News and Events | Vivekananda Law College, Puttur | Page 2
ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಎನ್.ಎಸ್.ಎಸ್ ವಿಶೇಷ ಶಿಬಿರ ಉದ್ಘಾಟನೆ

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಎನ್.ಎಸ್.ಎಸ್ ವಿಶೇಷ ಶಿಬಿರ ಉದ್ಘಾಟನೆ

Saturday, May 5th, 2018

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಹುಬ್ಬಳ್ಳಿ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 3-5-2018 ರಂದು ನಡೆಯಿತು. ವಿವೇಕಾನಂದ ಮಹಾವಿದ್ಯಾಲಯದ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾದ ಡಾ. ರೋಹಿಣಾಕ್ಷ ಶಿರ್ಲಾಲು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು, ಯುವ ಜನತೆಗೆ ವೇದಿಕೆಯನ್ನು ನಿರ್ಮಿಸಿಕೊಡುತ್ತಿದೆ. ವಿದ್ಯಾರ್ಥಿಗಳು ಅದನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, […]

’ಒಡಂಬಡಿಕೆ’ ವಿಶೇಷ ಉಪನ್ಯಾಸ

’ಒಡಂಬಡಿಕೆ’ ವಿಶೇಷ ಉಪನ್ಯಾಸ

Tuesday, April 24th, 2018

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ, ದಿನಾಂಕ 24-04-2018 ರಂದು ಒಡಂಬಡಿಕೆ ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಪುತ್ತೂರಿನ ವಕೀಲರಾದ ಶ್ರೀ ಬೆಟ್ಟ ಅನೀಶ್ ಕೃಷ್ಣರವರು ಮಾತಾನಾಡುತ್ತಾ ಒಡಂಬಡಿಕೆಯು ನ್ಯಾಯಾಲಯದ ಒತ್ತಡವನ್ನು ಕಡಿಮೆಗೊಳಿಸಲು ಬಹಳಷ್ಟು ಸಹಕಾರ ಎಂದರು. ವಿವೇಕಾನಂದ ಕಾನೂನು ಕಾಲೇಜಿನ ಪ್ರಾಶುಂಪಾಲರಾದ ಶ್ರೀ ಕೆ. ಜಿ. ಕೃಷ್ಣಮೂರ್ತಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ವಕೀಲರಾದ ಶ್ರೀ ಸುಧೀರ್ ಕುಮಾರ್ ತೋಳ್ಪಾಡಿ ಹಾಗೂ ಕಾಲೇಜಿನ ಭೋದಕ ಭೋದಕೇತರ ವರ್ಗ ಮತ್ತು ವಿದ್ಯಾರ್ಥಿಗಳು […]

ವಿಸ್ತೃತ ಕಟ್ಟಡಕ್ಕೆ ಶಿಲಾನ್ಯಾಸ

ವಿಸ್ತೃತ ಕಟ್ಟಡಕ್ಕೆ ಶಿಲಾನ್ಯಾಸ

Friday, April 6th, 2018

ಕಾನೂನು ಮಹಾವಿದ್ಯಾಲಯಗಳು ಯಾವ ಸಂದರ್ಭದಲ್ಲೂ ತಮ್ಮ ಮೂಲ ಉದ್ದೇಶಗಳನ್ನು ಮರೆಯಬಾರದು ಎಂದು ಭಾರತದ ಅಡಿಷನಲ್ ಸಾಲಿಸಿಟರ್ ಜನರಲ್, ಶ್ರೀ ಕೆ. ಎಂ. ನಟರಾಜ್ ಹೇಳಿದರು. ಇವರು 24-03-2018 ರಂದು ಇವರು ವಿಸ್ತೃತ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಿದ್ದರು. ಕಾನೂನು ಮಹಾವಿದ್ಯಾಲಯಗಳು ಎಲ್ಲಾ ವರ್ಗದವರಿಗೂ ಕಾನೂನು ಶಿಕ್ಷಣವನ್ನು ನೀಡುವ ಮತ್ತು ಸಮಾಜಕ್ಕೆ ಉತ್ತಮ ನ್ಯಾಯವಾದಿಗಳನ್ನು ಹಾಗೂ ನ್ಯಾಯಾಧೀಶರನ್ನು ನೀಡುವ ಘನ ಉದ್ದೇಶದಿಂದ ಕಾರ್ಯನಿರ್ವಹಿಸಬೇಕು. ಆದರೆ ಇಂದು ಕಾನೂನು ಮಹಾವಿದ್ಯಾಲಯಗಳು ಕಾರ್ಪೋರೇಟ್ ಕಂಪನಿಗಳ ರೀತಿಯಲ್ಲಿ ಮಾರ್ಪಾಡುಗೊಳ್ಳುತ್ತಿರುವುದು ವಿಷಾದನೀಯ ಎಂದರು. […]

ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆ ಕುರಿತು ಉಪನ್ಯಾಸ

ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆ ಕುರಿತು ಉಪನ್ಯಾಸ

Thursday, April 5th, 2018

ವಿವೇಕಾನಂದ ಕಾನೂನು ಕಾಲೇಜಿನ, ಮಾನವ ಹಕ್ಕುಗಳ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ, ದಿನಾಂಕ 4-4-2018 ಬುಧವಾರದಂದು, ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ, ಡಾ. ರವೀಂದ್ರನಾಥ್ ಶಾನುಭಾಗ್ ಇವರಿಂದ ಹಿರಿಯ ನಾಗರಿಕರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಎಲ್ಲಾ ವೃತ್ತಿಯಲ್ಲಿರುವವರು, ಅವರ ವೃತ್ತಿಗೆ ನ್ಯಾಯ ಕೊಡಿಸಬೇಕು. ಆಗ ಸಮಾಜದಲ್ಲಿ ಎಲ್ಲರಿಗೂ ನ್ಯಾಯ ಸಿಗುವಂತೆ ಆಗುತ್ತದೆ ಎಂದು ಅವರು ತಿಳಿಸಿ, ಕೆಲವೊಂದು ನಿದರ್ಶನಗಳನ್ನು ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ, ಶ್ರೀ ಕೆ.ಜಿ. ಕೃಷ್ಣಮೂರ್ತಿ ಉಪಸ್ಥಿತರಿದ್ದರು. […]

ವಾರ್ಷಿಕ ದಿನಾಚರಣೆ 2018

ವಾರ್ಷಿಕ ದಿನಾಚರಣೆ 2018

Saturday, March 24th, 2018

ವಿವೇಕಾನಂದ ಕಾನೂನು ಕಾಲೇಜಿನಲ್ಲಿ, ನೂತನ ಕಟ್ಟಡ ನಿರ್ಮಾಣ ಪ್ರಯುಕ್ತ, ಭೂಮಿಪೂಜಾ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಕಾಲೇಜಿನ ವಾರ್ಷಿಕ ದಿನಾಚರಣೆ ದಿನಾಂಕ 24-03-2018 ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಬೆಳಿಗ್ಗೆ ಗಂಟೆ 10 ಕ್ಕೆ, ಕಾಲೇಜಿನ ವಾರ್ಷಿಕ ದಿನಾಚರಣೆಯ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಹಿರಿಯ ವಕೀಲರು ಮತ್ತು ಕಾನೂನು ಕಾಲೇಜಿನ ಸ್ಥಾಪಕಾಧ್ಯಕ್ಷರಾದ ಶ್ರೀ ಪಂಜಿಗುಡ್ಡೆ ರಾಮಚಂದ್ರಭಟ್ ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಡಾ. ಸುಧಾ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಸಂಚಾಲಕರಾದ, ಶ್ರೀ ವಿಜಯನಾರಾಯಣ […]

ವಾರ್ಷಿಕ ಕ್ರೀಡಾಕೂಟ

ವಾರ್ಷಿಕ ಕ್ರೀಡಾಕೂಟ

Thursday, March 22nd, 2018

ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2017-18 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ದಿನಾಂಕ 16-03-2018 ರಂದು ವಿವೇಕಾನಂದ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಮಂಜುನಾಥ್. ಎನ್. ಎಸ್. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಜಿ ಶ್ರೀ ಸುರೇಂದ್ರ ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡೆಯು ಸಹ ಶಿಕ್ಷಣದ ಒಂದು ಭಾಗವಿದ್ದಂತೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಮಂಜುನಾಥ್. ಎನ್. […]

