Nov. 26 : Inauguration of New Moot Court Hall

Nov. 26 : Inauguration of New Moot Court Hall

Tuesday, November 20th, 2018
ಪರಿಸರ ಸಂರಕ್ಷಣಾ ಮಾಹಿತಿ ಕಾರ್ಯಕ್ರಮ

ಪರಿಸರ ಸಂರಕ್ಷಣಾ ಮಾಹಿತಿ ಕಾರ್ಯಕ್ರಮ

Saturday, November 17th, 2018

ವಿವೇಕಾನಂದ ಕಾನೂನು ಕಾಲೇಜಿನ ಇಕೋ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ’ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಕಾಡುಗಳು’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ದಿನಾಂಕ 16-11-2018 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮಂಗಳೂರಿನ ಪರಿಸರವಾದಿ ಮತ್ತು ಆರ್ಕಿಟೆಕ್ಟ್ ಶ್ರೀ ನಿರೇನ್ ಜೈನ್ ಮಾತನಾಡಿ ಪಶ್ಚಿಮ ಘಟ್ಟಗಳ ಕಾಡುಗಳ ಕುರಿತು ಮಾಹಿತಿ ನೀಡಿ, ಈ ಕಾಡುಗಳನ್ನು ಸಂರಕ್ಷಿಸಬೇಕಾದ ಅನಿವಾರ್ಯತೆಗಳನ್ನು ತಿಳಿಸಿದರು. ಕಾಲೇಜಿನ ಡೈರಕ್ಟರ್ ಆಫ್ ಲೀಗಲ್ ಸ್ಟಡೀಸ್ ಆದ ಡಾ. ಬಿ. ಕೆ. ರವೀಂದ್ರ ಕಾರ್ಯಕ್ರಮದ […]

ಸ್ವಚ್ಛತಾ ಕಾರ್ಯಕ್ರಮ

ಸ್ವಚ್ಛತಾ ಕಾರ್ಯಕ್ರಮ

Wednesday, October 17th, 2018

ವಿವೇಕಾನಂದ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ, ದಿನಾಂಕ 1-10-2018 ರಂದು ಸ್ವಚ್ಛತೆಯ ಕುರಿತು ಮಾಹಿತಿ ಮತ್ತು ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಾಹಿತಿ ಕಾರ್ಯಕ್ರಮದಲ್ಲಿ, ಕಾಲೇಜಿನ ಡೈರಕ್ಟರ್ ಆಫ್ ಲೀಗಲ್ ಸ್ಟಡೀಸ್ ಆದ, ಡಾ. ಬಿ. ಕೆ ರವೀಂದ್ರ ಅವರು ಮಾತನಾಡಿ, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಪ್ರಸಾದ್ ಎ., ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ […]

ಕಬಡ್ಡಿ ತಂಡಕ್ಕೆ ದ್ವೀತಿಯ ಸ್ಥಾನ

ಕಬಡ್ಡಿ ತಂಡಕ್ಕೆ ದ್ವೀತಿಯ ಸ್ಥಾನ

Thursday, October 11th, 2018

ವಿವೇಕಾನಂದ ಕಾನೂನು ಕಾಲೇಜಿನ ಕಬಡ್ಡಿ ತಂಡವು, ಕೊಪ್ಪಳದ ಡಿ.ಬಿ.ಎಚ್.ಪಿ.ಎಸ್ ಕಾನೂನು ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ, ದ್ವೀತಿಯ ಸ್ಥಾನವನ್ನು ಪಡೆದುಕೊಂಡಿದೆ. ಕಾಲೇಜಿನ ವಿದ್ಯಾರ್ಥಿಗಳಾದ ವಿನೋದ್ ಕುಮಾರ್, ತೇಜಕುಮಾರ್ ಟಿ. ಎನ್., ಮೊಹಮ್ಮದ್ ಮುನ್ಜೀರ್, ಕೌಶಿಕ್ ಕೆ. ಟಿ., ಬದ್ರುದ್ದೀನ್, ಮೊಹಮ್ಮದ್ ಅಶ್ರಫ್, ಪುನೀತ್ ಕುಮಾರ್, ಗೌರೀಶ್ ಎಂ., ನವೀನ್ ಕುಮಾರ್ ಬಿ., ನೀಲೇಶ್ ಎಸ್. ಶೆಟ್ಟಿ., ತಂಡದಲ್ಲಿ ಭಾಗವಹಿಸಿದ್ದರು. ಗೌರೀಶ್ ಎಂ ದ್ವೀತಿಯ ಬಿ.ಎ. ಎಲ್.ಎಲ್.ಬಿ. ಕರ್ನಾಟಕ ರಾಜ್ಯ […]

ಸರ್ಜಿಕಲ್ ಸ್ಟ್ರೈಕ್ ದಿನ

ಸರ್ಜಿಕಲ್ ಸ್ಟ್ರೈಕ್ ದಿನ

Saturday, September 29th, 2018

ವಿವೇಕಾನಂದ ಕಾನೂನು ಕಾಲೇಜಿನ ರಾಷ್ರೀಯ ಸೇವಾ ಯೋಜನೆ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ದಿನಾಂಕ 29-09-2018 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ, ಭಾರತೀಯ ಸೈನ್ಯವು ಐತಿಹಾಸಿಕ ಪರಂಪರೆಯನ್ನು ಹೊಂದಿದ್ದು, ಸ್ವಾತಂತ್ರ್ಯದ ನಂತರದಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಸೈನ್ಯದ ಪರಾಕ್ರಮವು ಜನರಿಗೆ ತಲುಪುವ ಕೆಲಸ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಕಾಲೇಜಿನ ಈ ಕಾರ್ಯ ಶ್ಲಾಘನೀಯ […]

ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Tuesday, September 25th, 2018

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 24-09-2018 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮುಂಡಾಜೆ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಮತ್ತು ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀ ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿ ಮಾಡುತ್ತದೆ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ರಾಷ್ಟ್ರೀಯ ಸೇವಾ ಯೋಜನೆ […]

ಕಾನೂನು ರಸಪ್ರಶ್ನೆ ಕಾರ್ಯಕ್ರಮ

ಕಾನೂನು ರಸಪ್ರಶ್ನೆ ಕಾರ್ಯಕ್ರಮ

Monday, September 24th, 2018

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ರಸಪ್ರಶ್ನೆ ಕಾರ್ಯಕ್ರಮವು ದಿನಾಂಕ 8-9-2018 ರಂದು ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರಿನ ಎಸ್. ಡಿ. ವಿಶ್ರಾಂತ ಪ್ರಾಧ್ಯಾಪಕರಾದ, ಶ್ರೀ ಉದಯ್ ಕುಮಾರ್ ಇವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳು, ಆಧುನಿಕ ಯುಗದಲ್ಲಿ ಶಿಕ್ಷಣದ ಅವಶ್ಯಕತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಯುವಜನತೆಯ ಭಾಗವಹಿಸುವಿಕೆಯ ಕುರಿತು ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನೂನು ಕಾಲೇಜಿನ ಡೈರಕ್ಟರ್ ಆಫ್ ಲೀಗಲ್ ಸ್ಟಡೀಸ್ ಡಾ. ಬಿ. ಕೆ. ರವೀಂದ್ರ ವಹಿಸಿದ್ದರು. ನಂತರ ವಿದ್ಯಾರ್ಥಿಗಳನ್ನು ತಂಡಗಳಾಗಿ […]

ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ

ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ

Wednesday, September 19th, 2018

ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿನಿಯರ ತಂಡವು, ದಾವಣಗೆರೆಯ ಆರ್. ಎಲ್. ಕಾನೂನು ಕಾಲೇಜಿನಲ್ಲಿ ದಿನಾಂಕ 19-9-2018 ರಂದು ಜರುಗಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟದ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿಯರಾದ ಅಕ್ಷಿತಾ, ಅಂತಿಮ ವರ್ಷದ ಬಿ. ಎ. ಎಲ್ ಎಲ್ ಬಿ, ಸೌಮ್ಯ ಪಿ. ಅಂತಿಮ ವರ್ಷದ ಬಿ. ಎ. ಎಲ್ ಎಲ್ ಬಿ, ಸಂಧ್ಯಾ ಕೆ. ಎಸ್., ದ್ವಿತೀಯ ಎಲ್. ಎಲ್. ಬಿ., ಲವೀನಾ, ದ್ವಿತೀಯ ಬಿ.ಎ. ಎಲ್ […]

ಮೂಟ್ ಸೊಸೈಟಿ ಉದ್ಘಾಟನೆ

ಮೂಟ್ ಸೊಸೈಟಿ ಉದ್ಘಾಟನೆ

Tuesday, September 11th, 2018

ವಿವೇಕಾನಂದ ಕಾನೂನು ಕಾಲೇಜಿನ ಮೂಟ್ ಸೊಸೈಟಿಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 3-9-2018 ರಂದು ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಉಡುಪಿಯ ಸೀನಿಯರ್ ಲೀಗಲ್ ಎಕ್ಸ್ ಕ್ಯೂಟಿವ್ ಶ್ರೀ ಮನೀಶ್ ಕೆ. ಸಾಲಿಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಣಕು ನ್ಯಾಯಾಲಯದ ಮಹತ್ವ ಮತ್ತು ಉಪಯೋಗಗಳನ್ನು ತಿಳಿಸುತ್ತಾ, ತನ್ನ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ವಕೀಲರಾದ ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಮಾತನಾಡಿ, ವಕೀಲ ವೃತ್ತಿಯಲ್ಲಿ ಸಂವಹನ ಎಂಬುದು ಬಹುಮುಖ್ಯ ಕಾನೂನು ವಿದ್ಯಾರ್ಥಿಗಳು ಧೈರ್ಯದಿಂದ […]

ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆ

Wednesday, August 15th, 2018

ವಿವೇಕಾನಂದ ಕಾನೂನು ಕಾಲೇಜಿನಲ್ಲಿ 72 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ನಿವೃತ್ತ ಸೇನಾಧಿಕಾರಿಯಾದ ಶ್ರೀ ಶ್ರೀರಂಗ ಶಾಸ್ತ್ರಿ ಮಣಿಲ ಇವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ನಡೆದ ಸಭಾಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ, ಶ್ರೀರಂಗ ಶಾಸ್ತ್ರಿ ಮಣಿಲ ಅವರು, ದೇಶಭಕ್ತಿ ಮತ್ತು ಯುವ ಸಮೂಹದ ಜವಾಬ್ದಾರಿಗಳ ಕುರಿತು ಮಾತನಾಡಿ, ಸೇನೆಯಲ್ಲಿ ಕಾನೂನು ವಿದ್ಯಾರ್ಥಿಗಳ ಅವಶ್ಯಕತೆಯನ್ನು ತಿಳಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣೇಶ್ ಜೋಷಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಸಂಚಾಲಕರಾದ ಶ್ರೀ ವಿಜಯನಾರಾಯಣ ಕೆ. ಎಂ, ಡಾ. […]

Highslide for Wordpress Plugin