ಜೀವಾತ್ಮವನ್ನು ಪರಮಾತ್ಮನೊಡನೆ ಸೇರಿಸುವುದದೇ ಯೋಗ : ಕರುಣಾಕರ ಉಪಾಧ್ಯಾಯ

ಜೀವಾತ್ಮವನ್ನು ಪರಮಾತ್ಮನೊಡನೆ ಸೇರಿಸುವುದದೇ ಯೋಗ : ಕರುಣಾಕರ ಉಪಾಧ್ಯಾಯ

Wednesday, June 21st, 2017

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 21-6-2017 ರಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಬಿ.ಗಣೇಶ್ ಜೋಶಿ ಹಾಗೂ ಪುತ್ತೂರಿನ ಓಂಕಾರ ಯೋಗ ಕೇಂದ್ರದ ಮುಖ್ಯಸ್ಥರಾದ ಶ್ರೀ ಕರುಣಾಕರ ಉಪಾಧ್ಯಾಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ. ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ತದನಂತರ ಮುಖ್ಯ ಅತಿಥಿಗಳು ಮಾತನಾಡುತ್ತಾ, ಯೋಗ ಎಂಬುದು ದೇಹವನ್ನು ಹಾಗೂ ಮನಸ್ಸಿನ ಸ್ವಾಸ್ಥ್ಯವನ್ನು ಹತೋಟಿಯಲ್ಲಿಡಬೇಕಾದರೆ ತುಂಬಾ ಮುಖ್ಯ ಅಂಶ. ಯೋಗ ಎಂದರೆ […]

ವಿದ್ಯಾಭ್ಯಾಸ ಹಾಗೂ ಕಲಿಕೆಯು ಬದುಕನ್ನು ರೂಪಿಸುವಂತಾಗಲಿ -ನ್ಯಾಯಾಧೀಶ ಶ್ರೀ ಪರಮೇಶ್ವರ ಪ್ರಸನ್ನ

ವಿದ್ಯಾಭ್ಯಾಸ ಹಾಗೂ ಕಲಿಕೆಯು ಬದುಕನ್ನು ರೂಪಿಸುವಂತಾಗಲಿ -ನ್ಯಾಯಾಧೀಶ ಶ್ರೀ ಪರಮೇಶ್ವರ ಪ್ರಸನ್ನ

Saturday, May 20th, 2017

ಮಾನವರಾಗಿ ಇಂದಿಲ್ಲಿರುವುದು ದೇವರು ಕೊಟ್ಟ ಬಹುದೊಡ್ಡ ಕಾಣಿಕೆ. ದೇವರ ಕರುಣೆಯಿಂದ ವಿಧ್ಯಾಭ್ಯಾಸವನ್ನು ಕಲಿತು ಗುರಿಯತ್ತ ಸತತ ಪ್ರಯತ್ನವನ್ನು ಮಾಡುವುದು ಬಹು ಮುಖ್ಯ, ಕಲಿಕೆಯ ಮೂಲಾಂಶ ಅಡಗಿರುವುದು ಕೇವಲ ಪಠ್ಯವಲ್ಲ, ಬದಲಾಗಿ ಜೀವನ ರೂಪಿಸುವ ಮಾರ್ಗವನ್ನು ಯಾವ ವಿದ್ಯೆ ಕಲಿಸಿಕೊಡುತ್ತದೋ ಅದು ನಿಜವಾದ ಶಿಕ್ಷಣದ ಅರ್ಥ ಹಾಗಾಗಿ ನೈತಿಕತೆಯನ್ನು ತನ್ನಲ್ಲಿರಿಸಿಕೊಂಡು ಮಾನವೀಯ ಮೌಲ್ಯಗಳನ್ನು ತಮ್ಮಲ್ಲಿ ಬೆಳೆಸಿಕೊಂಡು ಗುರಿ ಸಾಧನೆಯತ್ತ ಹೆಜ್ಜೆ ಇಡಬೇಕು. ಸದಾ ಗೆಲ್ಲುವ ಆಶಾವಾದವನ್ನಿಟ್ಟುಕೊಂಡು ಜೀವನದಲ್ಲಿ ಮುನ್ನಡೆಯಬೇಕು ಕೆಲವೊಮ್ಮೆ ನಮ್ಮ ನಿರೀಕ್ಷೆಗಳು ನಿರಾಶಾದಾಯಕವಾಗಿರುತ್ತದೆ ಆದರು ಸಕಾರಾತ್ಮಕವಾಗಿ ದೇವರು […]