Bhoomi Pooja and College Day

Bhoomi Pooja and College Day

Wednesday, March 21st, 2018
ಬೆಳ್ತಂಗಡಿಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Wednesday, March 14th, 2018

ವಿವೇಕಾನಂದ ಕಾನೂನು ಕಾಲೇಜಿನ ವತಿಯಿಂದ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ಇಲ್ಲಿ ’ಕಾನೂನು ಮಾಹಿತಿ ಹಾಗೂ ಕಾನೂನು ಉದ್ಯೋಗ ಅವಕಾಶಗಳ’ ಕಾರ್ಯಕ್ರಮವು, ದಿನಾಂಕ 13-3-2018 ರಂದು ನಡೆಯಿತು. ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ಉಪನ್ಯಾಸಕರಾದ ಶ್ರೀ ಕಾರ್ತಿಕ್ ಆನಂದ್ ಇವರು ಕಾನೂನು ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್ ಯು., ಮೂಲಭೂತ ಕರ್ತವ್ಯಗಳ ಬಗ್ಗೆ ಮತ್ತು ಸುಲತ ಎಂ., ಸೈಬರ್ ಅಪರಾಧ ಕುರಿತು ಮಾಹಿತಿ ನೀಡಿದರು. ಸರಕಾರಿ ಪ್ರಥಮ ದರ್ಜೆ […]

ಬಂಟ್ವಾಳದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

ಬಂಟ್ವಾಳದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Friday, March 9th, 2018

ವಿವೇಕಾನಂದ ಕಾನೂನು ಕಾಲೇಜಿನ ವತಿಯಿಂದ, ಸರಕಾರಿ ಪದವಿ ಕಾಲೇಜು, ಬಿ.ಸಿ ರೋಡು, ಬಂಟ್ವಾಳ ಇಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮವು, ದಿನಾಂಕ 9-3-2018 ರಂದು ನಡೆಯಿತು. ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ಉಪನ್ಯಾಸಕರಾದ ಶ್ರೀ ಕಾರ್ತಿಕ್ ಆನಂದ್ ಇವರು ಕಾನೂನು ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್. ಯು, ಮೂಲಭೂತ ಕರ್ತವ್ಯಗಳ ಬಗ್ಗೆ ಮತ್ತು ಸುಲತ. ಎಂ, ಸೈಬರ್ ಅಪರಾಧ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳದ ವಕೀಲರು ಶ್ರೀಮತಿ ಆಶಾ […]

ಕಾನೂನು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಕಾನೂನು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Thursday, March 8th, 2018

ಪುತ್ತೂರು : ಈಗಿನ ಸಮಾಜದಲ್ಲಿ ಮಹಿಳೆಯರು ಹಲವಾರು ಸವಾಲುಗಳನ್ನೆದುರಿಸುತ್ತಿದ್ದರೂ ಅಂತಹ ಸವಾಲುಗಳನ್ನು ಹಸನ್ಮುಖಿಗಳಾಗಿ ಎದುರಿಸಲು ಸಾಧ್ಯ ಇದೆ ಎಂದು ಕರ್ನಾಟಕ ಸಾಹಿತ್ಯ ಪ್ರಶಸ್ತಿ ವಿಜೇತರಾದ ಶ್ರೀಮತಿ. ಭುವಾನೇಶ್ವರಿ ಹೆಗಡೆ ನಗರದ ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವ ಸಂಸ್ಥೆಯ ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯವಾದ ಪ್ರಸಕ್ತ ಸಮಯ : ನಗರ ಮತ್ತು ಗ್ರಾಮೀಣ ಮಹಿಳೆಯರ ಜೀವನದ ಪರಿವರ್ತನೆಯಲ್ಲಿ ಕಾರ್ಯಕರ್ತರು ತೊಡಗಬೇಕು ಎಂಬುದನ್ನು ಹಾಸ್ಯ ಚಟಾಕಿಗಳೊಂದಿಗೆ ಶ್ರೀಮತಿ ಭುವಾನೇಶ್ವರಿ ಹೆಗಡೆಯವರು ವಿದ್ಯಾರ್ಥಿಗಳಿಗೆ ಮನವರಿಕೆ […]

Highslide for Wordpress Plugin