ವಿಶ್ವ ಏಡ್ಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

ವಿಶ್ವ ಏಡ್ಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

Tuesday, December 3rd, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ದಿನಾಂಕ 3-12-2013 ರಂದು “ವಿಶ್ವ ಏಡ್ಸ್ ” ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ|| ಸುಧಾ ರಾವ್, ನ್ಯಾಯವಾದಿ ಶ್ರೀ ಶ್ಯಾಮ್ ಪ್ರಸಾದ್ ಕೈಲಾರ್ ರವರು ಆಗಮಿಸಿದ್ದರು. ವೇದಿಕೆಯಲ್ಲಿ ಗಣ್ಯರ ಸಹಿತ ಉಪನ್ಯಾಸಕಿ ಶ್ರೀಮತಿ ಜ್ಯೋತ್ಸ್ನಾ ಹಾಗೂ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಯವರು ಅಲಂಕರಿಸಿದ್ದರು. ಬಳಿಕ ಡಾ|| […]

ಮಾನವ ಹಕ್ಕುಗಳು ಮತ್ತು ಅದರ ವಾಸ್ತವತೆ - ಕಾರ್ಯಾಗಾರ

ಮಾನವ ಹಕ್ಕುಗಳು ಮತ್ತು ಅದರ ವಾಸ್ತವತೆ – ಕಾರ್ಯಾಗಾರ

Monday, December 2nd, 2013

“ಮಾನವ ಹಕ್ಕುಗಳು ಮತ್ತು ಅದರ ವಾಸ್ತವತೆ” ಎಂಬ ಶೀರ್ಷಿಕೆಯಡಿ ಒಂದು ದಿನದ ಕಾರ್ಯಾಗಾರವನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯವು ದಿನಾಂಕ 30-11-2013 ರಂದು ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿತ್ತು. ಮುಖ್ಯ ಅತಿಥಿಯಾಗಿ ಉಡುಪಿಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಹಾಗೂ ಬಳಕೆದಾರರ ವೇದಿಕೆಯ ಅಧ್ಯಕ್ಷರಾದ ಶ್ರೀ “ರವೀಂದ್ರನಾಥ್ ಶ್ಯಾನ್‌ಭೋಗ್” ಆಗಮಿಸಿದ್ದರು. ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಉಪಸ್ಥಿತರಿದ್ದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಬಳಿಕ ಪ್ರಾಂಶುಪಾಲರು ಪ್ರಸ್ಥಾವನೆಗೈದು ಅತಿಥಿಗಳನ್ನು ಪರಿಚಯಿಸಿದರು. ತದನಂತರ ಶ್ರೀ ಶ್ಯಾನ್‌ಭೋಗ್ ರವರು ಮಾತಾಡುತ್ತಾ ಸರಿಸುಮಾರು ಬಹುತೇಕ […]

ಅಂತರ್ ಕಾಲೇಜು ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

ಅಂತರ್ ಕಾಲೇಜು ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

Saturday, November 30th, 2013

ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಹಾಗೂ ಸರಸ್ವತಿ ಕಾನೂನು ವಿದ್ಯಾಲಯ ಚಿತ್ರದುರ್ಗ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ ಮತ್ತು ವಿಶ್ವವಿದ್ಯಾನಿಲಯ ತಂಡದ ಆಯ್ಕೆ ಪ್ರಕ್ರಿಯೆಯು ದಿನಾಂಕ 19 ಮತ್ತು 20 ರಂದು ಚಿತ್ರದುರ್ಗದಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ತಂಡವು ದ್ವಿತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ವಿಶ್ವವಿದ್ಯಾನಿಲಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಅನಿಲ್ ಕುಮಾರ್ ಚತುರ್ಥ ಬಿ.ಎ.,ಎಲ್‌ಎಲ್.ಬಿ, ಯೂಸುಫ್ ಇರ್ಫಾನ್ ದ್ವಿತೀಯ ಎಲ್ ಎಲ್,ಬಿ […]