ಕಾನೂನು ಕಲಿಕೆಯ ಬಗೆಗೆ ಅರಿವು ಮೂಡಬೇಕಿದೆ : ಗೌರವಾನ್ವಿತ ಚಂದ್ರಶೇಖರ ಉಪ್ಪಳಿಗೆ

ಕಾನೂನು ಕಲಿಕೆಯ ಬಗೆಗೆ ಅರಿವು ಮೂಡಬೇಕಿದೆ : ಗೌರವಾನ್ವಿತ ಚಂದ್ರಶೇಖರ ಉಪ್ಪಳಿಗೆ

Monday, May 1st, 2017

2-4-2017 ರಿಂದ ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾನಗರ, ಕಲ್ಲಜೇರದಲ್ಲಿ ಪ್ರಾರಂಭಗೊಂಡ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಸೇವಾ ಯೋಜನೆ ಶಿಬಿರದ ಅಂತಿಮ ಸಮಾರೋಪ ದಿನವಾದ 8-4-2017 ನೇ ತಾರೀಕಿನಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಹಾಗೂ ಬಂಟ್ವಾಳ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಇದರ ಸಹಯೋಗದೊಂದಿಗೆ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಚಂದ್ರಶೇಖರ […]

1500 ಮೀ ಓಟದಲ್ಲಿ ಕು|| ರಕ್ಷಿತಾ ಪಿ. ಚಿನ್ನ ಸಾಧನೆ

1500 ಮೀ ಓಟದಲ್ಲಿ ಕು|| ರಕ್ಷಿತಾ ಪಿ. ಚಿನ್ನ ಸಾಧನೆ

Thursday, April 27th, 2017

ಕರ್ನಾಟಕ ಕಾನೂನು ರಾಜ್ಯ ವಿಶ್ವವಿದ್ಯಾನಿಲಯ ನವನಗರ ಹುಬ್ಬಳ್ಳಿ ಇದರ ಆಶ್ರಯದಲ್ಲಿ ಧಾರವಾಡದಲ್ಲಿ ನಡೆದ 2016-17 ನೇ ಸಾಲಿನ ವಾರ್ಷಿಕ ಆಥ್ಲೆಟಿಕ್ಸ್ ಕ್ರೀಡಾಕೂಟವು ದಿನಾಂಕ 27 ರಂದು ಜರುಗಿತು. ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಕಾನೂನು ಕಾಲೇಜು ತಂಡದ ಅಂತಿಮ ಎಲ್.ಎಲ್.ಬಿ. ವಿದ್ಯಾರ್ಥಿನಿಯಾದ ಕು|| ರಕ್ಷಿತಾ ಪಿ. 1500 ಮೀ ಓಟದಲ್ಲಿ ಚಿನ್ನದ ಪದಕ ವಿಜೇತೆಯಾಗಿದ್ದಾರೆ. ಚತುರ್ಥ ಬಿ.ಎ., ಎಲ್.ಎಲ್.ಬಿ. ವಿದ್ಯಾರ್ಥಿನಿಯಾದ ಕು|| ರಶ್ಮಿ ಚತುರ್ಥ ಸ್ಥಾನಿಯಾಗಿದ್ದಾರೆ. ಅಂತಿಮ ಎಲ್.ಎಲ್.ಬಿ. ವಿದ್ಯಾರ್ಥಿನಿಯಾದ ಕು|| ನಯನ ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಸ್ಥಾನಿಯಾಗಿದ್ದರೆ, ಪ್ರಥಮ ವರ್ಷದ ಎಲ್.ಎಲ್.ಬಿ. […]

ಸ್ವಾಸ್ಥ್ಯಕ್ಕಾಗಿ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಆರೋಗ್ಯಗಳು ಅತ್ಯವಶ್ಯಕ : ಡಾ|| ಉದಯ್ ಕುಮಾರ್

