ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನೆ

2014-15 ನೇ ಸಾಲಿನ “ರಾಷ್ಟ್ರೀಯ ಸೇವಾ ಯೋಜನಾ ಘಟಕ”ದ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 12-11-2014 ರಂದು ಕಾಲೇಜು ಸಭಾಂಗಣದಲ್ಲಿ ಆಯೋಜಿಸಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ವಿವೇಕಾನಂದ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ|| ಅರುಣ್ ಪ್ರಕಾಶ್ ಆಗಮಿಸಿದ್ದರು.

IMG_4585-copy

IMG_4586-copy

ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ಯಾಂತ್ರಿಕ ಪ್ರಪಂಚದಲ್ಲಿ ಬದಲಾವಣೆಗಳು ಆಗುತ್ತಿರುವ ಈ ಸಂದರ್ಭ, ಮಾನವನ ಹಾಗೂ ಅವನ ಮಧ್ಯೆ ಇರುವ ಮಾನವೀಯ ಸಂಬಂಧಗಳ ಕೊಂಡಿಗಳು ಕಳಚುತ್ತಿವೆ. ಇಂದಿನ ಕಾಲಘಟ್ಟಗಳಲ್ಲಿ ಈ ಸಂಭಂಧಗಳನ್ನು ಬೆಳೆಸಬೇಕಾದ ಯುವಕರು ಮೊಬೈಲ್, ಫೇಸ್‌ಬುಕ್, ವಾಟ್ಸಪ್ ಮುಂತಾದ ಸಾಧನಗಳನ್ನು ಬಳಸುತ್ತಾ ನೈಜವಾಗಿ ಪುರಾತನ ಕಾಲದಲ್ಲಿ ನಡೆಯುತ್ತಿದ್ದ ವಾರ್ತಾಲಾಪಗಳನ್ನು ಮರೆತುಬಿಟ್ಟಿದ್ದಾರೆ. ಆದ್ದರಿಂದ ಈ ಎಲ್ಲಾ ಮಾನವ ಸಂಬಂಧಗಳೇ ನಶಿಸಿ ಹೋಗುವ ಸಂದರ್ಭದಲ್ಲಿ ವ್ಯಕ್ತಿಗಳ ನಡುವೆ ಪರಸ್ಪರ ಏಕತೆ, ಆತ್ಮೀಯತೆ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಬಹಳ ಪ್ರಮುಖ ಪಾತ್ರ ವಹಿಸುತ್ತದೆ, ಯಾವುದೇ ಜಾತಿ, ಧರ್ಮ ಗಳಿಲ್ಲದೇ ಒಮ್ಮನಸ್ಸಿನಿಂದ ನಾವೆಲ್ಲಾ ಒಂದು ಎಂದು ತೋರಿಸಲು ಇದು ಅತ್ಯಂತ ಸಹಾಯಕಾರಿಯಾಗಿದೆಂದು ಅಭಿಪ್ರಾಯ ಪಟ್ಟರು. ಈ ವಾರ್ಷಿಕ ವರ್ಷದಲ್ಲಿ ಯೋಜನೆಯ ವತಿಯಿಂದ ಅನೇಕ ಸಾಮಾಜಿಕ ಕಾಳಜಿಯುಳ್ಳ ಕಾರ್ಯಕ್ರಮಗಳು ಮೂಡಿಬರಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಯವರು ಅಧ್ಯಕ್ಷತೆಯನ್ನು ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಾಧೀಕಾರಿ ಶ್ರೀ ರಾಜೇಂದ್ರ ಪ್ರಸಾದ್ ಎ. ಯವರು ವೇದಿಕೆಯಲ್ಲಿ ಉಪಸ್ಥಿತಿಯಲ್ಲಿದ್ದು ಸ್ವಾಗತಿಸಿದರು ಕು|| ಸೌಮ್ಯಶ್ರೀ ಪ್ರಾರ್ಥಿಸಿ, ವಿವೇಕ್ ಕೃಷ್ಣ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕು||ಕಾವ್ಯ ನೆರವೇರಿಸಿದರು.

Highslide for Wordpress Plugin