ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಚಾರಣ ಕಾರ್ಯಕ್ರಮ

ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಚಾರಣ ಕಾರ್ಯಕ್ರಮ

Friday, February 24th, 2017

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ದಿನಾಂಕ 24-02-2017 ರಂದು ಹೆಬ್ರಿ ಕೂಡ್ಲುತೀರ್ಥ ಪ್ರದೇಶಕ್ಕೆ ಒಂದು ದಿನದ ಟ್ರೆಕ್ಕಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.  ಕಾರ್ಯಕ್ರಮವನ್ನು ಕೇವಲ ಮೋಜಿಗಾಗಿ ಸೀಮಿತವಿಡದೇ ಸೀತಾ ನದಿಯ ತಪ್ಪಲಿನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಚ್ಚತೆಯ ಬಗ್ಗೆ ಇತರ ಬಂದಿದ್ದ ಚಾರಣಾರ್ಥಿಗಳಿಗೂ ಅರಿವು ಮೂಡಿಸಲಾಯ್ತು. ಕಾಲೇಜು ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಹರೀಶ್ ರಾವ್, ಸಹಾಯಕ ಪ್ರಾಧ್ಯಾಪಕಿ ಕು|| ಶಕ್ತಿತ್ರಯ ಜತೆಗಿದ್ದರು.

ಕ್ರಿಮಿನಲ್ ದಾವೆಯ ಸ್ವರೂಪದ ಅಣುಕು ನ್ಯಾಯಾಲಯ

ಕ್ರಿಮಿನಲ್ ದಾವೆಯ ಸ್ವರೂಪದ ಅಣುಕು ನ್ಯಾಯಾಲಯ

Tuesday, February 21st, 2017

ದಿನಾಂಕ 21-2-2017 ನೇ ಮಂಗಳವಾರದಂದು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಅಣುಕು ನ್ಯಾಯಾಲಯ ಘಟಕದ ವತಿಯಿಂದ ಕ್ರಿಮಿನಲ್ ದಾವೆಯ ಸ್ವರೂಪದ ಅಣುಕು ನ್ಯಾಯಾಲಯವು ನಡೆಯಿತು. ಅಂತಿಮ ಕಾನೂನು ವಿದ್ಯಾರ್ಥಿಗಳು ಈ ಅಣುಕು ನ್ಯಾಯಾಲಯದಲ್ಲಿ ಪಾಲ್ಗೊಂಡರು. ನ್ಯಾಯಾಧೀಶರಾಗಿ ಪುತ್ತೂರಿನ ನ್ಯಾಯವಾದಿಗಳಾದ ಶ್ರೀ ಶ್ಯಾಂ ಪ್ರಸಾದ್ ಕೈಲಾರ್­ರವರು ಆಗಮಿಸಿದರು. ತದನಂತರ ಅವರು ಮಾತನಾಡುತ್ತಾ ಅಣುಕು ನ್ಯಾಯಾಲಯಗಳು ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಕಾನೂನು ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿ ಹಾಗೂ ನ್ಯಾಯಾಲಯದ ಕಲ್ಪನೆಯನ್ನು ಒದಗಿಸಿಕೊಡುತ್ತದೆ ಎಂದರು. ತದನಂತರ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಇವರು ಅತಿಥಿಗಳಿಗೆ […]

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆ

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆ

Tuesday, January 10th, 2017

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 10-1-2017 ರಂದು ಪದವಿಪೂರ್ವ ಹಾಗೂ ಪದವಿ ವಿಭಾಗದ ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯು ವು ವಿವೇಕಾನಂದ ಕಾನೂನು ಕಾಲೇಜು ಹಾಗೂ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ|| ಶ್ರೀಧರ್ ಹೆಚ್.ಜಿ. ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಭಾಗ ಮಾತನಾಡಿ ಭಾಷಣ ಎನ್ನುವುದು ಒಂದು ಕಲೆ, ಅದು ಎಲ್ಲರಿಗೂ ಬರುವಂಥದ್ದಲ್ಲ, ಒಬ್ಬ ಪ್ರಸಿದ್ಧ ವಾಗ್ಮಿಯಾಗಬೇಕಿದ್ದರೆ ಹಿರಿಯ ನಾಯಕರ ಭಾಷಣದ ಸಾಲನ್ನು ಆಲಿಸಿದರೆ ತನ್ನಲ್ಲಿ ಆ ಶಕ್ತಿ ಹಾಗೂ […]

ಉಪ್ಪಿನಂಗಡಿಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Friday, January 6th, 2017