Tuesday, April 25th, 2017

2-4-2017 ರಿಂದ ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾನಗರ, ಕಲ್ಲಜೇರದಲ್ಲಿ ಪ್ರಾರಂಭಗೊಂಡ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಸೇವಾ ಯೋಜನೆ ಶಿಬಿರದ ನಾಲ್ಕನೇ ದಿನವಾದ 5-4-2017 ನೇ ದಿನದಂದು ಆರೋಗ್ಯ ಯೋಜನೆಗಳು ಹಾಗೂ ದೈನಂದಿನ ಜೀವನದಲ್ಲಿ ಆರೋಗ್ಯ ಎನ್ನುವ ಕುರಿತಾಗಿ ಉಪನ್ಯಾಸ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಉದಯ್ ಕುಮಾರ್ ನೂಜಿ, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಸಾಯಿನಿಕೇತನ ಸೇವಾಶ್ರಮ ಅಳಿಕೆ ಇವರು ಮಾತನಾಡುತ್ತಾ, ಸರಕಾರದಿಂದ ಅನೇಕ ಆರೋಗ್ಯ […]

ಹೆಣ್ಣಿಗೆ ಅನ್ಯಾಯವಾದರೆ ಆಪತ್ತು ಖಚಿತ : ಗೌರವಾನ್ವಿತ ಎನ್.ಸಂತೋಷ್ ಕುಮಾರ್

ಹೆಣ್ಣಿಗೆ ಅನ್ಯಾಯವಾದರೆ ಆಪತ್ತು ಖಚಿತ : ಗೌರವಾನ್ವಿತ ಎನ್.ಸಂತೋಷ್ ಕುಮಾರ್

Saturday, April 22nd, 2017

ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ. ಎಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಸಿಗುತ್ತದೋ ಅಲ್ಲಿ ಲಕ್ಷ್ಮಿ ಒಲಿಯುತ್ತಾಳೆ. ಹೆಣ್ಣಿಗೆ ಅನ್ಯಾಯವಾದರೆ ಆಪತ್ತು ಖಚಿತ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೌರವಾನ್ವಿತ ಡಾ|| ಎನ್.ಸಂತೋಷ್ ಕುಮಾರ್ ಹೇಳಿದರು. ಸೋಮವಾರ ಇಲ್ಲಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ನಡೆದ ರ್‍ಯಾಂಕ್ ವಿಜೇತ ವಿಧ್ಯಾರ್ಥಿಗಳ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇದರ ಅಧ್ಯಕ್ಷರಾದ ಡಾ|| ಕೆ. […]

ಆಚರಣೆಗಳು ಪ್ರದರ್ಶನಕ್ಕಾಗಿ ಮೀಸಲಾಗದಿರಲಿ : ಪ್ರೊ || ವೇದವ್ಯಾಸ

ಆಚರಣೆಗಳು ಪ್ರದರ್ಶನಕ್ಕಾಗಿ ಮೀಸಲಾಗದಿರಲಿ : ಪ್ರೊ || ವೇದವ್ಯಾಸ

Thursday, April 20th, 2017

ದಿನಾಂಕ 13-4-2017 ರಂದು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಜತೆಗೂಡಿ ಸಾಂಪ್ರದಾಯಿಕ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವಿವೇಕಾನಂದ ಪದವಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ || ವೇದವ್ಯಾಸ ಇವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಭಾರತ ದೇಶ ನವನವೀನ ಸಂಸ್ಕೃತಿ, ಇತಿಹಾಸವನ್ನು ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ಅನೇಕ ಆಚಾರ ವಿಚಾರ, ಪದ್ದತಿ ನಂಬಿಕೆಗಳು, ಸಾಂಪ್ರದಾಯಿಕ ತಿನಸುಗಳಾದ ಆಹಾರ ಬಗೆಗಳು ಬೇರೆ ಬೇರೆಯಾಗಿದ್ದರೂ ಏಕತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಇಂದು ಮೂಲ ಸಂಪ್ರದಾಯಗಳು ನಶಿಸಿ ಹೋಗುತ್ತಿರುವ […]

