ವಿದ್ಯಾರ್ಥಿ ಸಂಘದ ಉದ್ಘಾಟನೆ

ವಿದ್ಯಾರ್ಥಿ ಸಂಘದ ಉದ್ಘಾಟನೆ

Thursday, September 28th, 2017

ವಿವೇಕಾನಂದ ಕಾನೂನು ಕಾಲೇಜಿನಲ್ಲಿ 2017-18 ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 28-9-2017 ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ರಾಮಚಂದ್ರ ಯಂ ಮಾತನಾಡಿ ವಿದ್ಯಾರ್ಥಿ ಶಕ್ತಿ ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನ ನಡೆಯಬೇಕು. ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿದರೆ ಮಾತ್ರ ಯುವ ಸಮಾಜದ ಸದ್ಬಳಕೆಯಾಗುವುದು ಹಾಗೂ ಓದುವಿಕೆಯಲ್ಲಿ ಹೆಚ್ಚು […]

ಕಾನೂನು ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ

ಕಾನೂನು ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ

Monday, September 18th, 2017

ನೆಹರು ನಗರ : ವಿವೇಕಾನಂದ ಕಾನೂನು ಮಹಾವಿದ್ಯಾಲಯ ನೆಹರು ನಗರ ಪುತ್ತೂರು ಇಲ್ಲಿ 2017-18 ರ ಸಾಲಿನ ಶಿಕ್ಷಕ-ರಕ್ಷಕ ಸಂಘದ ಸಭೆಯು ಶ್ರೀ ಬಿ.ಗಣೇಶ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಅವರು ಸ್ವಾಗತಿಸಿ ಶೈಕ್ಷಣಿಕ ವಿಚಾರ ಮಂಡನೆಯನ್ನು ಮಾಡಿದರು. ಉಪನ್ಯಾಸಕರಾದ ಶ್ರೀ ರಾಜೇಂದ್ರ ಪ್ರಸಾದ್­ರವರು ಕಾಲೇಜಿನ ಶೈಕ್ಷಣಿಕ ಚಟುವಟಿಕೆಯ ಬಗ್ಗೆ ಮತ್ತು ಉಪನ್ಯಾಸಕ ಶ್ರೀ ಕಾರ್ತಿಕ್ ಆನಂದ್­ರವರು ಕಾನೂನು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಶಿಕ್ಷಕ ರಕ್ಷಕ ಸಂಘದ ಹೊಸ ಸಮಿತಿಯ […]

ನಮ್ಮ ಲಾಭವಲ್ಲ ದೇಶದ ಲಾಭವನ್ನು ಚಿಂತಿಸಿ

ನಮ್ಮ ಲಾಭವಲ್ಲ ದೇಶದ ಲಾಭವನ್ನು ಚಿಂತಿಸಿ

Tuesday, September 12th, 2017

ಪುತ್ತೂರು : ಪ್ರಜ್ಞಾವಂತ ಸಮಾಜವನ್ನು ಸೃಷ್ಟಿಸಬೇಕು, ರಾಷ್ಟ್ರಭಕ್ತಿಯನ್ನು ಪ್ರಕಟೀಕರಣ ಮಾಡಿ ದೇಶವನ್ನು ಮುಂದಿಟ್ಟು ಸಾಗಬೇಕು. ವಿದ್ಯಾರ್ಥಿಗಳ ದೃಷ್ಟಿಕೋನ ದೇಶದ ಕಡೆಗೆ ಇಟ್ಟುಕೊಂಡು, ಇದೇ ಪ್ರವೃತ್ತಿಯಲ್ಲಿ ಪ್ರಾತ್ಯಕ್ಷಿಕಾ ಸಂಸತ್ತು ನಡೆಸಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಇದರ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್ ಕಾರ್ಯಕ್ರಮದ ಅಧ್ಯಕ್ಷಿಯ ಭಾಷಣದಲ್ಲಿ ವ್ಯಕ್ತಪಡಿಸಿದರು. ಸೋಮವಾರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಏರ್ಪಡಿಸಿದ ಪ್ರಾತ್ಯಕ್ಷಿಕಾ ಸಂಸತ್ತು ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ವಿವೇಕಾನಂದ ಕನ್ನಡ ಮಾಧ್ಯಮ […]