6-1-2017 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾನೂನು ಕಾಲೇಜಿನ ಕಾನೂನು ನೆರವು ಘಟಕದ ಮುಖ್ಯಸ್ಥೆ ಹಾಗೂ ಉಪನ್ಯಾಸಕಿಯಾದ ಶ್ರೀಮತಿ ಅಕ್ಷತಾ ಎ.ಪಿ. ಸ್ವಾಗತಿಸಿ ಪ್ರಸ್ತಾವನೆಗೈದು ವೃತ್ತಿ ಮಾರ್ಗದರ್ಶನದ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಕಾಲೇಜಿನ ಅಂತಿಮ ಕಾನೂನು ಪದವಿ ವಿದ್ಯಾರ್ಥಿಗಳಾದ ಕು|| ವೈಭವಿ ಇವರು ಗ್ರಾಹಕರ ಹಕ್ಕುಗಳು ಹಾಗೂ ತೃತೀಯ ಕಾನೂನು ಪದವಿ ವಿದ್ಯಾರ್ಥಿ ತೇಜಸ್ ಇವರು ಮೂಲಭೂತ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Friday, January 6th, 2017

6-1-2017 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕುಂಬ್ರ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾನೂನು ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ಸಂಗೀತಾ ಸ್ವಾಗತಿಸಿ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದುಗ್ಗಪ್ಪ ರೈ ಅಧ್ಯಕ್ಷೀಯ ನೆಲೆಯಲ್ಲಿ ಮಾತುಗಳನ್ನಾಡಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಕಾಲೇಜಿನ ಉಪನ್ಯಾಸಕರಾದ ಶ್ರೀ ಕಾರ್ತಿಕ್ ಆನಂದ್ ರವರು ಕಾನೂನು ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನದ ಬಗೆಗೆ ಮಾಹಿತಿಯನ್ನು ನೀಡಿದರು. ಅಂತಿಮ ಕಾನೂನು ಪದವಿ ವಿದ್ಯಾರ್ಥಿಗಳಾದ ಕು|| ಸುಲತಾ ಮಹಿಳೆ ಮತ್ತು ಕಾನೂನು, […]

ಪೆರ್ನೆಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Thursday, January 5th, 2017

5-1-2017  ರಂದು ಶ್ರೀ ರಾಮಚಂದ್ರ ಪದವಿ ಪೂರ್ವ ಕಾಲೇಜು ಪೆರ್ನೆಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾನೂನು ಕಾಲೇಜಿನ ಕಾನೂನು ನೆರವು ಘಟಕದ ಮುಖ್ಯಸ್ಥೆ ಹಾಗೂ ಉಪನ್ಯಾಸಕಿಯಾದ ಶ್ರೀಮತಿ ಅಕ್ಷತಾ ಎ.ಪಿ. ಸ್ವಾಗತಿಸಿ ಪ್ರಸ್ಥಾವನೆಗೈದು ವಕೀಲಿ ವೃತ್ತಿ ಮಾರ್ಗದರ್ಶನವನ್ನು ನೀಡಿದರು. ವೇದಿಕೆಯಲ್ಲಿ ಅಧ್ಯಕ್ಷೀಯತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶೇಖರ ರೈ ವಹಿಸಿ ಸ್ವಾಗತಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಸಂಗೀತಾ ಎಸ್.ಎಮ್. ರವರು ಕಾನೂನು ಶಿಕ್ಷಣ ಹಾಗೂ ಉದ್ಯೋಗಾವಕಾಶಗಳು ಹಾಗೂ ವೃತ್ತಿ […]

ಕಾನೂನು ಶಿಕ್ಷಣ ಭವಿಷ್ಯದ ಬೆಳಕು : ಕಾರ್ತಿಕ್ ಆನಂದ್

Wednesday, January 4th, 2017

4-1-2017 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾನೂನು ಕಾಲೇಜಿನ ಕಾನೂನು ನೆರವು ಘಟಕದ ಮುಖ್ಯಸ್ಥೆ ಹಾಗೂ ಉಪನ್ಯಾಸಕಿಯಾದ ಶ್ರೀಮತಿ ಅಕ್ಷತಾ ಎ.ಪಿ. ಸ್ವಾಗತಿಸಿ ವಿದ್ಯಾರ್ಥಿ ಪ್ರದೀಪ್ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸೂರ್ಯನಾರಾಯಣ ಬಿ.ವಿ. ಅಧ್ಯಕ್ಷೀಯ ನೆಲೆಯಲ್ಲಿ ಮಾತುಗಳನ್ನಾಡಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಕಾಲೇಜಿನ ಉಪನ್ಯಾಸಕರಾದ ಶ್ರೀ ಕಾರ್ತಿಕ್ ಆನಂದ್­ರವರು ಕಾನೂನು ಶಿಕ್ಷಣ ಹಾಗೂ ಉದ್ಯೋಗಾವಕಾಶಗಳು ಹಾಗೂ ವೃತ್ತಿ ಮಾರ್ಗದರ್ಶನದ ಬಗೆಗೆ ಮಾಹಿತಿಯನ್ನು […]

ದೇಶದ ವಿತ್ತೀಯ ಪ್ರಗತಿಯಲ್ಲಿ ನಾಗರೀಕರೆಲ್ಲ ಒಟ್ಟಾಗಬೇಕಿದೆ : ದೀಪಕ್ ಕೆ.

