ಅಂತರ್ ಕಾಲೇಜು ಮಟ್ಟದ ಭಾಷಣ ಸ್ಫರ್ಧೆ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 28-01-2015 ರಂದು ಅಂತರ್ ಕಾಲೇಜು ಮಟ್ಟದ ಪದವಿಪೂರ್ವ ಹಾಗೂ ಪದವಿ ವಿಭಾಗದ ಅಂತರ್ ಕಾಲೇಜು ಮಟ್ಟದ ಭಾಷಣ ಕಾರ್ಯಕ್ರಮ ವು ಜರುಗಿತು.

IMG_4824

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಶ್ರೀ ರವೀಂದ್ರ ಪಿ., ಕೋಶಾಧಿಕಾರಿ, ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು, ಮಾತನಾಡಿ ಭಾಷಣ ಎನ್ನುವುದು ಒಂದು ಕಲೆ. ಅದು ಎಲ್ಲರಿಗೂ ಬರುವಂಥದ್ದಲ್ಲ, ಒಬ್ಬ ಪ್ರಸಿದ್ಧ ವಾಗ್ಮಿಯಾಗಬೇಕಿದ್ದರೆ ಹಿರಿಯ ನಾಯಕರ ಭಾಷಣದ ಸಾಲನ್ನು ಆಲಿಸಿದರೆ ತನ್ನಲ್ಲಿ ಆ ಶಕ್ತಿ ಹಾಗೂ ನವ ವಿಚಾರಗಳು ಮೂಡಲು ಸಾಧ್ಯ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

IMG_4826

IMG_4825

ಕಾಲೇಜು ಪ್ರಾಚಾರ್ಯರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕ ಶ್ರೀ ಹರೀಶ್ ರಾವ್ ಉಪಸ್ಥಿತರಿದ್ದರು. ತದನಂತರ ಸ್ಫರ್ಧೆ ಪ್ರಾರಂಭಗೊಂಡಿತು.

ನಿರ್ಣಾಯಕರಾಗಿ ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶ್ರೀ ರಾಕೇಶ್ ಕುಮಾರ್ ಕಮ್ಮಜೆ ಹಾಗೂ ವಿವೇಕಾನಂದ ಬಿ.ಎಡ್. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ|| ಶೋಭಿತಾ ಸತೀಶ್ ಆಗಮಿಸಿದ್ದರು.

ನಂತರ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್.ಡಿ.ಎಮ್. ಕಾಲೇಜು ಸರಕಾರಿ ಕಾಲೇಜು ಬೆಳ್ತಂಗಡಿ, ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಶಸ್ತಿ ಗಳಿಸಿತು. ಕಾರ್ಯಕ್ರಮವನ್ನು ಕು|| ಸಹನಾ ಪಿ.ಎಸ್. ಹಾಗೂ ಕು|| ವೈಭವಿ ಸಂಪನ್ನಿಸಿದರು.

Highslide for Wordpress Plugin