Vivekananda Law College, Puttur, Dakshina Kannada

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪುತ್ತೂರು: ದೇಶಕ್ಕಾಗಿ ಹೋರಾಡುವ ಸೈನಿಕನ ಬಲಿದಾನ ಪತ್ರಿಕೆಯ ಸಣ್ಣ ತುಣುಕಾಗಿರದೆ ಎಲ್ಲರೂ ಸ್ಮರಿಸುವಂತಾಗಬೇಕು. ದೇಶ ಕಾಯುವ ಸೈನಿಕ ಹಾಗು ಅನ್ನ ಕೊಡುವ ರೈತ ಭಾರತದೇಶದ ಬನ್ನೆಲುಬು. ಪ್ರತಿ ವಿದ್ಯಾರ್ಥಿಯೂ ಇವರನ್ನು ಸ್ಮರಿಸಿ, ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಕರ್ನಲ್ ಸೊಡಂಕೂರು ಪಿ ರಮಾಕಾಂತನ್ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ಮಂಗಳೂರಿನ ವಕೀಲರಾದ ರವಿಚಂದ್ರ ಇವರು ಕಾರ್ಯಕ್ರಮದ  ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳು ಎನೇ ದೊಡ್ಡ ಪದವಿಯನ್ನು ಅಲಂಕರಿಸಿದರೂ ಕಡೆಗೆ ದೇಕ್ಕಾಗಿ ಹೋರಾಡಿದ ಧೀಮಂತರ ಬಗ್ಗೆ ಕೇಳಿದರೆ ಉತ್ತರಿಸಲಾರದ ಸ್ಥಿತಿ ಬರಬಾರದು. ದೇಶದ ಭವ್ಯ ಭವಿಷ್ಯಕ್ಕೆ ಕಂಕಣಬದ್ಧರಾಗಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ರಘುನಾಥ ರಾವ್, ಗಣೇಶ ಜೋಷಿ, ಪ್ರಭಾರ ಪ್ರಾಂಶುಪಾಲೆ ಜ್ಯೋತ್ಸ್ನಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ದೇಪಿಕಾ, ಶ್ರೇಯಾ, ಸಂಗೀತಾ ಪ್ರಾರ್ಥನೆಗೈದರು. ಪ್ರಭಾರ ಪ್ರಾಂಶುಪಾಲೆ ಜ್ಯೋತ್ಸ್ನಾ ಸ್ವಾಗತಿಸಿದರು. ವಿದ್ಯಾರ್ಥಿ ಕುಮಾರಸತ್ಯನಾರಾಯಣ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ನಾಸಿಯಾ ಬೇಗಂ ಕಾರ್ಯಕ್ರಮ ನಿರೂಪಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು.

Event Calendar

Mon
Tue
Wed
Thu
Fri
Sat
Sun
M
T
W
T
F
S
S
29
30
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
1
2
Highslide for Wordpress Plugin