ಭಾಷಣ ಸ್ಪರ್ಧೆಯಲ್ಲಿ ಬಹುಮಾನ

ಭಾಷಣ ಸ್ಪರ್ಧೆಯಲ್ಲಿ ಬಹುಮಾನ

Tuesday, September 12th, 2017

ಬ್ರಹ್ಮಶ್ರೀ ನಾರಾಯಣಗುರು ಅವರ 163 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಇದರ ವತಿಯಿಂದ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ವಿಷಯದ ಕುರಿತು ತುಳು, ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಭಾಷಣ ಸ್ಪರ್ಧೆ ನಡೆಯಿತು. ಇದರಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ತೇಜಸ್ ಯು. ಚತುರ್ಥ ಬಿಎ ಎಲ್‌ಎಲ್.ಬಿ ಇವರು ತುಳು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಸುಶ್ರತ್ ಸುಧೀರ್ ಉರ್ವ, ಪ್ರಥಮ ಬಿಎ ಎಲ್‌ಎಲ್.ಬಿ ಇವರು ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ […]

ವಿದ್ಯಾರ್ಥಿ ಸಂಘದ ಚುನಾವಣೆ 2017-18

ವಿದ್ಯಾರ್ಥಿ ಸಂಘದ ಚುನಾವಣೆ 2017-18

Monday, September 4th, 2017

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ನಡೆದ 2017-18 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಂತಿಮ ಬಿ.ಎ., ಎಲ್.ಎಲ್.ಬಿ ವಿದ್ಯಾರ್ಥಿಯಾದ ಕು. ಸಂತೋಷ್ ಕೆ. ಆರ್., ಕಾರ್ಯದರ್ಶಿಯಾಗಿ ತೃತೀಯ ಎಲ್ ಎಲ್ .ಬಿ ವಿದ್ಯಾರ್ಥಿ ಕು. ಉಮೇಶ್ ದೇವಾಡಿಗ, ಹಾಗೂ ಜೊತೆ ಕಾರ್ಯದರ್ಶಿಯಾಗಿ ಚತುರ್ಥ ಬಿ.ಎ.,ಎಲ್ ಎಲ್ .ಬಿ. ವಿದ್ಯಾರ್ಥಿನಿಯಾದ ಕುಮಾರಿ. ಸೌಮ್ಯ ಪಿ. ಇವರುಗಳು ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜು ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಕಾಲೇಜು ಆಡಳಿತ ಮಂಡಳಿ ಶುಭ ಹಾರೈಸಿದ್ದಾರೆ.

ಗುಡ್ಡಗಾಡು ಓಟ ಸ್ಪರ್ಧೆ : ಪ್ರಥಮ ಸ್ಥಾನ

ಗುಡ್ಡಗಾಡು ಓಟ ಸ್ಪರ್ಧೆ : ಪ್ರಥಮ ಸ್ಥಾನ

Thursday, August 31st, 2017

ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಮಹಿಳಾ ತಂಡವು, ಧಾರವಾಡದ ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನಲ್ಲಿ ದಿ. 30-8-2017 ರಂದು ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಕಾಲೇಜಿನ ಪ್ರಥಮ ಎಲ್‌ಎಲ್.ಬಿ ವಿದ್ಯಾರ್ಥಿನಿ ಸಂಧ್ಯಾ. ಕೆ. ಎಸ್ ವೈಯುಕ್ತಿಕವಾಗಿ ಪ್ರಥಮ ಸ್ಥಾನವನ್ನು ಗಳಿಸಿ, ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ವಾಟರ್ ಕೂಲರ್ ಕೊಡುಗೆ

ವಾಟರ್ ಕೂಲರ್ ಕೊಡುಗೆ

Wednesday, August 23rd, 2017

ವಿವೇಕಾನಂದ ಕಾನೂನು ಕಾಲೇಜಿಗೆ, 45 ಸಾವಿರ ರೂಪಾಯಿ ವೆಚ್ಚದ ನೂತನ ವಾಟರ್ ಕೂಲರನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಕೊಡುಗೆಯಾಗಿ ಕೊಡುವುದಕ್ಕೆ ಮಂಗಳೂರಿನ ಕರ್ಣಾಟಕ ಬ್ಯಾಂಕಿನ ಕೇಂದ್ರ ಕಛೇರಿಯ ಮುಖ್ಯ ಪ್ರಬಂಧಕರಾದ ಶ್ರೀ ಶ್ರೀನಿವಾಸ ದೇಶಪಾಂಡೆಯವರು ಆದೇಶ ಮಾಡಿ ಉತ್ತಮ ಪ್ರಮಾಣದ ವಾಟರ್ ಕೂಲರ್‌ನ್ನು ಕೊಡುಗೆಯಾಗಿ ನೀಡಲಾಯಿತು. ವಾಟರ್ ಕೂಲರನ್ನು ಕರ್ಣಾಟಕ ಬ್ಯಾಂಕಿನ ಪುತ್ತೂರು ಶಾಖೆಯ ಪ್ರಬಂಧಕರಾದ ಶ್ರೀ ಶ್ರೀಹರಿಯವರು, ಕಾಲೇಜಿನ ಪ್ರಾಶುಂಪಾಲರಾದ ಶ್ರೀ ಕೆ. ಜಿ. ಕೃಷ್ಣಮೂರ್ತಿ, ಕರ್ಣಾಟಕ ಬ್ಯಾಂಕಿನ ಸಿಬ್ಬಂದಿಗಳು, ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರು ಮತ್ತು […]

