ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ದಿನಾಂಕ 29-09-2018 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ, ಭಾರತೀಯ ಸೈನ್ಯವು ಐತಿಹಾಸಿಕ ಪರಂಪರೆಯನ್ನು ಹೊಂದಿದ್ದು, ಸ್ವಾತಂತ್ರ್ಯದ ನಂತರದಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಸೈನ್ಯದ ಪರಾಕ್ರಮವು ಜನರಿಗೆ ತಲುಪುವ ಕೆಲಸ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಕಾಲೇಜಿನ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

Surgical strike day (2)

Surgical strike day (3)

Surgical strike day (1)

ನಂತರ ಮಾತು ಮುಂದುವರಿಸಿ, ಸರ್ಜಿಕಲ್ ಸ್ಟ್ರೈಕ್ ಎಂಬುದು ಇಂತಹ ಪರಾಕ್ರಮಗಳಲ್ಲಿ ಒಂದು. ಇದು ಭಾರತೀಯ ಸೈನ್ಯದ ಶಕ್ತಿಯನ್ನು ವಿಶ್ವ ಮಟ್ಟಕ್ಕೆ ಪರಿಚರಿಯಿಸಿತು ಮತ್ತು ಎಲ್ಲಾ ಶತ್ರು ರಾಷ್ಟ್ರಗಳಿಗೆ ಒಂದು ಕಠಿಣ ಸಂದೇಶವನ್ನು ರವಾನಿಸಿತು. ಅದೇ ರೀತಿ ವಿದ್ಯಾರ್ಥಿಗಳು ಕೂಡ ಮುಂದೆ ಸೈನ್ಯವನ್ನು ಸೇರವು ಮೂಲಕ ಮತ್ತು ಇಂತಹ ಪರಾಕ್ರಮದ ದಿನಗಳನ್ನು ಸಂಭ್ರಮಿಸುವುದರ ಮೂಲಕ ಸೈನಿಕರಿಗೆ ನೈತಿಕ ಸ್ಥೈರ್ಯವನ್ನು ತುಂಬಬೇಕು ಎಂದು ಹೇಳಿ ಭಾರತೀಯ ಸೈನ್ಯದ ಕುರಿತು ಸವಿವಿಸ್ತಾರವಾಗಿ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಶುಂಪಾಲರಾದ ಶ್ರೀ ರಾಜೇಂದ್ರ ಪ್ರಸಾದ್ ಎ. ಅವರು ಅಧ್ಯಕ್ಷತೆಯ ಮಾತುಗಳನ್ನು ಆಡಿದರು ಮತ್ತು ಆಗಮಿಸಿದ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕಾಲೇಜಿನ ರಾಷ್ರೀಯ ಸೇವಾ ಯೋಜನಾಧಿಕಾರಿ ಆದ ಶ್ರೀ ಕುಮಾರ್ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ರಾಜ್‌ನಾರಾಯಣ ಮಳಿ ಸ್ವಾಗತಿಸಿ, ವಿದ್ಯಾರ್ಥಿನಿ ಕು. ರೇಶ್ಮಾ ವಂದಿಸಿದರು. ವಿದ್ಯಾರ್ಥಿನಿ ಕು. ದೀಪಿಕಾ ನಿರೂಪಿಸಿದರು.

Highslide for Wordpress Plugin