ಮತದಾನ ಮತ್ತು ಮತದಾರನ ಹಕ್ಕುಗಳು ಕುರಿತು ವಿಶೇಷ ಉಪನ್ಯಾಸ

ಮತದಾನ ಮತ್ತು ಮತದಾರನ ಹಕ್ಕುಗಳು ಕುರಿತು ವಿಶೇಷ ಉಪನ್ಯಾಸ

Tuesday, November 26th, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯವು ದಿನಾಂಕ 25-11-2013 ರಂದು “ಮತದಾನ ಮತ್ತು ಮತದಾರನ ಹಕ್ಕುಗಳು” ಎಂಬ ವಿಷಯದ ಬಗೆಗೆ ವಿಶೇಷ ಅತಿಥಿ ಉಪನ್ಯಾಸವನ್ನೇರ್ಪಡಿಸಿತ್ತು. ಅತಿಥಿಗಳಾಗಿ ಪುತ್ತೂರು ತಾಲೂಕಿನ ಮಾನ್ಯ ತಹಶೀಲ್ದಾರರಾದ ಶ್ರೀ ಕುಳ್ಳೇಗೌಡರು ಆಗಮಿಸಿದ್ದರು. ಕಾರ್ಯಕ್ರಮದ ಕಿರುವೇದಿಕೆಯಲ್ಲಿ ಉಪ ತಹಶೀಲ್ದಾರ್, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ.ಆರ್.ಆಚಾರ್ಯರವರ ಗೌರವ ಉಪಸ್ಥಿತಿಯಿತ್ತು. ಬಳಿಕ ಮಾತನಾಡಿದ ತಹಶೀಲ್ದಾರ್‌ರವರು ಭಾರತ ಒಂದು ಪ್ರಬಲ ಪ್ರಜಾಪ್ರಭುತ್ವದ ರಾಷ್ಟ್ರವಾಗಿದೆ ಏಕೆಂದರೆ ಇಲ್ಲಿ ಸಾಮಾನ್ಯ ಜನರಿಗೆ ಕೊಡುವ ಗೌರವ, […]

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕನಕದಾಸ ಜಯಂತಿ ಆಚರಣೆ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕನಕದಾಸ ಜಯಂತಿ ಆಚರಣೆ

Wednesday, November 20th, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕನಕ ದಾಸರ ಜನ್ಮದಿನವಾದ ದಿನಾಂಕ 20-11-2013 ರಂದು ಆ ಶ್ರೇಷ್ಟ ದಾರ್ಶನಿಕನ ಜಯಂತಿಯನ್ನಾಚರಿಸಿತು. ಕಾಲೇಜು ಸಭಾಂಗಣದಲ್ಲಿ ಅನೌಪಚಾರಿಕವಾಗಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ, ಎಲ್ಲಾ ಉಪನ್ಯಾಸಕ ವೃಂದದವರು, ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ರಿ.ಶ. ೧೫ ನೇ ಶತಮಾನದಲ್ಲಿ ಸಮಾಜ ಕಂಡ ಶ್ರೇಷ್ಟ ದಾರ್ಶನಿಕ, ಕೀರ್ತನೆಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ಸಮಾಜ ಸುಧಾರಕನ ಬಗ್ಗೆ ಪ್ರಾಂಶುಪಾಲರು ತಮ್ಮೆರಡು ಮಾತುಗಳಲ್ಲಿ ಹೇಳಿದರು. ಜಾತಿ ಮತ ಭೇಧವನ್ನು ಇಡೀ ಸಮಾಜದಿಂದಲೇ […]

'ಕಾಂಪಿಟೀಶನ್ ಲಾ' ಅತಿಥಿ ಉಪನ್ಯಾಸ

‘ಕಾಂಪಿಟೀಶನ್ ಲಾ’ ಅತಿಥಿ ಉಪನ್ಯಾಸ

Tuesday, November 19th, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯವು ದಿನಾಂಕ ೧೬-೧೧-೨೦೧೩ ರ ಶನಿವಾರದಂದು “ಕಾಂಪಿಟೀಶನ್ ಲಾ”ಎಂಬ ವಿಷಯದ ಬಗೆಗೆ ಅತಿಥಿ ಉಪನ್ಯಾಸವನ್ನು ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿತ್ತು. ಅತಿಥಿಯಾಗಿ ಪ್ರೀತಿಕಾ ಪಿಲಿಂಜ ಆಗಮಿಸಿದ್ದರು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕೆ ಆರ್ ಆಚಾರ್‍ಯ ಉಪಸ್ಥಿತರಿದ್ದರು. ನಂತರ ಉಪನ್ಯಾಸವು ಜರುಗಿತು. ಕಾರ್‍ಯಕ್ರಮವನ್ನು ಸಂಗೀತಾ ಎಸ್ ಎಮ್ ನಿರ್ವಹಿಸಿದರು, ಅಶ್ವಿನಿ ಕುಮಾರಿ ಧನ್ಯವಾದ ಸಮರ್ಪಸಿದರು