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Friday, August 18th, 2017

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವೇಕಾನಂದ ಮಹಾವಿದ್ಯಾಲಯದಲ್ಲಿ ದಿ. 18-8-2017 ರಂದು ಮೊಸರು ಕುಡಿಕೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ. ಕೃಷ್ಣಮೂರ್ತಿ ಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಬೆಳಿಗ್ಗಿನಿಂದ ಸಂಜೆಯವರೆಗೆ ವಿದ್ಯಾರ್ಥಿಗಳು ಸಕ್ರಿಯವಾಗಿ ಎಲ್ಲಾ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ಜೇಸಿರೆಟ್ ಅನ್ನಪೂರ್ಣ ಶರ್ಮರವರಿಂದ ಪುಸ್ತಕ ಕೊಡುಗೆ

ಜೇಸಿರೆಟ್ ಅನ್ನಪೂರ್ಣ ಶರ್ಮರವರಿಂದ ಪುಸ್ತಕ ಕೊಡುಗೆ

Friday, August 18th, 2017

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಅಧ್ಯಯನ ಮಾಡಿ ಸ್ವಉದ್ಯಮಿಯಾಗಿರುವ ಜೆಸಿಐ ಪುತ್ತೂರಿನ ಅಧ್ಯಕ್ಷರಾದ ಶ್ರೀ ಪಶುಪತಿ ಶರ್ಮರ ಪತ್ನಿ ಶ್ರೀಮತಿ ಅನ್ನಪೂರ್ಣ ಶರ್ಮ ರವರು ದಿನಾಂಕ 17-8-2017 ರಂದು ಜೆಸಿಐ ವಲಯಾಧ್ಯಕ್ಷರಾದ ಜೆಎಫ್‌ಪಿ ಶ್ರೀ ಸಂತೋಷ್ ಜಿ ಹಾಗೂ ಇತರರು ಮತ್ತು ಕಾನೂನು ಕಾಲೇಜಿನ ಸಂಚಲಕರಾದ ಶ್ರೀ ವಿಜಯ ನಾರಾಯಣ ಕೆ.ಎಂ ರವರ ಸಮ್ಮುಖದಲ್ಲಿ ಸುಮಾರು ರೂ. 7,050 ಮೌಲ್ಯದ ಪುಸ್ತಕಗಳನ್ನು ವಿವೇಕಾನಂದ ಕಾನೂನು ಕಾಲೇಜಿನ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿ ಕೆ.ಜಿ. ಪುಸ್ತಕಗಳನ್ನು ಸ್ವೀಕರಿಸುತ್ತಾ […]

71 ನೇ ಸ್ವಾತಂತ್ರ್ಯ ದಿನಾಚರಣೆ

71 ನೇ ಸ್ವಾತಂತ್ರ್ಯ ದಿನಾಚರಣೆ

Wednesday, August 16th, 2017

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಕಾಲೇಜಿನ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ವಕೀಲರು ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಶ್ರೀ ನರಸಿಂಹಪ್ರಸಾದ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಅವರು ಮಾತನಾಡಿ ’ಇಂದಿನ ಯುವಕರು ಜಾತಿಬೇಧವನ್ನು ಮರೆತು ರಾಷ್ಟ್ರ ನಿರ್ಮಾಣಕ್ಕೆ ಸಜ್ಜಾಗಬೇಕು ಎಂದು ಹೇಳುತ್ತಾ ದೇಶಮೊದಲು ಮತು ಧರ್ಮ ನಂತರವಾಗಿರಬೇಕು ಎಂದು ಕರೆ ಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣೇಶ್ ಜೋಷಿ ಬಿ., ಆಡಳಿತ ಮಂಡಳಿಯ ಸದಸ್ಯರಾದ ಶ್ರೀ […]

Highslide for Wordpress Plugin