ರಕ್ತದಾನ ಶಿಬಿರ ಮತ್ತು ರಕ್ತ ವರ್ಗೀಕರಣ ಕಾರ್ಯಕ್ರಮ

ರಕ್ತದಾನ ಶಿಬಿರ ಮತ್ತು ರಕ್ತ ವರ್ಗೀಕರಣ ಕಾರ್ಯಕ್ರಮ

Tuesday, October 22nd, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯ ಹಾಗೂ ರೋಟರಿ ಕ್ಲಬ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 08-10-2013 ರಂದು ರಕ್ತದಾನ ಶಿಬಿರ ಮತ್ತು ರಕ್ತ ವರ್ಗೀಕರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ|| ರಾಮಚಂದ್ರ ಭಟ್, ಹಿರಿಯ ವೈದ್ಯಕೀಯ ಅಧಿಕಾರಿ ಇವರು ಭಾಗವಹಿಸಿದ್ದರು. ಇವರು ಮಾತನಾಡುತ್ತಾ ರಕ್ತದಾನ ಮಹಾದಾನ, ಯುವತರುಣರೇ ತುಂಬಿರುವಂತಹ ಬಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು, ನಮ್ಮ ಒಂದೊಂದು ಹನಿರಕ್ತವು  ಒಂದೊಂದು ಜೀವವನ್ನು ಬದುಕಿಸುತ್ತದೆ, ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ ಎಂದರು. […]

The Moot Court and Legal Aid Society  ಉದ್ಘಾಟನಾ ಸಮಾರಂಭ

The Moot Court and Legal Aid Society ಉದ್ಘಾಟನಾ ಸಮಾರಂಭ

Friday, October 11th, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯವು ದಿನಾಂಕ 05-10-2013 ರಂದು “The Moot Court and Legal Aid Society” ಇದರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿತ್ತು. ಸಮಾರಂಭದ  ಉದ್ಘಾಟಕರಾಗಿ ಶ್ರೀ ಶಿವಶಂಕರೇಗೌಡ, 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನಾಯಾಲಯ ಪುತ್ತೂರು, ಇವರು ಆಗಮಿಸಿದ್ದರು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ಭಾಷಣದಲ್ಲಿ ಯುವ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು, ತಮ್ಮಲ್ಲಿಯೇ ಕೀಳರಿಮೆ ಹೊಂದಬಾರದು ತನ್ನ ಬದುಕಿನಲ್ಲಿ ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನಿಟ್ಟುಕೊಳ್ಳಬೇಕು ಎಂದು ಹುರಿದುಂಬಿಸಿದರು. ಈ ಕಾರ್ಯಕ್ರಮಕ್ಕೆ […]

ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ದಿನಾಚರಣೆ

ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ದಿನಾಚರಣೆ

Tuesday, September 17th, 2013

ಇಲ್ಲಿನ ಪುತ್ತೂರು ಕಾನೂನು ಕಾಲೇಜಿನ 2013-14ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ವಿದ್ಯಾರ್ಥಿಗಳ ಪ್ರತಿಭಾ ದಿನಾಚರಣೆ ಸೆ 16ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿ ಸಂಘವನ್ನು ದೀಪ ಬೆಳಗಿಸಿದ ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾದ ಡಾ|| ಟಿ. ಆರ್. ಸುಬ್ರಹ್ಮಣ್ಯರವರು ಮಾತನಾಡಿ, ವಿದ್ಯಾ ಸಂಸ್ಥೆಗಳು ಶಿಕ್ಷಣದ ಗುಣಮಟ್ಟವನ್ನು ಕಾಪಾಡುವುದು ಮುಖ್ಯ. ಉತ್ತಮ ಶಿಕ್ಷಕರಿಂದ ಆದರ್ಶ ವಿದ್ಯಾರ್ಥಿಗಳು ನಿರ್ಮಾಣವಾಗುತ್ತಾರೆ ಎಂದು ಹೇಳಿದರು. ಮೌಲ್ಯಾಧಾರಿತ ಶಿಕ್ಷಣ ನೀಡುವುದು […]