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭ

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭ

Friday, April 14th, 2017

ಸಮಾಜ ಸೇವೆಗಾಗಿ ಬದುಕುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಉದ್ದೇಶವಾಗಿರಲಿ : ಡಾ|| ಕೃಷ್ಣ ಭಟ್ 2-4-2017  ರಿಂದ 8-4-2017  ರ ವರೆಗೆ ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾನಗರ ,ಕಲ್ಲಜೇರದಲ್ಲಿ ನಡೆದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭವು ಅಂತಿಮ ದಿನವಾದ 8-4-2017 ರಂದು ಸಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಡಾ|| ಕೃಷ್ಣ ಭಟ್, ಕಾರ್ಯದರ್ಶಿಯವರು, ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಸಮಾರೋಪ ಭಾಷಣಕಾರರಾಗಿ […]

ಕಾರ್ಮಿಕರು ಸರಕಾರ ನೀಡಲ್ಪಡುವ ಸೌಲಭ್ಯವನ್ನು ಬಳಸಿಕೊಳ್ಳಿರಿ : ಮರ್ಲಿನ್ ಗ್ರೇಸಿ

ಕಾರ್ಮಿಕರು ಸರಕಾರ ನೀಡಲ್ಪಡುವ ಸೌಲಭ್ಯವನ್ನು ಬಳಸಿಕೊಳ್ಳಿರಿ : ಮರ್ಲಿನ್ ಗ್ರೇಸಿ

Thursday, April 13th, 2017

2-4-2017 ರಿಂದ ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾನಗರ, ಕಲ್ಲಜೇರದಲ್ಲಿ ಪ್ರಾರಂಭಗೊಂಡ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಸೇವಾ ಯೋಜನೆ ಶಿಬಿರದ 6-4-2017 ನೇ ದಿನದಂದು ಕಾರ್ಮಿಕ ಸವಲತ್ತುಗಳು ಎನ್ನುವ ಕುರಿತಾಗಿ ಉಪನ್ಯಾಸ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಮರ್ಲಿನ್ ಗ್ರೇಸಿ ಕಾರ್ಮಿಕ ಅಧಿಕಾರಿಗಳು ಬಂಟ್ವಾಳ ಇವರು ಆಗಮಿಸಿದ್ದರು. ಇವರು ಮಾತನಾಡುತ್ತಾ, ಕಾರ್ಮಿಕರಿಗಾಗಿ ಅನೇಕ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದಿಂದ ಸಾಮಾಜಿಕ, ಆರ್ಥಿಕ ಹಾಗೂ ಕಾರ್ಮಿಕರ […]

ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಕಳೆದುಕೊಂಡು ಹತಾಶರಾಗಬೇಡಿ : ಕು|| ಉಷಾ ಎ.ಎಮ್.

ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಕಳೆದುಕೊಂಡು ಹತಾಶರಾಗಬೇಡಿ : ಕು|| ಉಷಾ ಎ.ಎಮ್.

Tuesday, April 11th, 2017

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾವಿಹಾರ ಕಲ್ಲಜೇರದಲ್ಲಿ ನಡೆದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಸೇವಾ ಯೋಜನೆ ಶಿಬಿರದ ಏಳನೇ ದಿನವಾದ 7-4-2017 ನೇ ದಿನದಂದು ಬದುಕು ನಾವು ರೂಪಿಸುವ ಕಲೆ Life is what we make it ಎಂಬ ವಿಷಯವಾಗಿ ಕು||ಉಷಾ ಎ.ಎಮ್. ಸಹಾಯಕ ಪ್ರಾಧ್ಯಾಪಕಿ, ವಾಣಿಜ್ಯ ಶಾಸ್ತ್ರ ವಿಭಾಗ, ವಿವೇಕಾನಂದ ಪದವಿಪೂರ್ವ ಕಾಲೇಜು, ಪುತ್ತೂರು. ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಜೀವನವು ದೇವರು ಕೊಟ್ಟ ಶ್ರೇಷ್ಟ ಕೊಡುಗೆ, ನಾವು […]

Highslide for Wordpress Plugin