News and Events | Vivekananda Law College, Puttur | Page 3
ಕಾನೂನು ಉದ್ಯೋಗ ಅವಕಾಶ ಮಾಹಿತಿ ಕಾರ್ಯಕ್ರಮ

ಕಾನೂನು ಉದ್ಯೋಗ ಅವಕಾಶ ಮಾಹಿತಿ ಕಾರ್ಯಕ್ರಮ

Tuesday, March 6th, 2018

ವಿವೇಕಾನಂದ ಕಾನೂನು ಕಾಲೇಜಿನ ವತಿಯಿಂದ, ಸರಕಾರಿ ಪದವಿ ಕಾಲೇಜು, ಜಿಡೆಕಲ್ಲು, ಪುತ್ತೂರು ಇಲ್ಲಿ ’ಕಾನೂನು ಮಾಹಿತಿ ಹಾಗೂ ಕಾನೂನು ಉದ್ಯೋಗ ಅವಕಾಶಗಳು’ ಕಾರ್ಯಕ್ರಮವು, ದಿನಾಂಕ 2-3-2018 ರಂದು ನಡೆಯಿತು. ಪುತ್ತೂರಿನ ವಕೀಲರಾದ ಶ್ರೀ ಮಂಜುನಾಥ ಎನ್. ಎಸ್. ರವರು ಸಂಪನ್ಮೂಲ ವ್ಯಕ್ತಿಯಾಗಿ, ಜನಸಾಮನ್ಯರಿಗಾಗಿ ಕಾನೂನು ಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ಉಪನ್ಯಾಸಕಿಯಾದ ಕು. ಶಕ್ತಿತ್ರಯ ಇವರು ಕಾನೂನು ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್ […]

ಕಾನೂನು ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ವಿವೇಕಾನಂದ ಕಾನೂನು ಕಾಲೇಜಿಗೆ ಪ್ರಶಸ್ತಿ

ಕಾನೂನು ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ವಿವೇಕಾನಂದ ಕಾನೂನು ಕಾಲೇಜಿಗೆ ಪ್ರಶಸ್ತಿ

Wednesday, February 28th, 2018

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಇವರು ದಿನಾಂಕ 23 ಮತ್ತು 24 ಫೆಬ್ರವರಿ 2018 ರಂದು ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಸಿದ ವಾರ್ಷಿಕ ಅಂತರ್ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ತಂಡವು ಭಾಗವಹಿಸಿ, ಬಹುಮಾನಗಳನ್ನು ಪಡೆದುಕೊಂಡಿದೆ. ಪುರುಷರ ಡಿಸ್ಕಸ್ ಥ್ರೋ ಮತ್ತು ಶಾಟ್‌ಪುಟ್ ವಿಭಾಗದಲ್ಲಿ ದ್ವಿತೀಯ ಎಲ್.ಎಲ್.ಬಿ ಯ ಜಾಬಿ ಜಾಯ್ ಕ್ರಮವಾಗಿ ಪ್ರಥಮ ಮತ್ತು ದ್ವೀತಿಯ ಬಹುಮಾನ, ಮಹಿಳೆಯರ ವಿಭಾಗದ 4×100 ರಿಲೇಯಲ್ಲಿ ದ್ವಿತೀಯ ಸ್ಥಾನ, 400 ಮೀ ಮತ್ತು 5000 ಮೀ ಓಟದಲ್ಲಿ ಪ್ರಥಮ ಎಲ್.ಎಲ್.ಬಿ […]

ಸ್ವಚ್ಛತಾ ಕಾರ್ಯಕ್ರಮ

ಸ್ವಚ್ಛತಾ ಕಾರ್ಯಕ್ರಮ

Thursday, February 1st, 2018

ವಿವೇಕಾನಂದ ಕಾನೂನು ಮಹಾವಿದ್ಯಾಲಯಲ್ಲಿ, ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸ್ವಯಂಸೇವಕರು ಕೊಠಡಿಗಳನ್ನು ಸ್ವಚ್ಛಗೊಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಕುಮಾರ್. ಎಸ್. ಮತ್ತು ಕಾಲೇಜಿನ ಬೋಧಕ ಮತ್ತು ಬೋಭಕೇತರ ವರ್ಗದವರು ಉಪಸ್ಥಿತರಿದ್ದರು.