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾರ್ಯಗಾರ

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾರ್ಯಗಾರ

Friday, August 30th, 2013

ಕಾನೂನು ಶಿಕ್ಷಣ ಹಾಗೂ ಉದ್ಯೋಗ ಮಾಹಿತಿ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ದಿನಾಂಕ 19/08/2013 ರಂದು ವಿವೇಕಾನಂದ ಕಾನೂನು ಕಾಲೇಜು ಹಾಗೂ ಅನಿಕೇತನ ವಿದ್ಯಾಸಂಸ್ಥೆಯ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಉದ್ಘಾಟಕರಾಗಿ ಆಗಮಿಸಿದ ಬೆಳ್ತಂಗಡಿಯ ಖ್ಯಾತ ವಕೀಲರಾದ ಶ್ರೀ ಸುಭ್ರಹ್ಮಣ್ಯ ಕುಮಾರ್ ಅಗರ್ತ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕೆ.ಆರ್.ಆಚಾರ್ಯ,ಸಂಚಾಲಕರಾದ ಶ್ರೀ ಸಂತೋಷ್ ಬೊನಂತಾಯ,ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಹಾಗೂ ಅನಿಕೇತನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೃಷ್ಣಪ್ರಸಾದ್ ನಡ್ಸಾರ್ […]

ಅತಿಥಿ ಉಪನ್ಯಾಸ

ಅತಿಥಿ ಉಪನ್ಯಾಸ

Friday, August 30th, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯವು ದಿನಾಂಕ 17/08/2013 ರಂದು ನಾಯಕತ್ವ ಮತ್ತು ಚುನಾವಣೆಯ ಕುರಿತಾಗಿ ಅತಿಥಿ ಉಪನ್ಯಾಸವನ್ನು ಏರ್ಪಡಿಸಿತ್ತು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ವಿಶ್ವಕರ್ಮ ಸೇವಾ ವ್ಯವಸಾಯಿಕ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ರವರು ಆಗಮಿಸಿದ್ದರು . ಅವರು ಮಾತನಾಡುತ್ತಾ ವಿಧ್ಯಾರ್ಥಿ ದೆಸೆಯಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳುವುದು ಮುಖ್ಯ.ನಾಯಕತ್ವ ಗುಣವು ಕೆಲವರಲ್ಲಿ ಹುದುಗಿಕೊಂಡಿರುತ್ತದೆ ಅದನ್ನು ಶೋಧಿಸುವ ಕೆಲಸ ಚುನಾವಣೆಗಳಿಂದಾಗಬೇಕು.ಕಾಲೇಜು ವಿಧ್ಯಾರ್ಥಿ ಸಂಘದ ಮುಖ್ಯ ಉದ್ದೇಶವೇನೆಂದರೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವುದೇ ಹೊರತು ಚುನಾವಣೆ […]

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯಾಚರಣೆ

Monday, August 26th, 2013

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸ್ವಾತಂತ್ರ್ಯಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಕಾಲೇಜಿನ ಪ್ರಾಂಗಣದಲ್ಲಿ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು,ಪ್ರಾಂಶುಪಾಲರು ಉಪನ್ಯಾಸಕ ವರ್ಗ,ಆಡಳಿತ ಮಂಡಳಿ, ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.ಅತಿಥಿಗಳಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ರೋಹಿಣಾಕ್ಷ ,ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕೆ.ಆರ್.ಆಚಾರ್ಯ,ಪಾಲ್ಗೊಂಡಿದ್ದರು. ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ರೋಹಿಣಾಕ್ಷ ಇವರು ಸ್ವತಂತ್ರ ದೊರಕಿಸಿಕೊಡುವಲ್ಲಿ ನಮ್ಮ ಪೂರ್ವಜರು, ಸ್ವತಂತ್ರ ಹೋರಾಟಗಾರರು ಪಟ್ಟ ಶ್ರಮವನ್ನು ಅವಲೋಕಿಸಿದರು.ಅಂದು ಅವರು ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಇಂದಿನ ಯುವಜನತೆ ಉಳಿಸುವಲ್ಲಿ ಎಡವಿದೆ.ಬ್ರಿಟೀಶರನ್ನು ಭಾರತದ ನೆಲದಿಂದ […]

