ಜಲ ಸಂರಕ್ಷಣೆ ಪ್ರತಿಯೊಬ್ಬರ ಆಧ್ಯ ಕರ್ತವ್ಯ : ಪ್ರಶಾಂತ್ ಆಚಾರ್ಯ

ಜಲ ಸಂರಕ್ಷಣೆ ಪ್ರತಿಯೊಬ್ಬರ ಆಧ್ಯ ಕರ್ತವ್ಯ : ಪ್ರಶಾಂತ್ ಆಚಾರ್ಯ

Saturday, March 25th, 2017

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 22-03-2017 ರಂದು ವಿಶ್ವ ಜಲ ದಿನದ ಅಂಗವಾಗಿ ಇಕೋ ಕ್ಲಬ್ ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಜತೆಗೂಡಿ ಜಲ ಸಂಪನ್ಮೂಲ ಸಂರಕ್ಷಣೆ ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವಿವೇಕಾನಂದ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಯ ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರಶಾಂತ್ ಆಚಾರ್ಯ ಮಾತನಾಡುತ್ತಾ ನೀರನ್ನು ಸದ್ಬಳಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಹಿಂದಿನ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ನೀರಿನ ಹಾಗೂ ಅಂತರ್ಜಲದ ಮಟ್ಟ ಕೂಡಾ […]

ವಾರ್ಷಿಕ ಕ್ರೀಡಾಕೂಟ

ವಾರ್ಷಿಕ ಕ್ರೀಡಾಕೂಟ

Friday, March 24th, 2017

ದಿನಾಂಕ 23-03-2017 ರಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯವು ತನ್ನ ವಾರ್ಷಿಕ ಕ್ರೀಡಾಕೂಟವು ಕಾಲೇಜು ಕ್ಯಾಂಪಸ್­ನ ಕ್ರೀಡಾಂಗಣದಲ್ಲಿ ನಡೆಯಿತು. ಬೆಳಿಗ್ಗೆ 10 ಘಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲು ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇದರ ನಿರ್ದೇಶಕರಾದ ಶ್ರೀ ವಾಮನ ಪೈ ಆಗಮಿಸಿದ್ದರು. ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ವಿಜಯನಾರಾಯಣ ಎಂ.ಕೆ. ಉಪನ್ಯಾಸಕಿಯಾದ ಶ್ರೀಮತಿ ಅಕ್ಷತಾ ಎ.ಪಿ., ಹಾಗೂ ಕಾಲೇಜು ಕ್ರೀಡಾ ಘಟಕದ ಮುಖ್ಯಸ್ಥರಾದ, ಉಪನ್ಯಾಸಕ ಶ್ರೀ ರಾಜೇಂದ್ರ ಪ್ರಸಾದ್ ಎ. ಉಪಸ್ಥಿತರಿದ್ದರು. ಶ್ರೀ ವಾಮನ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿ […]

ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅನನ್ಯ : ಶ್ರೀ ವಿಜಯನಾರಾಯಣ ಎಮ್.ಕೆ.

ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅನನ್ಯ : ಶ್ರೀ ವಿಜಯನಾರಾಯಣ ಎಮ್.ಕೆ.

Thursday, March 16th, 2017

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 15-3-2017 ರಂದು ವಿ.ವಿ.ಪುರಂ ಕಾನೂನು ಕಾಲೇಜಿನಲ್ಲಿ ದಿನಾಂಕ 11-3-2017 ರಂದು ನಡೆದ ಕನ್ನಡ ಚರ್ಚಾ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ಕಾಲೇಜಿನ ವಿದ್ಯಾರ್ಥಿನಿಯಾದ ಕು|| ವೈಭವಿ ಹಾಗೂ ಪಂಚಮ ಸ್ಥಾನ ವಿಜೇತ ಮಹಮ್ಮದ್ ಗಝಾಲಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ಗುಡ್ಡಗಾಡು ಓಟ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ರಕ್ಷಿತಾ, ಅಶ್ವಿನಿ ತೃತೀಯ ಸ್ಥಾನ, ಚತುರ್ಥ ಸ್ಥಾನ ರಶ್ಮಿ ಹೆಚ್.ಎಸ್., ಪಂಚಮ ಚೇತನಾ ಕೆ., ಎಂಟನೇ ಸ್ಥಾನಿಯಾದ ಭವ್ಯಾ ಜಿ. 16 ನೇ ಸ್ಥಾನವನ್ನು […]