ಕಛೇರಿ ಸಹಾಯಕರ ಕಾರ್ಯಾಗಾರ ಸಮಾರೋಪ ಸಮಾರಂಭ

ಕಛೇರಿ ಸಹಾಯಕರ ಕಾರ್ಯಾಗಾರ ಸಮಾರೋಪ ಸಮಾರಂಭ

Tuesday, January 30th, 2018

ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವತಿಯಿಂದ, ಕಛೇರಿ ಸಹಾಯಕರಿಗಾಗಿ ನಡೆದ ಕಾರ್ಯಾಗಾರದ ಮೊದಲ ಅವಧಿಯನ್ನು ವಿದ್ಯಾಭಾರತಿಯ ಪ್ರಾಂತ ನೈತಿಕ ಮತ್ತು ಅಧ್ಯಾತ್ಮಿಕ ಪ್ರಮುಖರಾದ ಶ್ರೀ ವೆಂಕಟ್ರಮಣ ಇವರು ನಡೆಸಿಕೊಟ್ಟರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿನ್ನಲೆ ಮತ್ತು ಆಶಯ ಎಂಬ ವಿಶಯದ ಕುರಿತು ಅವರು ಮಾಹಿತಿ ನೀಡಿದರು. ಸ್ವಯಂಸೇವಕ ಸಂಘದ ಸಿದ್ದಾಂತಗಳ ಆಧಾರದ ಮೇಲೆ ವಿದ್ಯಾವರ್ಧಕ ಸಂಘವು ನಿಂತಿದ್ದು, ಅದನ್ನು ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು. ಎರಡನೇ ಅವಧಿಯನ್ನು ಲೇಖಕರು ಮತ್ತು ಪ್ರಶಿಕ್ಷಣ […]

ಕಛೇರಿ ಸಹಾಯಕರ ಕಾರ್ಯಾಗಾರ ಉದ್ಘಾಟನಾ ಸಮಾರಂಭ

ಕಛೇರಿ ಸಹಾಯಕರ ಕಾರ್ಯಾಗಾರ ಉದ್ಘಾಟನಾ ಸಮಾರಂಭ

Tuesday, January 30th, 2018

ಯಾವುದೇ ಸಂಸ್ಥೆಗಳಿಗೆ ಕಛೇರಿಯು ಬಹು ಮುಖ್ಯವಾದದ್ದು. ಆದ್ದರಿಂದ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವವರು ಉತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸಿದರೆ ಆಡಳಿತವು ಉತ್ತಮವಾಗಿ ನಡೆದುಕೊಂಡು ಹೋಗಲು ಸಾಧ್ಯ ಎಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ಪುತ್ತೂರು ಇದರ ಅಧ್ಯಕ್ಷ ಶ್ರೀ. ಎ. ವಿ. ನಾರಾಯಣ ತಿಳಿಸಿದರು. ಇವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇವುಗಳ ಆಶ್ರಯದಲ್ಲಿ ದಿನಾಂಕ 27-1-2018  ರಂದು ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಛೇರಿ ಸಹಾಯಕರ ಕಾರ್ಯಾಗಾರದಲ್ಲಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನ್ನಾಡುತ್ತಾ ಕಲಿಕೆ […]

ಗಣರಾಜ್ಯೋತ್ಸವ ಆಚರಣೆ - ಪರಿಚಾರಕಿಯಿಂದ ಧ್ವಜಾರೋಹಣ

ಗಣರಾಜ್ಯೋತ್ಸವ ಆಚರಣೆ – ಪರಿಚಾರಕಿಯಿಂದ ಧ್ವಜಾರೋಹಣ

Saturday, January 27th, 2018

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 13 ವರ್ಷಗಳಿಂದ ಪರಿಚಾರಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಶ್ರೀಮತಿ ಪಾರ್ವತಿ ಇವರು ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ಸಂಚಾಲಕರಾದ ಶ್ರೀ ವಿಜಯನಾರಾಯಣ ಕೆ. ಎಂ. ಶುಭಹಾರೈಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ನಂತರ ಸಿಹಿತಿಂಡಿ ವಿತರಿಸಲಾಯಿತು.

ಪೆರ್ನೆ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

ಪೆರ್ನೆ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Saturday, January 20th, 2018

ವಿವೇಕಾನಂದ ಕಾನೂನು ಕಾಲೇಜಿನ ವತಿಯಿಂದ, ಸರಕಾರಿ ಪದವಿಪೂರ್ವ ಕಾಲೇಜು, ಪೆರ್ನೆ, ಬಂಟ್ವಾಳ ಇಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮವು, ದಿನಾಂಕ 19-01-2018 ರಂದು ನಡೆಯಿತು. ಪುತ್ತೂರಿನ ವಕೀಲರಾದ ಶ್ರೀ ಸುಧೀರ್ ಕುಮಾರ್ ತೋಳ್ಪಡಿಯವರು ಸಂಪನ್ಮೂಲ ವ್ಯಕ್ತಿಯಾಗಿ, ಜನಸಾಮಾನ್ಯರಿಗಾಗಿ ಕಾನೂನು ಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ಉಪನ್ಯಾಸಕರಾದ ಶ್ರೀ ಕಾರ್ತಿಕ್ ಆನಂದ್ ಇವರು ಕಾನೂನು ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾನೂನು ಕಾಲೇಜಿನ ವಿದ್ಯಾರ್ಥಿಯಾದ ವಿಮಲೇಶ್ ಪ್ರಥಮ ವರ್ತಮಾನ ವರದಿ ಕುರಿತು […]

