ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಚ್ಚತಾ ಆಂದೋಲನ್

ವಿವೇಕಾನಂದ ಕಾನೂನು ಮಹಾವಿದ್ಯಾಲಯವು, ದೇಶದಾದ್ಯಂತ ನಡೆದ ಸ್ವಚ್ಚತಾ ಆಂದೋಲನ ದ ಪ್ರಯುಕ್ತ ದಿನಾಂಕ 02-10-2014 ರಂದು ನಡೆದ ರಾಷ್ತ್ರೀಯ ಸ್ವಚ್ಚತಾ ಆಂದೋಲನ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು. ಈ ದಿನ ಬೆಳಿಗ್ಗೆ 8.30 ಕ್ಕೆ ವಿವೇಕಾನಂದ ಕಾನೂನು ಕಾಲೇಜು ವಠಾರದಲ್ಲಿ ರಾಷ್ರ್ಟಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಪುಷ್ಪಾರ್ಚನೆ ಮಾಡುವುದರ ಮೂಲಕ ನೆರವೇರಿಸಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕೆ.ಆರ್.ಆಚಾರ್ಯ, ಸಮಾಜಮುಖಿ ವಿಚಾರಧಾರೆಯನ್ನೊಳಗೊಂಡ ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು . ಕಾಲೇಜಿನ ಸಂಚಾಲಕರಾದ ಶ್ರೀ ಸಂತೋಷ್ ಬಿ. ಉಪಸ್ಥಿತರಿದ್ದರು. ಬಳಿಕ ರಾಷ್ಟ್ರೀಯವಾಗಿ ಜನಸಮುದಾಯದ ನಡುವೆ ತಮ್ಮ ಪರಿಸರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಅರಿವನ್ನು ಮೂಡಿಸುವ ಸಲುವಾಗಿ ವಿವೇಕಾನಂದ ವಿದ್ಯಾಸಂಸ್ಥೆ ಯ ಹಾಗೂ ಅನೇಕ ಸ್ವಜನ ಬಾಂಧವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ಪುತ್ತೂರು ಪುರಸಭಾ ವಲಯದಲ್ಲಿ ನಡೆಸಲಾಯಿತು. ಪ್ರಾಂಶುಪಾಲನ್ನೊಳಗೊಂಡು ಕಾಲೇಜಿನ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸಂಪನ್ನಗೊಳಿಸಿದರು.

Highslide for Wordpress Plugin