ಕಬಡ್ಡಿ ತಂಡಕ್ಕೆ ದ್ವೀತಿಯ ಸ್ಥಾನ

ವಿವೇಕಾನಂದ ಕಾನೂನು ಕಾಲೇಜಿನ ಕಬಡ್ಡಿ ತಂಡವು, ಕೊಪ್ಪಳದ ಡಿ.ಬಿ.ಎಚ್.ಪಿ.ಎಸ್ ಕಾನೂನು ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ, ದ್ವೀತಿಯ ಸ್ಥಾನವನ್ನು ಪಡೆದುಕೊಂಡಿದೆ.

law-kabaddi

ಕಾಲೇಜಿನ ವಿದ್ಯಾರ್ಥಿಗಳಾದ ವಿನೋದ್ ಕುಮಾರ್, ತೇಜಕುಮಾರ್ ಟಿ. ಎನ್., ಮೊಹಮ್ಮದ್ ಮುನ್ಜೀರ್, ಕೌಶಿಕ್ ಕೆ. ಟಿ., ಬದ್ರುದ್ದೀನ್, ಮೊಹಮ್ಮದ್ ಅಶ್ರಫ್, ಪುನೀತ್ ಕುಮಾರ್, ಗೌರೀಶ್ ಎಂ., ನವೀನ್ ಕುಮಾರ್ ಬಿ., ನೀಲೇಶ್ ಎಸ್. ಶೆಟ್ಟಿ., ತಂಡದಲ್ಲಿ ಭಾಗವಹಿಸಿದ್ದರು.

ಗೌರೀಶ್ ಎಂ ದ್ವೀತಿಯ ಬಿ.ಎ. ಎಲ್.ಎಲ್.ಬಿ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ನವೀನ್ ಕುಮಾರ್ ಎಂ. ಕೆ ಮತ್ತು ಶ್ರೀ ಯತೀಶ್ ತಂಡಕ್ಕೆ ತರಬೇತಿಯನ್ನು ನೀಡಿದ್ದರು. ಕಾಲೇಜಿನ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ವರ್ಗದವರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Highslide for Wordpress Plugin