ದೇಶದ ವಿತ್ತೀಯ ಪ್ರಗತಿಯಲ್ಲಿ ನಾಗರೀಕರೆಲ್ಲ ಒಟ್ಟಾಗಬೇಕಿದೆ : ದೀಪಕ್ ಕೆ.

Saturday, December 31st, 2016

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 31-12-2016 ರಂದು ವಿತ್ತೀಯ ಸಾಕ್ಷರತಾ ಅಭಿಯಾನದ ಎಂಬುದರ ಬಗೆಗೆ ಕಾರ್ಯಾಗಾರವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ದೀಪಕ್ ಕೆ., ಲೆಕ್ಕ ಪರಿಶೋಧಕರು ಪುತ್ತೂರು ಇವರು ಆಗಮಿಸಿದ್ದರು ಹಾಗೂ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ಗಣೇಶ್ ಜೋಶಿ, ಲೆಕ್ಕ ಪರಿಶೋಧಕರು ಪುತ್ತೂರು ಹಾಗೂ ಅಧ್ಯಕ್ಷರು, ಆಡಳಿತ ಮಂಡಳಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಇವರು ಉಪಸ್ಥಿತರಿದ್ದರು. ಬಳಿಕ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಸಿದ ಇವರು ಕಾರ್ಯಕ್ರಮದ ಸ್ಥೂಲ […]

ಕರ್ತವ್ಯಗಳನ್ನು ಮರೆತು ಹಕ್ಕುಗಳ ದಾಸರಾಗದಿರಿ : ಶ್ರೀಮತಿ ಸಂಗೀತಾ

ಕರ್ತವ್ಯಗಳನ್ನು ಮರೆತು ಹಕ್ಕುಗಳ ದಾಸರಾಗದಿರಿ : ಶ್ರೀಮತಿ ಸಂಗೀತಾ

Saturday, December 17th, 2016

ಡಿಸೆಂಬರ್ 16-12-2016 ರಂದು ಜನತಾ ಪದವಿ ಪೂರ್ವ ಕಾಲೇಜು ಅಡ್ಯನಡ್ಕ, ಇಲ್ಲಿ ವಿವೇಕಾನಂದ ಕಾನೂನು ಕಾಲೇಜು, ನೇಮಕಾತಿ ಸಹಾಯಕ ಘಟಕದ ವತಿಯಿಂದ ಕಾನೂನು ಉದ್ಯೋಗಾವಕಾಶ – ಸವಾಲುಗಳು ಹಾಗೂ ಅವಕಾಶ ಹಾಗೂ ಮೂಲಭೂತ ಕರ್ತವ್ಯಗಳು – ಹಕ್ಕುಗಳು ಹಾಗೂ ಇವುಗಳ ಮಧ್ಯೆ ಸಾಮ್ಯತೆ ಹಾಗೂ ಭಿನ್ನತೆ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ರವರ 125ನೇ ವರ್ಷಾಚರಣೆಯ ಸಂಬಂಧ ಸಾಂವಿಧಾನಿಕ ಕರ್ತವ್ಯಗಳ ಅರಿವು ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ನಡೆಯಿತು. ಕಾರ್ಯಕ್ರಮದಲ್ಲಿ ಜನತಾ ಪದವಿ ಪೂರ್ವ ಕಾಲೇಜು […]

ಕಾನೂನು ಜನರ ರಕ್ಷಣೆಗಿರುವುದೇ ವಿನಃ ಹೆದರಬೇಕಿಲ್ಲ : ಪ್ರದೀಪ್

ಕಾನೂನು ಜನರ ರಕ್ಷಣೆಗಿರುವುದೇ ವಿನಃ ಹೆದರಬೇಕಿಲ್ಲ : ಪ್ರದೀಪ್

Saturday, December 10th, 2016

ಡಿಸೆಂಬರ್ 10-12-2016 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಬೆಳಿಯೂರುಕಟ್ಟೆ ನಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ರವರ 125 ನೇ ವರ್ಷಾಚರಣೆಯ ಸಂಬಂಧ ಸಾಂವಿಧಾನಿಕ ಕರ್ತವ್ಯಗಳ ಅರಿವು ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾನೂನು ಕಾಲೇಜಿನ ಉಪನ್ಯಾಸಕಿ ಹಾಗೂ ಕಾನೂನು ನೆರವು ಮಾಹಿತಿ ಘಟಕದ ಮುಖ್ಯಸ್ಥೆ ಶ್ರೀಮತಿ ಅಕ್ಷತಾ ಸ್ವಾಗತಿಸಿ ಪ್ರಸ್ಥಾವಿಸಿದರು. ವಿದ್ಯಾರ್ಥಿನಿ ಕು| ವೈಭವಿ ಗ್ರಾಹಕರ ಹಕ್ಕುಗಳು ಎಂಬ ವಿಷಯದ ಮೇಲೆ ಮಾಹಿತಿ ನೀಡಿದರು, ವಿದ್ಯಾರ್ಥಿ ಪ್ರದೀಪ್ ಪ್ರಥಮ ವರ್ತಮಾನ ವರದಿ […]

Highslide for Wordpress Plugin