ಪ್ರತಿಭೆಗಳ ಬೆಳವಣಿಗೆಗೆ ವೇದಿಕೆಗಳ ಅವಶ್ಯಕತೆಯಿದೆ : ನಾ. ಕಾರಂತ ಪೆರಾಜೆ

ಪ್ರತಿಭೆಗಳ ಬೆಳವಣಿಗೆಗೆ ವೇದಿಕೆಗಳ ಅವಶ್ಯಕತೆಯಿದೆ : ನಾ. ಕಾರಂತ ಪೆರಾಜೆ

Monday, December 11th, 2017

ಪುತ್ತೂರು: ಇಂದಿನ ದಿನಗಳಲ್ಲಿ ಹೊಸ ಪ್ರತಿಭೆಗಳು ಹುಟ್ಟಿಕೊಳ್ಳುತ್ತಿದ್ದು, ಅವರಿಗೆ ವೇದಿಕೆಗಳನ್ನು ಒದಗಿಸಿಕೊಡುವ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ವಿವೇಕಾನಂದ ಕಾನೂನು ಕಾಲೇಜಿನ ಪ್ರತಿಭಾಂಗಣ ಕಾರ್ಯಕ್ರಮವು ಶ್ಲಾಘನೀಯ ಎಂದು ಅಂಕಣಕಾರರು ಮತ್ತು ಪುತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಶ್ರೀ ನಾ. ಕಾರಂತ ಪೆರಾಜೆ ಅವರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ನಡೆದ ಪ್ರತಿಭಾಂಗಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶಯ ವ್ಯಕ್ತಪಡಿಸಿದರು. ನಂತರ ಮಾತನಾಡಿ, ಬದುಕು ಕಲೆಯಿಂದ ವಿಮುಖವಾಗಬಾರದು. ಶಿಕ್ಷಣ ಮತ್ತು ಕಲೆಯಿಂದ ಬೌದ್ಧಿಕ ಸೂಕ್ಷ್ಮ ಮತ್ತು […]

ಕಾನೂನು ಮಾಹಿತಿ ಕಾರ್ಯಕ್ರಮ

ಕಾನೂನು ಮಾಹಿತಿ ಕಾರ್ಯಕ್ರಮ

Thursday, December 7th, 2017

ವಿವೇಕಾನಂದ ಕಾನೂನು ಕಾಲೇಜಿನ ವತಿಯಿಂದ, ಸರಕಾರಿ ಪದವಿಪೂರ್ವ ಕಾಲೇಜು, ಕಾಣಿಯೂರು, ಪುತ್ತೂರು ಇಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮವು, ದಿನಾಂಕ 6-12-2017 ರಂದು ನಡೆಯಿತು. ಪುತ್ತೂರಿನ ವಕೀಲರಾದ ಶ್ರೀ ಸುಧೀರ್ ಕುಮಾರ್ ತೋಳ್ಪಡಿಯವರು ಸಂಪನ್ಮೂಲ ವ್ಯಕ್ತಿಯಾಗಿ ಜನಸಾಮಾನ್ಯರಿಗಾಗಿ ಕಾನೂನು ಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ಉಪನ್ಯಾಸಕಿಯಾದ ಶ್ರೀಮತಿ ಅಕ್ಷತಾ ಎ.ಪಿ. ಇವರು ಕಾನೂನು ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಮನೋಜ್ ಗ್ರಾಹಿಕ ಹಕ್ಕುಗಳ ಬಗ್ಗೆ ಮತ್ತು […]

ಕಾನೂನು ಮಾಹಿತಿ ಕಾರ್ಯಕ್ರಮ

ಕಾನೂನು ಮಾಹಿತಿ ಕಾರ್ಯಕ್ರಮ

Wednesday, December 6th, 2017

ವಿವೇಕಾನಂದ ಕಾನೂನು ಕಾಲೇಜಿನ ವತಿಯಿಂದ, ಸರಕಾರಿ ಪದವಿಪೂರ್ವ ಕಾಲೇಜು, ಬೆಳಿಯೂರುಕಟ್ಟೆ, ಪುತ್ತೂರು ಇಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮವು, ದಿನಾಂಕ 5-12-2017 ರಂದು ನಡೆಯಿತು. ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ಉಪನ್ಯಾಸಕರಾದ ಶ್ರೀ ಕಾರ್ತಿಕ್ ಆನಂದ್ ಇವರು ಕಾನೂನು ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್. ಯು, ಮೂಲಭೂತ ಕರ್ತವ್ಯಗಳ ಬಗ್ಗೆ ಮತ್ತು ಸುಲತ. ಎಂ, ಸೈಬರ್ ಅಪರಾಧ ಕುರಿತು ಮಾಹಿತಿ ನೀಡಿದರು. ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ. ಗೀತಾಶ್ರೀ ಹಾಗೂ […]

Highslide for Wordpress Plugin