ಮಹಿಳೆಯರ ವಾಲೀಬಾಲ್, ತ್ರೋಬಾಲ್ ಹಾಗೂ ಟೆನ್ನಿಕ್ವಾಟ್ ಪಂದ್ಯಾವಳಿಗಳ ಸಮಾರೋಪ ಕಾರ್ಯಕ್ರಮ

ಮಹಿಳೆಯರ ವಾಲೀಬಾಲ್, ತ್ರೋಬಾಲ್ ಹಾಗೂ ಟೆನ್ನಿಕ್ವಾಟ್ ಪಂದ್ಯಾವಳಿಗಳ ಸಮಾರೋಪ ಕಾರ್ಯಕ್ರಮ

Saturday, March 11th, 2017

ಪುತ್ತೂರು :  ವಿವೇಕಾನಂದ ಕಾನೂನು ಕಾಲೇಜು ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ನವನಗರ ಹುಬ್ಬಳ್ಳಿ ಇದರ ಜಂಟಿ ಆಶ್ರಯದಲ್ಲಿ ಮಾರ್ಚ ತಿಂಗಳ 8, 9 ಹಾಗೂ 10 ರಂದು ಮುಂದಿನ ಮೂರು ದಿನಗಳ ಕಾಲ ನಡೆದ ಮಹಿಳೆಯರ ವಾಲೀಬಾಲ್, ತ್ರೋಬಾಲ್ ಹಾಗೂ ಟೆನ್ನಿಕ್ವಾಟ್ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮವು ವಿವೇಕಾನಂದ ಸಂಸ್ಥೆಗಳ ಆವರಣದ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು. ಮುಖ್ಯ ಅತಿಥಿಗಳಾಗಿ ಮುಳಿಯ ಜ್ಯುವೆಲ್ಲರ್‍ಸ್ ಪುತ್ತೂರು ಇದರ ಆಡಳಿತ ನಿರ್ದೇಶಕರಾದ ಶ್ರೀ ಕೃಷ್ಣ ನಾರಾಯಣ ಮುಳಿಯ ಮೂರೂ ವಿಭಾಗಗಳಲ್ಲಿ ವಿಜೇತರಾದ ಬುಹುಮಾನವನ್ನು ವಿತರಿಸಿ ಮಾತನಾಡಿ […]

ಮಹಿಳೆಯರ ವಾಲೀಬಾಲ್, ತ್ರೋಬಾಲ್ ಹಾಗೂ ಟೆನ್ನಿಕ್ವಾಟ್ ಪಂದ್ಯಾವಳಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಉದ್ಘಾಟನೆ 

ಮಹಿಳೆಯರ ವಾಲೀಬಾಲ್, ತ್ರೋಬಾಲ್ ಹಾಗೂ ಟೆನ್ನಿಕ್ವಾಟ್ ಪಂದ್ಯಾವಳಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಉದ್ಘಾಟನೆ 

Saturday, March 11th, 2017

ವಿವೇಕಾನಂದ ಕಾನೂನು ಕಾಲೇಜು ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ನವನಗರ ಹುಬ್ಬಳ್ಳಿ ಇದರ ಜಂಟಿ ಆಶ್ರಯದಲ್ಲಿ ೮,೯ ಹಾಗೂ ೧೦ ರಂದು ಮುಂದಿನ ಮೂರು ದಿನಗಳ ಕಾಲ ನಡೆಯುವ ಮಹಿಳೆಯರ ವಾಲೀಬಾಲ್, ತ್ರೋಬಾಲ್ ಹಾಗೂ ಟೆನ್ನಿಕ್ವಾಟ್ ಪಂದ್ಯಾವಳಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯು ವಿವೇಕಾನಂದ ಸಂಸ್ಥೆಗಳ ಆವರಣದ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು. ಪಂದ್ಯಾವಳಿಯನ್ನು ಬಾಲಭವನ ಸೊಸೈಟಿ ಕರ್ನಾಟಕ ಸರಕಾರ ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಜಿ.ಕೆ.ಭಟ್ ಉದ್ಘಾಟಿಸಿ ಮಾತನಾಡುತ್ತಾ ದೈಹಿಕ ವ್ಯಾಯಾಮಕ್ಕೆ ಕ್ರೀಡೆ ಅಗತ್ಯ, ಕೇವಲ […]

ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಚಾರಣ ಕಾರ್ಯಕ್ರಮ

ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಚಾರಣ ಕಾರ್ಯಕ್ರಮ

Friday, February 24th, 2017

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ದಿನಾಂಕ 24-02-2017 ರಂದು ಹೆಬ್ರಿ ಕೂಡ್ಲುತೀರ್ಥ ಪ್ರದೇಶಕ್ಕೆ ಒಂದು ದಿನದ ಟ್ರೆಕ್ಕಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.  ಕಾರ್ಯಕ್ರಮವನ್ನು ಕೇವಲ ಮೋಜಿಗಾಗಿ ಸೀಮಿತವಿಡದೇ ಸೀತಾ ನದಿಯ ತಪ್ಪಲಿನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಚ್ಚತೆಯ ಬಗ್ಗೆ ಇತರ ಬಂದಿದ್ದ ಚಾರಣಾರ್ಥಿಗಳಿಗೂ ಅರಿವು ಮೂಡಿಸಲಾಯ್ತು. ಕಾಲೇಜು ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಹರೀಶ್ ರಾವ್, ಸಹಾಯಕ ಪ್ರಾಧ್ಯಾಪಕಿ ಕು|| ಶಕ್ತಿತ್ರಯ ಜತೆಗಿದ್ದರು.