ಸ್ವರಮಾಧುರ್ಯ – ಹಾಡೋಣ ಬನ್ನಿ ಸಂಗೀತಾಭಿಯಾನ

ಸ್ವರಮಾಧುರ್ಯ – ಹಾಡೋಣ ಬನ್ನಿ ಸಂಗೀತಾಭಿಯಾನ

Tuesday, November 19th, 2013

ವಿವೇಕಾನಂದ ಕಾನೂನು ಮಹಾವಿದ್ಯಾಲದಲ್ಲಿ ದಿನಾಂಕ 12-11-13 ರಂದು “ಸ್ವರಮಾಧುರ್ಯ” ಸುಗಮಸಂಗೀತ ತಂಡ, ಪುತ್ತೂರು ಇದು ತನ್ನ “ಹಾಡೋಣ ಬನ್ನಿ” ಎಂಬ ಸಂಗೀತಾಭಿಯಾನದ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಯವರು ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ.ಕೆ.ಆರ್. ಆಚಾರ್ಯ, ವಿವೇಕಾನಂದ ಕಾಲೇಜ್ ಆಫ್ ಎಜ್ಯುಕೇಶನ್ ನ ಪ್ರಾಧ್ಯಾಪಕಿಯಾದ ಡಾ|| ಶೋಭಿತಾ ಸತೀಶ್ , ಸೇಕ್ರೆಡ್ ಹಾರ್ಟ್ ಮಡಂತ್ಯಾರ್ ನ ಪ್ರಾದ್ಯಾಪಕರಾದ ಪ್ರೋ.ದತ್ತಾತ್ರೇಯ ರಾವ್, ವಕೀಲರು ಹಾಗೂ ಸ್ವರಮಾಧುರ್ಯ […]

ರಕ್ತದಾನ ಶಿಬಿರ ಮತ್ತು ರಕ್ತ ವರ್ಗೀಕರಣ ಕಾರ್ಯಕ್ರಮ

ರಕ್ತದಾನ ಶಿಬಿರ ಮತ್ತು ರಕ್ತ ವರ್ಗೀಕರಣ ಕಾರ್ಯಕ್ರಮ

Tuesday, October 22nd, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯ ಹಾಗೂ ರೋಟರಿ ಕ್ಲಬ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 08-10-2013 ರಂದು ರಕ್ತದಾನ ಶಿಬಿರ ಮತ್ತು ರಕ್ತ ವರ್ಗೀಕರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ|| ರಾಮಚಂದ್ರ ಭಟ್, ಹಿರಿಯ ವೈದ್ಯಕೀಯ ಅಧಿಕಾರಿ ಇವರು ಭಾಗವಹಿಸಿದ್ದರು. ಇವರು ಮಾತನಾಡುತ್ತಾ ರಕ್ತದಾನ ಮಹಾದಾನ, ಯುವತರುಣರೇ ತುಂಬಿರುವಂತಹ ಬಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು, ನಮ್ಮ ಒಂದೊಂದು ಹನಿರಕ್ತವು  ಒಂದೊಂದು ಜೀವವನ್ನು ಬದುಕಿಸುತ್ತದೆ, ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ ಎಂದರು. […]

The Moot Court and Legal Aid Society  ಉದ್ಘಾಟನಾ ಸಮಾರಂಭ

The Moot Court and Legal Aid Society ಉದ್ಘಾಟನಾ ಸಮಾರಂಭ

Friday, October 11th, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯವು ದಿನಾಂಕ 05-10-2013 ರಂದು “The Moot Court and Legal Aid Society” ಇದರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿತ್ತು. ಸಮಾರಂಭದ  ಉದ್ಘಾಟಕರಾಗಿ ಶ್ರೀ ಶಿವಶಂಕರೇಗೌಡ, 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನಾಯಾಲಯ ಪುತ್ತೂರು, ಇವರು ಆಗಮಿಸಿದ್ದರು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ಭಾಷಣದಲ್ಲಿ ಯುವ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು, ತಮ್ಮಲ್ಲಿಯೇ ಕೀಳರಿಮೆ ಹೊಂದಬಾರದು ತನ್ನ ಬದುಕಿನಲ್ಲಿ ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನಿಟ್ಟುಕೊಳ್ಳಬೇಕು ಎಂದು ಹುರಿದುಂಬಿಸಿದರು. ಈ ಕಾರ್ಯಕ್ರಮಕ್ಕೆ […]

ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ದಿನಾಚರಣೆ

ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ದಿನಾಚರಣೆ

Tuesday, September 17th, 2013

ಇಲ್ಲಿನ ಪುತ್ತೂರು ಕಾನೂನು ಕಾಲೇಜಿನ 2013-14ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ವಿದ್ಯಾರ್ಥಿಗಳ ಪ್ರತಿಭಾ ದಿನಾಚರಣೆ ಸೆ 16ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿ ಸಂಘವನ್ನು ದೀಪ ಬೆಳಗಿಸಿದ ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾದ ಡಾ|| ಟಿ. ಆರ್. ಸುಬ್ರಹ್ಮಣ್ಯರವರು ಮಾತನಾಡಿ, ವಿದ್ಯಾ ಸಂಸ್ಥೆಗಳು ಶಿಕ್ಷಣದ ಗುಣಮಟ್ಟವನ್ನು ಕಾಪಾಡುವುದು ಮುಖ್ಯ. ಉತ್ತಮ ಶಿಕ್ಷಕರಿಂದ ಆದರ್ಶ ವಿದ್ಯಾರ್ಥಿಗಳು ನಿರ್ಮಾಣವಾಗುತ್ತಾರೆ ಎಂದು ಹೇಳಿದರು. ಮೌಲ್ಯಾಧಾರಿತ ಶಿಕ್ಷಣ ನೀಡುವುದು […]

Highslide for Wordpress Plugin