ಪರಿಸರ ಸಂರಕ್ಷಣಾ ಮಾಹಿತಿ ಕಾರ್ಯಕ್ರಮ

ವಿವೇಕಾನಂದ ಕಾನೂನು ಕಾಲೇಜಿನ ಇಕೋ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ’ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಕಾಡುಗಳು’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ದಿನಾಂಕ 16-11-2018 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

CHE_9359

ಮಂಗಳೂರಿನ ಪರಿಸರವಾದಿ ಮತ್ತು ಆರ್ಕಿಟೆಕ್ಟ್ ಶ್ರೀ ನಿರೇನ್ ಜೈನ್ ಮಾತನಾಡಿ ಪಶ್ಚಿಮ ಘಟ್ಟಗಳ ಕಾಡುಗಳ ಕುರಿತು ಮಾಹಿತಿ ನೀಡಿ, ಈ ಕಾಡುಗಳನ್ನು ಸಂರಕ್ಷಿಸಬೇಕಾದ ಅನಿವಾರ್ಯತೆಗಳನ್ನು ತಿಳಿಸಿದರು. ಕಾಲೇಜಿನ ಡೈರಕ್ಟರ್ ಆಫ್ ಲೀಗಲ್ ಸ್ಟಡೀಸ್ ಆದ ಡಾ. ಬಿ. ಕೆ. ರವೀಂದ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಪ್ರಸಾದ್ ಎ ವೇದಿಕೆಯಲ್ಲಿ ಉಪಸ್ಥಿತರಿದ್ದು, ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಇಕೋ ಕ್ಲಬ್­ನ ಸಂಯೋಜಕರಾದ ಶ್ರೀಮತಿ ಸಂಗೀತಾ ಎಸ್. ಎಂ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕ ತೇಜಕುಮಾರ್ ವಂದಿಸಿದರು. ವಿದ್ಯಾರ್ಥಿ ಸುನಿಲ್ ಕಾರ್ಯಕ್ರಮ ನಿರ್ವಹಿಸಿದರು.

Highslide for Wordpress Plugin