ಕ್ರಿಮಿನಲ್ ದಾವೆಯ ಸ್ವರೂಪದ ಅಣುಕು ನ್ಯಾಯಾಲಯ

ಕ್ರಿಮಿನಲ್ ದಾವೆಯ ಸ್ವರೂಪದ ಅಣುಕು ನ್ಯಾಯಾಲಯ

Tuesday, February 21st, 2017

ದಿನಾಂಕ 21-2-2017 ನೇ ಮಂಗಳವಾರದಂದು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಅಣುಕು ನ್ಯಾಯಾಲಯ ಘಟಕದ ವತಿಯಿಂದ ಕ್ರಿಮಿನಲ್ ದಾವೆಯ ಸ್ವರೂಪದ ಅಣುಕು ನ್ಯಾಯಾಲಯವು ನಡೆಯಿತು. ಅಂತಿಮ ಕಾನೂನು ವಿದ್ಯಾರ್ಥಿಗಳು ಈ ಅಣುಕು ನ್ಯಾಯಾಲಯದಲ್ಲಿ ಪಾಲ್ಗೊಂಡರು. ನ್ಯಾಯಾಧೀಶರಾಗಿ ಪುತ್ತೂರಿನ ನ್ಯಾಯವಾದಿಗಳಾದ ಶ್ರೀ ಶ್ಯಾಂ ಪ್ರಸಾದ್ ಕೈಲಾರ್­ರವರು ಆಗಮಿಸಿದರು. ತದನಂತರ ಅವರು ಮಾತನಾಡುತ್ತಾ ಅಣುಕು ನ್ಯಾಯಾಲಯಗಳು ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಕಾನೂನು ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿ ಹಾಗೂ ನ್ಯಾಯಾಲಯದ ಕಲ್ಪನೆಯನ್ನು ಒದಗಿಸಿಕೊಡುತ್ತದೆ ಎಂದರು. ತದನಂತರ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಇವರು ಅತಿಥಿಗಳಿಗೆ […]

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆ

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆ

Tuesday, January 10th, 2017

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 10-1-2017 ರಂದು ಪದವಿಪೂರ್ವ ಹಾಗೂ ಪದವಿ ವಿಭಾಗದ ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯು ವು ವಿವೇಕಾನಂದ ಕಾನೂನು ಕಾಲೇಜು ಹಾಗೂ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ|| ಶ್ರೀಧರ್ ಹೆಚ್.ಜಿ. ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಭಾಗ ಮಾತನಾಡಿ ಭಾಷಣ ಎನ್ನುವುದು ಒಂದು ಕಲೆ, ಅದು ಎಲ್ಲರಿಗೂ ಬರುವಂಥದ್ದಲ್ಲ, ಒಬ್ಬ ಪ್ರಸಿದ್ಧ ವಾಗ್ಮಿಯಾಗಬೇಕಿದ್ದರೆ ಹಿರಿಯ ನಾಯಕರ ಭಾಷಣದ ಸಾಲನ್ನು ಆಲಿಸಿದರೆ ತನ್ನಲ್ಲಿ ಆ ಶಕ್ತಿ ಹಾಗೂ […]

ಉಪ್ಪಿನಂಗಡಿಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Friday, January 6th, 2017

6-1-2017 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾನೂನು ಕಾಲೇಜಿನ ಕಾನೂನು ನೆರವು ಘಟಕದ ಮುಖ್ಯಸ್ಥೆ ಹಾಗೂ ಉಪನ್ಯಾಸಕಿಯಾದ ಶ್ರೀಮತಿ ಅಕ್ಷತಾ ಎ.ಪಿ. ಸ್ವಾಗತಿಸಿ ಪ್ರಸ್ತಾವನೆಗೈದು ವೃತ್ತಿ ಮಾರ್ಗದರ್ಶನದ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಕಾಲೇಜಿನ ಅಂತಿಮ ಕಾನೂನು ಪದವಿ ವಿದ್ಯಾರ್ಥಿಗಳಾದ ಕು|| ವೈಭವಿ ಇವರು ಗ್ರಾಹಕರ ಹಕ್ಕುಗಳು ಹಾಗೂ ತೃತೀಯ ಕಾನೂನು ಪದವಿ ವಿದ್ಯಾರ್ಥಿ ತೇಜಸ್ ಇವರು ಮೂಲಭೂತ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Friday, January 6th, 2017

6-1-2017 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕುಂಬ್ರ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾನೂನು ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ಸಂಗೀತಾ ಸ್ವಾಗತಿಸಿ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದುಗ್ಗಪ್ಪ ರೈ ಅಧ್ಯಕ್ಷೀಯ ನೆಲೆಯಲ್ಲಿ ಮಾತುಗಳನ್ನಾಡಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಕಾಲೇಜಿನ ಉಪನ್ಯಾಸಕರಾದ ಶ್ರೀ ಕಾರ್ತಿಕ್ ಆನಂದ್ ರವರು ಕಾನೂನು ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನದ ಬಗೆಗೆ ಮಾಹಿತಿಯನ್ನು ನೀಡಿದರು. ಅಂತಿಮ ಕಾನೂನು ಪದವಿ ವಿದ್ಯಾರ್ಥಿಗಳಾದ ಕು|| ಸುಲತಾ ಮಹಿಳೆ ಮತ್ತು ಕಾನೂನು, […]

Highslide for Wordpress Plugin