ಸ್ವಚ್ಚತಾ ಆಂದೋಲನಾ ಅರಿವು ಕಾರ್ಯಕ್ರಮ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 13-11-2014 ರಂದು ಸ್ವಚ್ಚತಾ ಆಂದೋಲನಾ ಅರಿವು ಕಾರ್ಯಕ್ರಮವನ್ನು ವಿದ್ಯಾರ್ಥಿ ಕ್ಷೇಮಪಾಲನಾ ಮತ್ತು ಎನ್.ಎಸ್.ಎಸ್ ವತಿಯಿಂದ ಹಮ್ಮಿಕೊಳ್ಳಲಾಯಿತು.

IMG_4619

IMG_4620

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ವಿದ್ಯಾಭಾರತಿ ಕರ್ನಾಟಕದ ಪ್ರಮುಖ ಜವಾಬ್ದಾರಿಯಾದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ಕೇಂದ್ರ ಜವಾಬ್ದಾರಿಯನ್ನು ಹೊತ್ತಿರುವ ಜಿ.ಆರ್ ಜಗದೀಶ್ ರವರು ಮಾತನಾಡಿ ಸ್ವಚ್ಚತೆಯನ್ನು ಕಾಪಾಡುವುದು ಪ್ರತಿಯೊಂದು ವ್ಯಕ್ತಿಯ ಜವಾಬ್ದಾರಿ,ಯಾರಾದರೂ ಕಸವನ್ನು ಬಿಸಾಡಿ ಮಲಿನ ಮಾಡುತ್ತಿದ್ದರೆ ಹಿಂದೆ ನಿಂತ ಪ್ರತಿಯೊಬ್ಬ ವ್ಯಕಿಯ ಜವಾಬ್ಧಾರಿಯಾಗಿರುತ್ತದೆ. ಒಳ್ಳೆಯ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳಿದ್ದರೆ ಅದನ್ನು ಸ್ವೀಕರಿಸುತ್ತಾರೆ ಆದರೆ ಕೋಪಿಷ್ಟರಿದ್ದರೆ ಅದನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಹಾಗಾಗಿ ಅಂತಹ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ತಲುಪಿಸಬೇಕಾಗಿದೆ. ಆ ಯೋಜನೆ ಹೊಸತೇನಲ್ಲ ಬದಲಾಗಿ ರಾಷ್ಟ್ರಪಿತ ಗಾಂಧೀಜಿಯೂ ಕೂಡಾ ಈ ಕನಸನ್ನು ಕಂಡಿದ್ದರು ಆದರೆ ಇಂದಿನ ಪ್ರಧಾನಿ ವೇಗವನ್ನು ತಂದುಕೊಟ್ಟರು. ಆದ್ದರಿಂದ ನಾವೆಲ್ಲರೂ ನಮ್ಮ ನಮ್ಮ ಪರಿಸರವನ್ನು ಮೊದಲು ಸ್ವಚ್ಚವಾಗಿರಿಸಿ ಪ್ರಧಾನಿಯವರ ಆಶಯಕ್ಕೆ ಸಮರ್ಥನೆಯನ್ನು ತಂದುಕೊಟ್ಟಂತಾಗುತ್ತದೆಂದರು.

ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿಗಳಿಗೆ ಸ್ವಚ್ಚತಾ ಕಾರ್ಯಕ್ರಮದ ಪ್ರತಿಜ್ಞಾವಿಧಿ ಸ್ವೀಕಾರವನ್ನು ಕು|| ಸಹನಾ ಪಿ.ಎಸ್. ಸಂಪನ್ನಿಸಿದರು ಹಾಗೂ ಕಾರ್ಯಕ್ರಮದ ಸಮಗ್ರ ನಿರೂಪಣೆಯನ್ನು ಸಂಗೀತಾ ನಿರ್ವಹಿಸಿದರು.

Highslide for Wordpress Plugin