ವಿವೇಕಾನಂದ ಕಾನೂನು ಕಾಲೇಜು ಫಲಿತಾಂಶ

ವಿವೇಕಾನಂದ ಕಾನೂನು ಕಾಲೇಜು ಫಲಿತಾಂಶ

Saturday, June 15th, 2013

ವಿವೇಕಾನಂದ ಕಾನೂನು ಕಾಲೇಜಿನ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ ವಿಭಾಗದ ಫಲಿತಾಂಶ ಪ್ರಕಟವಾಗಿದ್ದು, ನಾಲ್ಕು ಡಿಸ್ಟಿಂಕ್ಷನ್‌ನೊಂದಿಗೆ ಶೇ.86 ಫಲಿತಾಂಶ ಬಂದಿರುತ್ತದೆ. ನೃತ್ಯಾ ರಾವ್, ಶಕ್ತಿತ್ರಯ, ಶ್ರೇಯಶ್ರೀ, ಪ್ರತಿಭಾ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

Admissions Open 2013-14

Saturday, May 25th, 2013

Admissions started for B.A., LL.B (5Years) LL.B(3Years) For more information contact college office.

ಶಿಕ್ಷಕ ರಕ್ಷಕ ಸಭೆ

ಶಿಕ್ಷಕ ರಕ್ಷಕ ಸಭೆ

Friday, October 5th, 2012

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಸಭೆಯು ಅಕ್ಟೋಬರ್ 5 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾ ನಿರ್ದೇಶಕರಾದ ಶ್ರೀ ಎ.ವಿ ನಾರಾಯಣ ಅವರು ಉದ್ಘಾಟಿಸಿ ಮಾತನಾಡಿ ಕಾನೂನನ್ನು ಸ್ಥಳೀಯ ಪರಿಸರದ ಜನರಿಗೆ ತಿಳಿಸುವ ಉದ್ದೇಶದಿಂದ ಕಾನೂನು ಕಾಲೇಜನ್ನು ಸ್ಥಾಪಿಸಿದ್ದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ವಿದಾರ್ಥಿಗಳ ಕರ್ತವ್ಯ ಎಂದು ತಿಳಿಸಿದರು. ಮಕ್ಕಳ ಅಭಿವೃದ್ಧಿ ಬಗ್ಗೆ ಹೆತ್ತವರು ಆಗಾಗ ಕಾಲೇಜಿನ ಆಡಳಿತ ಮಂಡಳಿಯಿಂದ ತಿಳಿದುಕೊಳ್ಳಬೇಕು ಎಂದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ […]

ಗುಡ್ಡಗಾಡು ಓಟ ಸ್ಪರ್ಧೆ ಯಲ್ಲಿ ವೈಯಕ್ತಿಕ ಪದಕಗಳು

ಗುಡ್ಡಗಾಡು ಓಟ ಸ್ಪರ್ಧೆ ಯಲ್ಲಿ ವೈಯಕ್ತಿಕ ಪದಕಗಳು

Tuesday, September 25th, 2012

ಇತ್ತೀಚೆಗೆ ರಾಮನಗರ ಸರಕಾರಿ ಕಾನೂನು ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಾದ ಅಶ್ವಿನಿ, ಕಿರಣ, ಪ್ರಮೀಳ, ಶ್ರುತಿ ವೈಯಕ್ತಿಕ ಪದಕಗಳೊಂದಿಗೆ ನಾಗಪುರದಲ್ಲಿ ನದೆಯುವ ರಾಷ್ಟ್ರ ಮಟ್ಟದ ಕ್ರೀಡೆಗೆ ಆಯ್ಕೆಯಾಗಿರುತ್ತಾರೆ.  

Highslide for Wordpress Plugin